ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಚಿಕ್ಕು ಪಾಧ್ಯಾಯ. 475
ಸತ್ಕವಿ
ನಸುಬಿರಿದ ಪೂಗಳಿಂದಂ | ಪೊಸತೆನೆ ಸರಮಂ ನೆಗೞ್ಚುದಂತೆ ಸುಕವಿಗಳ್ | ರಸಮವೊಸರ್ವ ಕಬ್ಬಮಂ ವಿರ | ಚಿಸಿ ವಾಕ್ಪರಿಣತರ ಮನಮನಿೞ್ಕುಳಿಗೊಳ್ಗುಂ ||
ಸೂಳಗೇರಿ ಪುಸಿಯ ತವರ್ಮನೆರೌಳಿಯ | ಪಸರಂ ವಂಚನೆಯ ಬೀಡು ಕಪಟದ ನಿಳಯಂ | ಪಿಸುಣಾಟದಿರ್ಕೆಯೆನೆ ರಂ | ಜಿಸುತಿರ್ದುದು ಸೂಳೆಗೇರಿ ವಿಟತತಿಯಿಂದಂ ||
ರಾಮಾನುಜಸ್ತುತಿ ನೀರಂಧ್ರಪ್ರತಿಭಾವಿಭಾಸುರಕಳಾಪೂರ್ಣದ್ವಿಜೇಂದ್ರಂ ನಿರ | ಸ್ತಾರಿವ್ರಾತಮನೋರಧಂ ಹರಿಪದಾಸಕ್ತಂಲಸನ್ಮೂರ್ತಿ ದು || ರ್ವಾರಾಕೀರ್ಣತಮೋಪಹಂ ಕುವಲಯಕ್ಷೇಮಂಕರಪ್ರಕ್ರಿಯಂ | ಶ್ರೀರಾಮಾನುಜಚಂದ್ರನೀಗೆಮಗೆ ನಿರ್ದೋಷಾಮೃತೌತ್ಕಂರ್ಯಮಂ ||
ಚಿಕ್ಕದೇವರಾಜನ ಕೀರ್ತಿ ಮೃಗಲಕ್ಷ್ಮಂಮೊಗಮಂದಿರಾಪಗೆ ಕರಂ ಕೈಲಾಸಮಾಲಾನಮಾ | ಭಗಣಂ ಬಿಂದುಗಣಂ ಸುಧಾಬ್ಧಿ ಪದಪಾಶಂ ಸಾಂದ್ರಚಂದ್ರಾತಪಂ || ಬಗೆವಂದುಜ್ವಲಕಾಯಮಾಗಿರೆ ಯಶೋಮತ್ತೇಭವಿಕ್ರೀಡಿತಂ | ನೆಗೞ್ದತ್ತಚ್ಚರಿ ದೇವಭೂವರಸುತಶ್ರೀಚಿಕ್ಕದೇವೇಂದ್ರನಾ ||
3 ರುಕ್ಮಾಂಗದಚರಿತೆ
ಇದೂ ಚಂಪೂಗ್ರಂಧ; ಆಶ್ವಾಸ 10, ಪದ್ಯ 2286, ಇದರಲ್ಲಿ ನಾರದೀಯ ಪುರಾಣೋಕ್ತವಾದ ರುಕ್ಮಾಂಗದಚರಿತೆ ಹೇಳಿದೆ. ಇದು ಏಕಾದಶೀವ್ರತದ ಮಹಿಮೆಯನ್ನು ಬೋಧಿಸುತ್ತದೆ. ಗ್ರಂಧಾವತಾರದಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ಭೂದೇವಿ, ನೀಳಾದೇವಿ, ಅನಂತ, ಗರುಡ, ನಿಸ್ವಕ್ಸೇನ, ಶಂಖ, ಚಕ್ರ, ಕೌಮೋದಕಿ, ಪದ್ಮ, ಶಾರ್ಙ್ಗ, ನಂದಕ, 12 ಆಳ್ವಾರುಗಳು, ರಾಮಾನುಜ, ನಾರದಭೀಷ್ಮ ಶೌನಕ ಬಲಿ ಪ್ರಹಾದ ದಾಲ್ಭ್ಯ ಪರಾಶರರುಕ್ಮಾಂಗದಪುಂಡರೀಕ ವ್ಯಾಸಾಂಬರೀಷಾರ್ಜುನಾದಿ ಮಹಾ ವೈಷ್ಣವರು ಇವರುಗಳನ್ನು ಸ್ಮರಿಸಿದ್ದಾನೆ. ಆಶ್ವಾಸಗಳ ಕೊನೆಯಲ್ಲಿ ಇದು.......... ಶ್ರೀಮತ್ಕರಿವರದರಾಜಸುರುಚಿರಚರಣಸರಸಿಜಪರಮಭಕ್ತಿರ