ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] 483 ಚಿಕ್ಕು ಪಾಧ್ಯಾಯ ಸ್ತುತಿಸಿದ್ದಾನೆ. ಅಧ್ಯಾಯಗಳ ಕೊನೆಯಲ್ಲಿ...ಕರ್ಣಾಟಕವಚನರಚನಾಭಿ ಧಾನಮಾದ ಯದುಗಿರಿಮಾಹಾತ್ಮ್ಯ ದೊಳ್-ಎಂದಿದೆ. - 11 ವೆಂಕಟಗಿರಿಮಾಹಾತ್ಮ್ಯ ಇದೂ ಗದ್ಯರೂಪವಾಗಿದೆ;ಆಶ್ವಾಸ 10- ಬ್ರಹ್ಮಾಂಡ ಪುರಾಣದ ಪುಣ್ಯ ಕ್ಷೇತ್ರಮಾಹಾತ್ಮ್ಯಖಂಡದಲ್ಲಿ ನಾರದನು ಭೃಗುಋಷಿಗೆ ಹೇಳಿದ ತಿರುಪತಿಯ ಮಹಿಮೆಯನ್ನು ಕವಿ ಕನ್ನಡಿಸಿದ್ದಾನೆ. 12 ಶ್ರೀರಂಗಮಾಹಾತ್ಮ್ಯ ಇದೂ ಗದ್ಯರೂಪವಾಗಿದೆ; ಅಧ್ಯಾಯ 10. ಇದರಲ್ಲಿ “ಸಕಲಪುರಾ ಣಸಾರಭೂತಮಾದ ಮಹೇಶ್ವರನಾರದಸಂವಾದಮಾದ 12000 ಸಂಹಿತೆಗಳುಳ್ಳ ಬ್ರಹ್ಮಾಂಡಪುರಾಣದಲ್ಲಿ ದಶಾಧ್ಯಾಯಪರಿಮಿತವಾದ ಶ್ರೀರಂಗಕ್ಷೇತ್ರದ ಮಾಹಾತ್ಮವು” ಹೇಳಿದೆ ಗ್ರಂಧಾರಂಭದಲ್ಲಿ ರಂಗೇಶಸ್ತುತಿಯಿದೆ. ಬಳಿಕ ಕವಿ ವರದರಾಜ, ಲಕ್ಷ್ಮಿ, 12 ಆಳ್ವಾರುಗಳು, ಭಾಷ್ಯಕಾರ ಇವ ರುಗಳನ್ನು ಸ್ತುತಿಸಿ ಚಿಕ್ಕದೇವರಾಜನ ಮತ್ತು ತನ್ನ ವಂಶಾವಳಿಯನ್ನು ಹೇಳಿ ಕಥೆಯನ್ನು ಆರಂಭಿಸಿದ್ದಾನೆ. ಗ್ರಂಥದ ಕೊನೆಯಲ್ಲಿ ಈ ಗದ್ಯವಿದೆ ಇದು ಸಕಲನೃಸಮಕ.ಟಮಣಿಗಣರುಚಿರುಚಿರಸದಮಳಪದಯುಗನಾದ ಚಿಕ ದೇವಮಹಾರಾಜೇಂದ್ರಪ್ರೇರಿತ ಕರಿವರದಚರಣಸರಸಿಜಮಧುಕರಾಯಮಾನಾನೂನಕ ರ್ಣಾಟಕ ಭಾಷಾಚತುರ ಚಿಕ ಪಾಧ್ಯಾಯವಿರಚಿತಮಪ್ಪ ಶ್ರೀರಂಗಮಾಹಾತ್ಮದೊಳ್. ಈ ಗ್ರಂಥದಿಂದ ಚಿಕ್ಕದೇವರಾಯನ ಸ್ತುತಿರೂಪವಾದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಸತತಂ ಶ್ರೀಚಿಕ್ಕದೇವೋರ್ವಿ ಪನೆಸಗುವ ದಾನಾಂಬುವಿಂ ಕೀರ್ತಿವಲ್ಲೀ | ತತಿ ಭೂಲೋಕಂಗಳಂ ವ್ಯಾಪಿಸಿ ಸುರನಗಮಂ ಪತ್ತಿಯಾವ್ಯೋಮಮಂ ಸ್ವೋ | ನೃತಿಯಿಂದಂ ಪರ್ಬಿ ತಾರಾಮುಕುಳನಿಕರಮಂ ಲಕ್ಷ್ಮಮತ್ತದ್ವಿರೇಫಾಂ| ಚಿತಚಂಚಚ್ಚಂದ್ರಪುಷ್ಪಸ್ತಬಕಮನಿರದಾಂತೇಂ ಜಗದ್ವ್ಯಾಪ್ತಮಾಯ್ತೋ ! 13 ಶೇಷಧರ್ಮ ಇದೂ ಗದ್ಯರೂಪವಾಗಿದೆ; ಅಧ್ಯಾಯ 25, ಹರಿವಂಶಕಲಿತವಾದ ಆಶ್ವಮೇಧಿಕಪರ್ವದಲ್ಲಿ, ಉಕ್ತವಾದ ಶೇಷಧರ್ಮವನ್ನು ಕವಿ ಚಿಕ್ಕದೇವ ರಾಜನ ಸಂತೋಷಾರ್ಥವಾಗಿ ಕನ್ನಡಿಸಿದಂತೆ ಹೇಳುತ್ತಾನೆ. ಗ್ರಂಧಾರಂ ಭದಲ್ಲಿ ವಿಷ್ಣು ಸ್ತುತಿ ಇದೆ,