ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

486

                ಕರ್ಣಾಟಕ ಕವಿಚರಿತೆ
                                                      
                                                    [17ನೆಯ

ರಂಗ ನಿನ್ನಯ ರಂಗುವಡೆದ ಜಂಪೆಯ ಚೆಲ್ಲು | ಮುಂಗುಡಿವರಿದು ಮುದದೊಳು| ಹಿಂಗದೆ ಹಿರಿಹಿರಿದಾಗಿಯೆನ್ನಯ ಹೃದ | ಯಾಂಗಣದೊಳಗಿರುತಿರ್ಕೆ || ಬೇವಿನುಡಿಗೆಯುಟ್ಟು ಬಾಯ ಬೀಗವನಿಟ್ಟು | ಕಾವಿಕಸ್ಪರೆಕಂತೆ ಯಾಂತು | ದೇವತಾಂಶಗಳಿ೦ ಮುಕ್ತ ಪಡೆವೆನೆಂಬ | ಗಾವಿಲರ್ಗೇಮ್ ಗತಿ ರಂಗ || ಪಂದಲೆವಚ್ಚಾನ ಪಸಿದೊ ವಲ್ಪಳೆದನ | ಕಂದುಗೊರಲನ ಮೂಲೆಗನ || ಸೌಂದರ್ಯಶಾಲಿರಂಗಗೆ ಸಾಟಿಯೆಂಬಾ | ಮಂದಭಾಗ್ಯರ ಮಾತು ನಿಜವೇ || ಸಿರಿ ಮಂಜಿನ ಪರಿ ಯವನ ಸುರಚಾಪ | ದಿರವಾಯು ನೀರ ಬೊಬ್ಬುಳಿಕೆ | ತರುಣಿಮಕ್ಕಳು ಮೇಘದೊಡ್ಡಣೆಯೆಂಬೀ| ಯರುವಿತ್ತು ಪೊರೆ ರಂಗಧಾಮ ||

19 ಪಶ್ಚಿಮರಂಗಸಾಂಗತ್ಯ ಪದ್ಯ 101. ಇದು ಶ್ರೀರಂಗಪಟ್ಟಣದ ರಂಗನಾಥದೇವರ ಸ್ತುತಿರೂಪವಾಗಿದೆ, ಕವಿ “ಶ್ರೀಪತಿಯ ಸ್ತುತಿಯ ಸಾಂಗತ್ಯಕತಕವಿದು ಬುಧರ್ಗೆ ಸುಶಾವ್ಯ” ಎನ್ನುತ್ತಾನೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ-- ಮಡುವಿನೊಳಗೆ ನೆ ಗಳೊಡನೊಡನಂಘ್ರಿಯ | ನಡೆಸಿ ನುಂಗಲು ಒಗದೊಡೆಯ | ಕಡೆಹಾಯಿಸೆನೆ ಕಾದ ಹರಿಯಲ್ಲದಿಲ್ಲೆಂದು | ಮುಡಿಗಿಕ್ಕಿದಪೆನಾಂಪರೊಳರೇ || ಜಗನ್ಮಯನನು ಪ್ರದಕ್ಷಿಣಮಾಡುವದೆಂತು | ಸೊಗಸಾದ ಸರ್ವತೋಮುಖಗೆ | ಮಿಗೆ ವಂದನೆಗೈವುದಾದ ದಿಕ್ಕಿನಲಿ ಸು |ಮ್ಮಗೆ ನೀನೆ ಗತಿಯೆ೦ಬುದುಚಿತ | -20 ಅಕ್ಷರಮಾಲಿಕಸಾಂಗತ್ಯ ಪದ್ಯ 10 :: ಇದು ರಂಗನಾಥದೇವರಮೇಲೆ ಕಕಾರಾದಿಯಾಗಿ ಕ್ಷಕಾರಪಠ್ಯಂತ ಅಕ್ಷರಮೊದಲಾಗಿಯೂ ಗುಣಿದಿಂದಲೂ ಕಲ್ಪಿಸಿ ಸ್ತುತಿಯಾಗಿ ಹೇಳಿದ ಸಾಂಗತ್ಯ; ಕವಿ “ನಾಮಸಂಕೀರ್ತನನಕ್ಷರವಾದಿಯಾದೀ ಮಹಾಗುಣಿತದಿಂದೊರೆದ ಮನೋಹರಸಾಂಗತ್ಯ” ಎನ್ನುತ್ತಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ... ಅನಘವನಪ್ರಮೇಯನನಪ್ರತಿಮನೆ | ನನಿವಿಷಾಧಿಪನಚ್ಯುತನ | ಅನುಪಮಗುಣನನಭೇದ್ಯ ವಿಕ್ರಮನನಾ | ನನುಸರಿಸುವೆನನವರತ || 1 ಈಸಾಂಗತ್ಯ ಹಿಂದೆ ಒಂದ ಪ್ರತಿಯಲ್ಲಿ ಕೇಶವಾದಿ 21 ನಾಮದ ಸಾಂಗತ್ಯವಿದೆ, ಪದ್ಯಗಳು 26 ಆಮೇಲೆ ಇದು ಆರಂಭಿಸುತ್ತದೆ. ಈ ನಾಮದ ಸಾಂಗತ್ಯವು ಚಿಕ್ಕು ಪಾಧ್ಯಾಯಕೃತವಾಗಿರಬಹುದು.