ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ರಂಗನಾಧ 491 ಮಲ್ಲಿಕಾರ್ಜುನದೇವರ ಅಂಕಿತದಲ್ಲಿ ಬರೆದಿದ್ದಾನೆ. ಇವನ ಗುರು ಭಕ್ತಿರ ಸಾಯನಕರ್ತೃವಾದ ಸಹಜಾನಂದನೇ (ಸು. 1650) ಆಗಿರಬಹುದೆಂದು ತೋರುತ್ತದೆ. ಹಾಗಿದ್ದಪಕ್ಷದಲ್ಲಿ ಕವಿಯ ಕಾಲವು ಸುಮಾರು 1675 ಆಗಬಹುದು.

       ಇವನ ಗ್ರಂಥ
                        ಅನುಭವಾಮೃತ
   ಇದು ಭಾಮಿನೀಶಟೆದೆಯಲ್ಲಿ ಬರೆದಿದೆ; ಅಧ್ಯಾಯ 11, ಪದ್ಯ 801. ಇದರಲ್ಲಿ "ಅಖಿಳವೇದಾಂತಾರ್ಥವನು ಸಂಗ್ರಹಿಸಿ ತೇಲುವೆ ಸಕಲರಿಗೆ ತಿಳಿ ವಂತೆ” ಎಂದು ಕವಿ ಹೇಳುತ್ತಾನೆ; ಪ್ರತಿಪಾದಿತವಾದ ವಿಷಯಗಳು ಅಧಿಕಾ ರನಿರ್ಣಯ, ವೈರಾಗ್ಯ, ತ್ವಂಪದನಿರ್ಣಯ, ತತ್ಪದನಿರ್ಣಯ, ಅಸಿಪದನಿರ್ಣಯ, ಸಪ್ತಭೂಮಿಕೆಗಳು, ಪರಮಾತ್ಮಪದನಿರ್ಣಯ, ಮಾಯಾಮಿಥ್ಯಾತ್ವ, ಜೀನತ್ರಯ, ಜೀವನ್ಮುಕ್ತಿ, ನಿರ್ಗುಣಾರಾಧನೆ, ಈ ವಿಷಯಗಳನ್ನು ಮೊದಲು ವೇದವ್ಯಾಸನು ಕುಕನಿಗೆ ಬೋಧಿಸಿದಂತೆ ಹೇಳಿದೆ, ಗ್ರಂಥಾವ ತಾರದಲ್ಲಿ ಶ್ರೀಗಿರಿಯ ಮಲ್ಲಿಕಾರ್ಜುನನ ಸ್ತುತಿ ಇದೆ, ಅಧ್ಯಾಯಗಳ ಕೂನೆಯಲ್ಲಿ ಈ ಗದ್ಯವಿದೆ_

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರಿಯ ಸಹಜಾನಂದಗುರುವರ ಪದಕ ಮಲಛ್ರ೦ಗಾಯಮಾನ ಸಹವಾಸಿಮಹಲಿಂಗರಂಗವಿರಚಿತಮಪ್ಪ ಅನುಭವಾಮೃತ ಗ್ರಂಧದಲ್ಲಿ. ಚಿದಾನಂದಾವದೊತನು (ಸು 1750) ಈ ಗ್ರಂಥವನ್ನು ಬಹಳ ಮಟ್ಟಿಗೆ ಅನುಸರಿಸಿ ತನ್ನ ಜ್ಞಾನಸಿಂಧುವನ್ನು ಬರೆದಂತೆ ತೋರುತ್ತದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-

                              ನೀತಿ

ಸತ್ಯಶೌಚಾಚಾರನಿರತರು | ಚಿತದಲಿ ನಿರ್ಮಲರು ನಿಸ್ಸಹ | ವೃತ್ತಿಯಲ್ಲಿ ವರ್ತಿಸುವರಾಶಾಪಾಶವರ್ಚಿತರು || ಉತ್ತಮೋತ್ತಮರಾದ ಗುರುಪದ | ಭಕ್ತಿಯುಕ್ತರು ಭವದ ಬೇರಸು | ಕಿತ್ತು ಬಿಸುಡುವ ನಿಪುಣರೇ ತತ್ವಾಧಿಕಾರಿಗಳು | ಮೊದಲೆ ಮರ್ಕಟ ಮೇಲೆ ಮದ್ಯದ | ಮದವೆದೆಯ ಹಿಡಿದಿರಲು ವ್ಯಳ |