. ಕರ್ಣಾಟಕ ಕವಿಚರಿತೆ. [17ನಯ
ತುಒಯಕಾಲನು ಕಚ್ಚಿದರೆ ಕುಣಿದಾಡುವಂದಡಲಿ | ಆಧಿಕಧನಸಂಪತ್ತು ಯೌವನ | ವೊದಗಿರಲು ವನಿತಾದಿವಿಷಯ | ಸ್ಪದವೆನಿಸಿಯೊಡಲಱುಯದವಗಧ್ನಾತ್ಮವೇಕೆಂದ ll ಮಿಾನು ನೀರೊಳಗಿದ್ದೂಡೇನೈ | ಧ್ಯಾನವನು ಬಕ ಮಾಡಲೇನದು | ಕಾನನವನಾಶ್ರಯಿಸಿ ಮರ್ಕಟವಿದ್ದೊಡೇನಲ್ಲಿ l| ಮೌನದಲಿ ಕೋಗಿಲೆಯಿರಲ್ಕದ | ಕೇನುಫಲ ಸುಜ್ಞಾನವಿಲ್ಲದೆ | ಮೌನ ಮೊದಲಾದವಱೊಳೇನೆಲೆ ಮಗನೆ ಕೇಳೆಂದ || ತನ್ನ ಹಿತವನು ತಿಳಿಯಲಱುಯದ | ಕುನ್ನಿ ಬಱುದೇ ಬಯಸಿ ಬಯಲಿಗೆ | ಹೊನ್ನು ಹೆಣ್ಣೆಂದೆಂಬ ಗಂಟಲ ಗಾಳದಲ್ಲಿ ಸಿಲುಕಿ |l
ಬನ್ನಬಡುವನು ಭವಭವದಿ ಬಹು | ಜನ್ಮಜರೆಮರಣಾದಿದುಃಖದಿ | ಹಣ್ಣೆನುತ ಕಿಚ್ಚಿನಲಿ ಬೀಳುವ ಶಲಭದಂಡದಲಿ l|
ಒಡವೆಯುಳ್ಳದೆ ಮಡದಿಮಕ್ಕಳು | ಕಡುನುಮತೆಯನು ಮಾಱ್ಪರಾತಗೆ | ಬಡತನಗಳಡ ಸಿದೊಡೆ ಮೆಲ್ಲನೆ ಸಡಿಲತೊಡಗುವರು || ಬಿಡದು ಕಱು ಹಾಲಿರಲು ತಾಯನು | ಕಡೆಗೆ ಹೋಹುದು ಬತ್ತಿದೊಡೆ ತಾ | ಕೆಡುವಕಾಲಕ್ಕಾರಿಗಾರೈ ಮಗನೆ ಹೇಳೆಂದ |l
ಕನ್ನಡಭಾಷೆ ಸುಲಿದ ಬಾಳೆಯ ಹಣ್ಣಿನಂದದಿ | ಕಳೆದ ಸಿಗುರಿನ ಕಬ್ಬಿನಂದದಿ | ಅಳಂದ ಉಷ್ಣದ ಹಾಲಿನಂದದಿ ಸುಲಭವಾಗಿರ್ದ |l
ಲಲಿತವಹ ಕನ್ನಡದ ನುಡಿಯಲಿ | ತಿಳಿದು ತನ್ನೊಳು ತನ್ನ ಮೋಕ್ಷವ | ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳನ್ನೇನು ||
______________
ತಿಮ್ಮಕವಿ 1677
ಈತನು ಯಾದವಗಿರಿಮಾಹಾತ್ಮ್ಯ ವೆಂಕಟಗಿರಿಮಹಾತ್ಮ್ಯ ಪಶ್ಚಿಮರಂಗಮಾಹಾತ್ಮ್ಯ ಇವುಗಳನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ, ಜಮದಗ್ನ್ಯಗೋತ್ರದವನು ; ಶ್ರೀವೇಣುಗೋಪಾಲವಾದವನೇಜಾತಭಂಗಂ ಎಂದು ಹೇಳಿಕೊಂಡಿದ್ದಾನೆ ; ಮೈಸೂರು ದೊರೆಯಾದ ಚಿಕ್ಕದೇವರಾಜನ (1672-1704),ಆಶ್ರಿತನು. ಆತನ ಆಜ್ಞಾನುಸಾರವಾಗಿ ಅವನ