ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ನಾಟಕ ಕವಿಚರಿತ. [17ನೆಯ ಪ್ರಧಮದಶಕದಲ್ಲಿ ಭರತ್ವಮಂ ಪೇಳುತ್ತಲಿದ್ದಾರೆ, ಪ್ರಥಮದಶಕದ ಪ್ರಧ ಮಗಾಧೆಯಲ್ಲಿ ಆಳ್ವಾರ್ ಸಮಸ್ತ ಕಲ್ಯಾಣಗುಣಾಕರನಾದ ಮಹೋಪಕಾರಕನಾದ ನಿತ್ಯಸೊರಿನಿರ್ವಾಹಕನಾದ ದಿವ್ಯಮಂಗಳವಿಗ್ರಹಯುಕ್ತನಾದ ಸ್ವಾಮಿಯ ಪಾದಾರ ವಿಂದಮನಾಶ್ರಯಿಸು ಎಂದು ತಮ್ಮ ಮನಮಂ ನಿಯೋಗಿಸುತ್ತಲಿದ್ದಾರೆ. ಉಯರ, ಇತರಾನೇದಾತಿಶಯಮಸತ್ಕ ಲ ಎ ಮಪಎ೦ತತಿಶಯಿತಮಾದಾನಂದಮುಳ್ಳ ವನಾವನೋ, ಅಜ್ಞಾನ೦ ಪೋಪಂತೆ ಪ್ರೀತಿರೂಪಮಾಗಿರ್ಪ ಜ್ಞಾನಮಂ ಕೊಟ್ಟು ಕೃಪೆಯಂ ಮಾಡಿ ದವನಾವನೋ, ವಿಸ್ಮ್ರುತಿಯೀದಿರ್ಪ ದಿವ್ಯಸೂರಿಗಳಿಗೆ ಸ್ವಾಮಿಯಾಗಿರ್ಪವನಾವನೋ, ಆತನ ಆಶ್ರಿತದುಃಖನಿವತ ಕಮಾದ ಜ್ಯೋತಿರ್ಮಯಮಾದ ಚರಣಾರವಿಂದಂಗಳನು ನಮಸ್ಕರಿಸಿ ಎಲೆಮನವೆ ಸ್ವರೂಪಸತೆಯ೦ ಪೊರ್ದು-ಎಂದು ಪಟರ್, ಈತನ ಉಳಿದ ಗ್ರಂಥಗಳು ನಮಗೆ ದೊರೆತಿಲ್ಲ. ನಮಗೆ ದೊರೆತ ಸಾಂಗತ್ಯರೂಪವಾದ ಮದನಮೋಹಿನಿಯಕಥೆಯ ಒಂದು ಪ್ರತಿಯ ಕೊನೆಯಲ್ಲಿ ತೆರಕಣಾಂಬಿಯ ರಂಗಪಂಡಿತರಾತ್ಮಜ | ನೊರೆದ ಮದನಮೋಹಿನಿಯಕಥೆ ! ಭಕ್ತವತ್ಸಲೆ ಮಹಾಲಕ್ಷ್ಮಿಯ ಸೇವಕ | ಲಕ್ಷ್ಮೀಪತಿ ಪೆಟೀದನಿದ || ಎಂದಿರುವುದರಿಂದ ಈ ಗ್ರಂಥವೂ ಏತತ್ಕವಿಕೃತವೆಂದು ತೋರುತ್ತದೆ. ಇದರಲ್ಲಿ ಸಂಧಿ 11 ಪದ್ಯಗಳು 887 ಇವೆ.

                     ರಂಗನಾಧ. ಸು. 1675
ಈತನು ಅನುಭವಾಮೃತವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿಯೆಂದು ತೋರುತ್ತದೆ,  ಇವನ ತಂದೆ ಸಹವಾಸಿವಂಶದ ಮಹಲಿಂಗ ದೆವ; ಗುರು ಪರಮಹಂಸಪರಿವ್ರಾಜಕಾಚಾರ ಸಹಜಾನಂದ, ಇವನಿಗೆ ರಂಗವಧೂತ ಎಂಬ ಹೆಸರೂ ಉಂಟು. ತನ್ನ ಗ್ರಂಥವನ್ನು ಶ್ರೀಗಿರಿಯ

1.ಉಯರ್ವಅವುಯರ್ ನಲಮುಡೈಯರ್ವ ಯವನರ್ವ|

 ಮಯರ್ವತ ಮದಿನಲಮರುಳಿರ್ನ ಯವನರ್ವ | 
 ಆಯರ್ವಾಋಮರಹಆಳದಿಪತಿ ಯವನರ್ವ | 
 ತುಯರಶುಡರಡಿ ತೋಟರ್ದೇ ಮನನೇ ||
 ಮೇಲೆ ಈ ಪದ್ಯದ ಆದಿಪದವನ್ನು ಮಾತ್ರ ಹೇಳಿ ವ್ಯಾಖ್ಯಾನವು ಬರೆದಿದೆ.