ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶತಮಾನ] ಚಿಕ್ಕು ಪಾಧ್ಯಾಯ 481


                              ಕಾವೇರಿ 
       ತತಕೃಷ್ಣವೇಣಿಯುರರೀ | ಕೃತಪುಷ್ಕರೆ ವಿಧೃತತುಂಗಭದ್ರೆ ಮಹಾಗೋ || 
       ಮತಿ ಜಿತಭಾನುಜೆ ಸಸ್ಯಜೆ | ಸತತಂ ನದಿಗಳ ವಿಳಾಸನುಂ ತಳೆದಿರ್ಕು೦ ||
                             ಪರಬ್ರಹ್ಮ 

ವರಕೃಷಿವಾಚಕಶಬ್ಬವೆ | ಧರಣೇವಾಚಕಮೆನಿಕ್ಕುಮೆಸೆವ ಣಕಾರಂ | ಪರಿಕಿಸೆ ನಿವೃ೯ತಿಕಾರಣ | ಮೆರಡೊಂದಿರೆ ಕೃಷ್ಣಶಬ್ದಮದೆ ಪರಬೊಮ್ಮಂ || ಒಗೆದೂರ್ಣನಾಭಿ ಪುಟ್ಟಸಿ | ಮಿಗೆ ತಾನೇ ಕೊಳ್ವತೆರದೆ ಹರಿಯನಿತಂ ನೆ | ಟ್ಟಿಗೆ ಸೃಜಿಸಿ ಕಟ್ಟಕಡೆಯೊಳ್ | ಜಗಮನಿತಂ ತನ್ನೊಳೆಸೆದು ಲೀನಂಗೈಗುಂ ||

                            ಪ್ರಣವ 

ಶ್ರೀವರನಕಾರರೂಪಂ | ಶ್ರೀವಧುವೆ ಉಕಾರರೂಪೆಯೆನಿಕುಂ ಬುಧರಿಂ | ಭಾವಿಸೆ ಮುಕಾರಮಕ್ಕುಂ | ಜೀವಾತ್ಮಂ ಪಂಚವಿಂಶವರ್ಣ೦ ಪುರುಷಂ ||

                         8 ಅರ್ಧಪಂಚಕ 

ಇದೂ ಚಂಪೂರೂಪವಾಗಿದೆ, ಏತತ್ಕವಿಕೃತವಾಗಿರಬಹುದು ಎಂದು ತೋರುತ್ತದೆ. ಇದರಲ್ಲಿ ಸ್ವಸ್ವರೂಪ, ಪರಸ್ವರೂಪ, ಉಪಾಯಸ್ವರೂಪ, ಪುರುಷಾರ್ಥಸ್ವರೂಪ, ವಿರೋಧಿಸ್ವರೂಪ ಎಂಬ 5 ವಿಷಯಗಳು ನಿರೂಪಿಸಲ್ಪಟ್ಟಿವೆ. ಇದು ದ್ರಾವಿಡಭಾಷೆಯಲ್ಲಿರುವ ಗ್ರಂಥದ ಭಾಪ್ರಾಂತರವು, ಗ್ರಂಧಾವತಾರದಲ್ಲಿ ವರದರಾಜಸ್ತುತಿ ಇದೆ. ಈ ಗ್ರಂಥದಿಂದ ಒಂ ದೆರಡುಪದ್ಯಗಳನ್ನು ತೆಗೆದು ಬರೆಯುತ್ತೇವೆ-

                            ದೇವರು 

ಸಿರಿವೆರಸು ಯೋಗಿಮುಖಧ | ಕ್ತರ ಹೃದಯೆತ್ಪುಲ್ಕಕಮಲದಸರಾಕಾಶಾಂ | ತರವರ್ತಿಯಾಗಿ ದೀವ್ಯ | ತ್ಸುರಚರವಿಗ್ರಹಸಮೇತನಕ್ಕುತನೆಸಗುಂ ||

                            ಮುಕ್ಕರು

ಸ್ಟುರಿಪ ಪರಬ್ರಹ್ಮಾನಂ | ದರಸಾನ್ವಿತರಾಗಿ ಹರಿಯನಿನಿತೆಡೆವಿಡದಾರ್| ಸರಮಸ್ಥಾನದೊಳಿಸ೯ರ | ವರನೆ ಬುಧರ್ ಮುಕ್ಯರೆಂದು ಸೊಲ್ಲಿಪರಿಳೆಯೊಲಳ್ ||

                            ಬದ್ಧರು

ಸರದಾರಪರದ್ರವ್ಯನಿ | ಕರಾಪಹಾರನುನೊಡರ್ಚಿ ಸಂಸಾರವನಾರ್ | ಪೊರೆವರ್ ಭಗವದ್ವಿಮುಖರ | ವರನೆ ಬುಧರ್ ಬದ್ಧರೆಂದು ಸೊಲ್ಲಿಸುತಿರ್ಪರ್ ||