ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಚಿಕ್ಕುಪಾಧ್ಯಾಯ, 689 25 ರಂಗನಾಯಕರಂಕನಾಯಕೀಸ್ತುತಿಸಾಂಗತ್ಯ ಇದರಲ್ಲಿ 49 ಪದ್ಯಗಳಿವೆ, ಇದೂ ಏತತ್ಕವಿಕೃತವಾಗೀರಬಹುದೆ೦ದು ತೋರುತ್ತದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ, ಪಲೀನುಡಿಮಡದಿಯ ಸಿರಿಮುಡಿಯೆಡೆಯೊಳು | ತೊಳಗುವ ತೊಂಡೀಲಮಣಿಯ |ಚಲಧಿಸುತೆಯ ಕೊರಲ್ವಚ್ಚವನೆನ್ನರ್ದೆ | ಯೊಳಗಾವಗಮಾಂತಿಹೆನು || ಪೊಳೆವ ಪಣೆಯ ಪೊಗರೊಗುವ ನುಣ್ಗಲ್ಲದ | ಮೊಳೆವ ಮೊಗ್ಗೆಯ ಮೊನೆವಲ್ಲ | ತಳಿರ ತುಟಿಯ ತಾವರೆಗಣ್ಣನ ಮೊಗ | ಕೆಳಸಿ ಮುಂಬರಿದು ಮುದ್ದಿಪೆನು | ಅಡಿಯ ಕೆಂಪಿಗೆ ನುಣೊಡೇಯ ಬಣ್ಣಿಗೆ ಪೊ | ನ್ನುಡೆಯ ಪೆಂಪಿಗೆ ಪೂದಳೆದ | ಪೊಡೆಯು ತಂಪಿಗೆ ಮೊಗದೆಡೆಯ ಸೊಂಪಿಗೆ ಸಿರಿ | ಮುಡಿಯ ಕಂಪಿಗೆ ಮೋಹಿ

                                                        ಸುವೆನು|| ಚಲಧಿಸುತೆಯ ಮೈಯ ಪೊಗರ ಕುಂದಣದೊಂದು!ಕೆಳೆಯೊಳೆಸೆವ ನೀಲಮಣಿಯ! ಪಲೀನುಡಿವೆಂಡಿರ ತೊಂಡಿಲನನ್ನೆರ್ದೆ | ವಳಿಕುಭರಣಿಯೊಳಿಡುವೆನು || ಚಲನವಿಲ್ಲದ ಮಿಂಚುವಳ್ಳಿಯನೊಳಕೊಂಡ | ಕಳೆವೆತ್ತ ಕಾರ್ಮುಗಿಲಂತೆ |ಚಲನಿಧಿಸುತೆಯ ಸೇರುವೆಯೊಳಿಂದೊಪ್ಪುವ | ನಳಿನಾಕ್ಷಗೆ ನಮಿಸುವೆನು || ಜಡನು ಜಾಣನು ಬಡವನು ಬಲ್ಲಿದನಾ | ಳೊಡೆಯನೆಂಬೀಭೇದಗಳ | ಕುಡುವುರ್ವಿನ ಕುಣಿಹದೊಳೆಸಗುವ ಸಿರಿ | ಮಡದಿಯ ಮನವೊಕ್ಕಿಹೆನು || ಪೊಂಗುವಿಂಗಡಲಿನುತ್ತುಂಗತರಂಗದ | ಪಾಂಗಿನಪಾಂಗವೀಕ್ಷಣೆಗೆ | ಮಂಗಳದೇವತೆಗೆಯಗುವೆ ಪಶ್ಚಿಮ | ರಂಗನಾಚಾರಮ್ಮನಿಗೆ ||
            26 ಕೃ೦ಗಾರದ ಹಾಡುಗಳು
ಇದರಲ್ಲಿ 62 ಹಾಡುಗಳಿವೆ; ಚಿಕ್ಕದೇವರಾಜನ ಸ್ತುತಿರೂಪವಾಗಿವೆ.
                 27 ತಿರುವಾಯೊಳೀಟೇಕೆ

ಇದು ನಮಾಳಾವರೆ೦ಬ ಶಠಕೋಪಯೋಗಿಯಿಂದ ರಚಿತವಾದ ತಿರುವಾಯಾಳೇಯಯೆ೦ಬ ದ್ರಾವಿಡಪ್ರಬಂಧದ ವ್ಯಾಖ್ಯಾನ. ಕೊನೆಯಲ್ಲಿ ಈ ಪದ್ಯವಿದೆ ಅರವಿಂದಾಂಬಕಭಕ್ತಾ ! ಭರಣಂ ಚಿಕದೇವಸಚಿವಚಿಕುಪಾಧ್ಯಾಯಂ |ತಿರುವಾಯಿಮೊಳಿಗೆ ಟೀಕಂ | ವಿರಚಿಸಿದಂ ವಿಶದಮಾಗೆ ಕನ್ನಡದಿಂದಂ || ಈ ಗ್ರಂಥದಿಂದ ಒಂದು ಪದ್ಯದ ಟೀಕೆಯನ್ನು ತೆಗೆದು ಬರೆಯು ತೇವೆ_ 69