ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

484 ಕರ್ಣಾಟಕ ಕವಿಚರಿತೆ [17 ನೆಯ 14 ಕಾವುಂದಕನೀತಿ ಇದು ಸಂಸ್ಕೃತಕಾಮಂದಕನೀತಿಗೆ ಗದ್ಯರೂಪವಾದ ಕನ್ನಡಟೀಕೆ; ಆಶ್ವಾಸ 8: ಈ ಟೀಕೆಗೆ ಉಪಾಧ್ಯಾಯನಿರಪೇಕ್ಷಾ ಎಂದು ಹೆಸರು. ಗ್ರಂ ಥಾದಿಯಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ರಾಮಾನುಜ ಇವರುಗಳನ್ನು ಸ್ಮರಿಸಿದ್ದಾನೆ. ಆಶ್ವಾಸಗಳ ಕೊನೆಯಲ್ಲಿ ಈ ಗದ್ಯವಿದೆ ಇದು ಸತತನತಶತಧೃತಿಶಿತಿಗಳಶತಮಖಮುಖಸುರವಿತತಿವಿಶತಕೋಟೀರಕೋಟೀ ತಟಘಟಿತಚಟುಲಹರಿನೀಲಮಣಿಸ್ತೋಮಾಭಿರಾಮಧಾಮರೋಲಂಬಜಾಲಮೇಳಿತಕಂದ ಳದರವಿಂದಾಮಂದಸುಂದರಮಂಗಳರಂಗನಾಧಚರಣಸುರುಚಿರನಖಮಯೂಖನಿಸಂದ್ರ ಸಾಂದ್ರಚಂದ್ರಿಕಾಲೋಲಲೀಲಾಚಕೋರ ಯಶೋವಿಮಲಸುಮಸಮುದಯಸುರಭಿಹರಿ ದಂತಾಪ್ರತಿಮಪ್ರತಾಪಸ್ರಚುರಪ್ರಭಾಪಲ್ಲವಸಮುಲ್ಲಸಿತಸಕಲವಿಬುಧನಿಕರಸಕರಮ ನೋರಥಪ್ರದಫಲಲಲಿತಚಿಕದೇವರಾಜರಾಜಿತಾನಲ್ಪ ಕಲ್ಪತರುಸಮಾಶ್ರಿತ ಲಕ್ಷ್ಮೀಪತಿರ ಮ್ಯಾಭಿಧಾನ ಚಿಕುಪಾಧ್ಯಾಯಸಚಿವಶಿರೋಮಣಿವಿರಚಿತಮಪ್ಪ ಕಾಮಂದಕನೀತಿಯೊಳ್ ಈ ಗ್ರಂಥದಿಂದ ಚಿಕ್ಕದೇವರಾಯನ ಖಡ್ಗವನ್ನು ವರ್ಣಿಸುವ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ ನಂದಿಕಮುರುಕೀರ್ತಿಲತಾ | ಕಂದಕಮತಿದಪಿ೯ ತಾರಿಭೂಭೃದ್ವನಿತಾ | ಕ್ರಂದಕಮಾಶ್ರಿತವಿಬುಧಾ |ನಂದಕಮಾ೩ಟ್ಗಿಮವನಿಸಂಕ್ರಂದನನಾ || 15 ಶುಕಸಪ್ತತಿ ಇದೂ ಗದ್ಯರೂಪವಾಗಿದೆ; ಗ್ರಂಥಸಂಖ್ಯೆ 70೧೧, ಇದು ಸಂಸ್ಕೃತ ಶುಕಸಪ್ತತಿಯ ಭಾಷಾಂತರವು, ಗ್ರಂಥಾದಿಯಲ್ಲಿ ವರದರಾಜಸ್ತುತಿ ಇದೆ. ಬಳಿಕ ಕವಿ ಲಕ್ಷ್ಮೀ , ವಿಶ್ವಕ್ಸೇನ, ಅನಂತ, ಗರುಡ, ಶಂಖ, ಚಕ್ರ, 12 ಆಳ್ವಾರುಗಳು, ರಾಮಾನುಜ, ಉಭಯವೇದಾಂತಂಗಳನಾನತಜನಕುಪದೇ ಶಂಗೈವ ಕಡಾಂಬಿ ಸಿಂಗರಾಚಾ ಇವರುಗಳನ್ನು ಸ್ಮರಿಸಿದ್ದಾನೆ. ಆಮೇಲೆ ಈ ಪದ್ಯವನ್ನು ಹೇಳಿ ಕಥೆಯನ್ನು ಆರಂಭಿಸಿದ್ದಾನೆ - ಶುಕಸಪ್ತತಿಯಂ ಪದೆದಾ | ಸುಕವಿತ್ವ ಧುರೀಣ ಚಿಕ್ಕಪಧ್ಯಾಯಸುಧೀ | ಮುಕುರಂ ಕನ್ನಡದಿಂದಾ | ರೈಕದಂಬಂ ಮೆಚ್ಚೆ ಪೇಟಿಲುಯದ್ಯೋಗಿಸಿದಂ || ಗ್ರಂಧಾಂತ್ಯದಲ್ಲಿ ಈ ಗದ್ಯವಿದೆ