ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


878 ®

       ಕರ್ನಾಟಕ ಕವಿಚರಿತೆ.       [17ನೆಯ
      
ಧಿಸಮಾಸಂ ಪೊಸತಾಗೆ ಕನ್ನಡದೊಳಾಕಂಜಾದ್ರಿಮಾಹಾತ್ಯ್ಮಮಂ ! ರಸಿಕರ್‌ ಮೆಚ್ಚಿ ಪೊಗಳ್ವಿನಂ ವಿರಚಿಕುಂ ಸನ್ಮಂತ್ರಿ ಲಕ್ಷ್ಮೀವರಂ ||

ಗ್ರಂಧಾವತಾರದಲ್ಲಿ ಕೃಷ್ಣಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ ಭೂದೇವಿ, ನೀಳ, ಅನಂತ, ಗರುಡ, ವಿಷ್ವಕ್ಸೇನ, ದಿವ್ಯಸೂರಿಗಳು, ರಾಮಾನುಜ ಇವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ ಇದು ಸತತನತಶತಧೃತಿಶಿತಿಗಳಶತಮಖಮುಖಸುರವಿತತಿವಿತತಕೋಟೀರಕೋಟಿ ತಟಘಟಿತ ಮಂಜುಮಾಣಿಕ್ಯ ಪ್ರಭಾಪುಂಜರಂಜಿತಕಂಜಗಿಂಗೋಪಾಲಚರಣಸರಸಿಜಸು ರುಚಿರನಖಮಯೂಇನಿಸ್ತಂದ್ರ ಸಾಂದ್ರಚಂದ್ರಿಕಾಲೋಲಚಕೋರ ರಾಜಾಧಿರಾಟ ರಾ ಜಪರಮೇಶ್ವರಾ ಪ್ರತಿಮಪ್ರೌಢಪ್ರತಾಪ ಬಿರುದೆಂತೆಂಬರಗಂಡ ಯಾದವಕುಲಾಂಬರ ದ್ಯುಮಣಿ ಯಶೋವಿಮಲಸುಮನಸ್ಸಮುದಯಸುರಭಿತಹರಿದಂತ ವೀರಶ್ರೀನರಪತಿ ಚಿಕ್ಕ ದೇವರಾಜರಾಜಿತಸುರಭೂಜಸಮಾಶ್ರಯನಿರತ ಶ್ರೀಚಿಕ್ಕು ಪಾಧ್ಯಾಯವಿರಚಿತಕಮಲಾಚ ಲಮಾಹಾತ್ಯ್ಮದೊಳ್. ಇವನ ಬಂಧವು ಲಲಿತವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ

           ವರ್ಷಾಕಾಲ
ಚಾರುತರ ಹಂಸಗಮನಕೆ | ಭೇರಿರವಂ ಕೇಕಿನಾಟ್ಯಢಕ್ಕಾ ನಿನದಂ || ನೀರದತೃಪಾಲಘನವಾ| ದ್ಯಾರಾವಂ ಮೊಳಗಿತೊಡನೆ ಮೇಘಧ್ವಾನಂ !! ಕಡುಕೂರ್ಪಿಂದುದಬಿಂದುಸಂಕುಲಮನಾದಂ ಚಂಚುವಿಂ ನುಂಗಿದ | ತ್ತೊಡನೋಲ್ದಂಘ್ರಿಗಳಿಂದ ಮೋದಿದುದು ನೀಡುಂ ಡುಂಬಂನಂಗೆಯ್ಯುದೋ ||

ರ್ಗುಡಿಸಿತ್ತೋಕುಳಿಯಾಡಿದತ್ತು ಕರ್ದುಕಿತ್ಯಾನಂದದಿಂ ಪಕ್ಷದಿಂ| ಜಡಿಯುತ್ತುಂ ಬಿದಿರ್ದತ್ತು ಮುತ್ಸಂಭ್ರಾಂತಕಂ ಚಾತಕಂ ||

    ವಸಂತ 

ಬರೆ ಮಧು ಜಾತಿ ಕೆಟ್ಟುದು ಕುಜಾಳಿ ಕೊನರ್ತುದು ಲಜ್ಜೆ ಪೋಯ್ತು ನಿ | ರ್ಭರಮದಮುಣ್ಮೆ ದತ್ತು ಕಡುನಿದ್ರೆ ತಳಿರ್ತುದು ಪ್ರೀತಿ ಸೆಚಿ೯ದ || ತ್ತುರುವಿರಹಂ ಚಿಗುರ್ತುದಳ' ವೋಡಿತು ಕಾಮುಕರುರ್ಬು ಸರ್ಬಿದ | ತ್ತುರವಣಿಸಿತ್ತು ಮಿತ್ರ ಕರಬಾಧೆ ಜಡೋನ್ಮನಮಾಯ್ತುಳಾತಳಂ ||