ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

476 ಕರ್ಣಾಟಕ ಕಪಿಚರಿತೆ. [17 ನೆಯ


ಸಪರಿಲುಳಿತಾಂತರಂಗ......................ಚಿಕ್ಕದೇವಮಹಾರಾಜರಾಜಿತದಯಾಭಾಜನ ಶ್ರೀಚಿಕ್ಕುಪಾಧ್ಯಾಯವಿರಚಿತ ರುಕ್ಮಾಂಗದಚರಿತ್ರದೊಳ್ ಎಂಬ ಗದ್ಯವಿದೆ. ಈ ಗ್ರಂಧದ ಬಂಧವು ಪ್ರೌಢವಾಗಿದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇನೆ---

                                                                                   ಮೈಸೂರು
                                                     ವೀರದ ಮಂದಿರಂ ಬಿನಯದಂಗಡಿಯೊಳ್ಪಿನ ಪೇಟೆ ನವ್ಯಶೃಂ | 
                                                     ಗಾರದ ಸಾಗರಂ ಚಸದ ಚಾವಡಿಯೋಜೆಯ ಬೀಡು ಭಾಗ್ಯದೊ೦ ||
                                                     ದಾರವೆ ಸರ್ವಪುಣ್ಯದ ತವರ್ಮನೆಯೈಸಿರಿಯಾಗರಂ ಮಹೀ | 
                                                    ಶೂರಪುರಂ ವಿರಾಜಿಸಿತು ಭೂರಮಣೀಲಸದಂಘ್ರಿನೂಪುರಂ ||
                                                                                     
                                                                                    ಕಾವೇರಿ
                                                    
                                                    ಸತತಂ ಮಚ್ಚದಶೇಷಮಾನವರ್ಗೆ ಮುಕ್ತಿಶ್ರೀಯ ಸಂಮ್ಮೇಳನೋ | 
                                                    ನ್ನತಿಯಂಪೊರ್ದಿಪ ಸಂಶ್ರಿತಪ್ರಜೆಗಳಂ ಸೌಭಾಗ್ಯಸಂಪತ್ತಿನಿ ||
                                                    ರ್ಜಿತದೇವೇಂದ್ರರನಾಗಿಸುತ್ತೆ ವಿಲಸಚ್ಛ್ರೀರಂಗರಾಟ್ಕೇಕರ |
                                                    ದ್ಯುತಿಪೂತೋದಕಪೂರಿತಾಶಯೆ ಮಹಾಕಾವೇರಿ ಕಣ್ಗೊಪ್ಪುಗುಂ ||
                                                                                 
                                                                                  ಹಿಮಂತ
                                                    ಕಮಲಂ ಕುಮುದಂಬೆತ್ತುದು | ಕುಮುದಂ ವಿಗತಪ್ರಭಾಕಮಲಮುಕ್ತಂ ಸ |
                                                    ತ್ಕ್ರಮಮುಂ ವಿಕ್ರಮಮಾವಿ | ಕ್ರಮಮುಂ ಸತ್ಕ್ರಮಮೆನಿಸಿದುದಾಸಹಿ ಮದಿನದೊಳ್ ||
                                                                                ವರ್ಷಾಕಾಲ
                                                    ಜಲಜಾಪ್ತದೀಪ್ತಬಡಬಾ | ನಲರ ಚಿಚಾಜ್ವಲ್ಯಮಾನಗಗನಾಂಬುಧಿಯೊಳ್ |
                                                    ಜಲದನಿಲಧೂತಭಂಗಾ | ವಲಿಯಂತೆ ಪಯೋದಪಾಳಿ ಕರಮೆಸೆದಿರ್ಕುಂ  || 
                                                                              ನೀಳಾದೇವಿ
                                                   ನೀಲೆಯನಂಗೀಕೃತವರ | ಲೀಲೆಯನಬ್ಜಾತನಾಭಮಹಿಮೋದನ್ವ |
                                                   ದ್ವೇಲೆಯನಭಿನವಮುಕುರಕ | ಪೋಲೆಯನಾಂ ನುತಿಸಿ ಪಡೆವೆನೀಪ್ಸಿತಫಲಮಂ ||