ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕರ್ಣಾಟಕ ಕವಿಚರಿಕೆ

                                                                   [17 ನೆಯ
                          23 ಚಿತ್ರಶತಕಸಾಂಗತ್ಯ 

ಇದರಲ್ಲಿ ಕನ್ನಡಭಾಷೆಯವಿಷಯವಾಗಿ ಕೆಲವು ಚಮತ್ಕಾರೋಕ್ತಿ ಗಳಿವೆ; ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಮೂರಡಿನೆಲಕಾಗಿಯೆಳೆಬಾನಳೆದು ಮುಗಿ | ಲ್ದೇರಗೈಸಿರಿಯಾಯುತೊಡನೆ | ಕೂರನೆನಿಸಿ ಚುಕ್ಕಿಗುವರರನೆಳ್ಬುದ | ಕಾರೊಡನೆ ಎನ್ನ ಸಲಹು || ಹುರಿಯೋಡ ಸಿರಿವಂತಿಗೆಯೆದೆಂಬುದು | ನರನ ಪಾರುವನೆಂದೆಂಬುದು | ಮರಗೆತ್ತುವನನೋಜನೆಂದೆಂಬುದೇನ | ಚ್ಚರಿ ರಂಗ ಕನ್ನಡದೊಳ್ಪು || ಸರಸನನರಸನೆಂಬುದು ಪೂರ್ಣಗೃಹವನ | ಅರಮನೆಯೆಂದುಸುರುವುದು | ನರಸಕುಮಾರನನರಮಗನೆಂಬುದೇ | ನೊರೆ ರಂಗ ಕನ್ನಡದೊಳ್ಪ || ಮುಳ್ಳಿಂಗೆ ಮೊನೆಯುಂಟೆ ಎಳ್ಳಿಂಗೆಣ್ಣೆಯದುಂಟೆ | ಕಳ್ಳಿಂಗೆ ಮೈಮರಹುಂಟೇ | ಜಳ್ಳಂಗೆ ಬೆಳೆಯುಂಟೆ ಜಡಕೆ ನೆನಹ ದುಂದೆ | ಒಳ್ಳಿತೀ ಗುಟ್ಟುಲಿ ರಂಗ | ಮುತ್ತಿರೆ ನರೆಯೆಂಬ...... | ಕತ್ತಿಯ ಕಂತು ಗೇಣೆಂಬ | ಪತ್ತಿಯ ನೂಲೆಂಬ ಕನ್ನಡದೊಳು ರಂಗ | ಮತ್ತಿನ ಮಾತು ಪಾಸಟಿಯೇ || ಮಾರಗಿಗ್ಗೈ ಯೆಂಬ ನಾರಿಗೆ ಕೊಪ್ಪೆಂಬ | ಸಾರಿಗೆ ಹಾಸಂಗಿಯೆಂಬ | ಕೂರಿಗೆ ಹೊಲಕೆಂಬ ಕನ್ನಡ ಮಾತಿನ | ದಾರಿ ಬೇರಲ್ತೆ ರಂಗೇಶ || ತೊಡರಾಭರಣವೆಂಬರ್‌ ಪಿಡಿ ಕುಣಿಯದೆಂಬರ್‌ | ತಡೆಯೆಂಬರುರಗಮಂತ್ರವನು | ನುಡಿಯೆಂಬರು ನಿಂದೆಯ ಕನ್ನಡದೊಂದು | ಬೆಡಗದು ಬೇಡ ರಂಗೇಶ |

                      24 ರಂಗಸ್ವಾಮಿಯ ಶೃಂಗಾರಸೂತ್ರೋದಾಹರಣೆ

ಇದರಲ್ಲಿ ರಂಗಸ್ವಾಮಿಯಮೇಲೆ ಶೃಂಗಾರವಿಷಯವಾಗಿ ಹೇಳಿದ ಸೂತ್ರಪದಗಳಿವೆ. ಹಾಡುಗಳಲ್ಲಿ ಚಿಕ್ಕದೇವರಾಯನ ಮತ್ತು ರಂಗನಾಥನ ಅಂಕಿತಗಳಿವೆ. ಸೂತ್ರಗಳು ಕಂದರೂಪವಾಗಿವೆ. ಈ ಗ್ರಂಥದಿಂದ ಕೆಲವು ಸೂತ್ರಗಳನ್ನು ತೆಗೆದು ಬರೆಯುತ್ತೇವೆ... ಕ್ರಮದಿಂ ದ್ವಾದಶವರ್ಷ | ಪ್ರಮಾಣದೊಳ್ ಮುಗ್ಡೆ ಮಧ್ಯೆ ತದ್ದ್ವಿಗುಣದಿನಾ | ಸಮಕಟ್ಟಿಂದಂ ತ್ರಿಗುಣ| ಪ್ರಮಿತಾಬ್ದದೊಳಂ ಪ್ರಗಲ್ಭೆಯೆನೆ ಪೆಸರ್ವಡೆಗುಂ || ನಯನರತಿ ಚಿಂತ ಸಂಕ | ಲ್ಪಯುತಂ ಜಾಗರತೆ ಕಾಶ್ಯ೯ಮರತಿಯೆ ಮಾನಂ || ಪ್ರಿಯೆಯ ವಿವೋಹಂ ಮೂರ್ಛಾ | ಶ್ರಯಮರಣಮಿನಿಂತವಸ್ಥೆ ದಶವಿಧಮಕ್ಕುಂ||