ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕರ್ಣಾಟಕ ಕವಿಚರಿತೆ. [ನೆಯ 2 ಪಶ್ಚಿಮರಂಗಮಾಹಾತ್ಮ ಇದೂ ಚಂಪೂರೂಪವಾಗಿದೆ; ಆಶ್ವಾಸ . ಇದರಲ್ಲಿ ಶಿವನು ನಾರ ದನಿಗೆ ಹೇಳಿದ ಗೌತಮ ಕ್ಷೇತ್ರದ ಅಥವಾ ಶ್ರೀರಂಗಪಟ್ಟಣದ ಮಹಾತ್ಮ ವು ಹೇಳಿದೆ. ಗ್ರಂಥಾವತಾರದಲ್ಲಿ ಪಶ್ಚಿಮರಂಗಸ್ತುತಿ ಇದೆ, ಬಳಕ ಕವಿ ಪಶ್ಚಿಮರಂಗನಾಯಕಿ, ಭಾಷ್ಯಕಾರ, ಶುಕ ಇವರುಗಳನ್ನು ಹೊಗಳಿ ದ್ದಾನೆ. ಆಶ್ವಾಸಗಳ ಕೊನೆಯಲ್ಲಿ ಈ ಗದ್ಯವಿದೆ

  • ಇದು. .. ... ..... ... . .ಶ್ರೀವೀರಚಿಕ್ಕದೇವಮಹಾರಾಜಕೃಪಾರಸಾಶ್ರಯ ಸಚಿವಾಗ್ರಣಿ ಚಿಕುಪಾಧ್ಯಾಯನಿರೂಪಣದಿಂ ಕವಿತಿಮ್ಮ ಪ್ರಣೀತವಾದ ಕರ್ಣಾಟ ಕಭಾಷಾಲಸಿತ ಪಶ್ಚಿಮರಂಗಮಾ ಹಾತ್ಮ ದೊಳ್

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಸಮುದ್ರ ತೆರೆವೊಯ್ಲಿಂದೊಡೆಯುತ್ತು ಮಿರ್ಪ ಘ ನಶಕ್ತಿವ್ರಾತದಿಂದೇ ವ್ವಿಭಾ | ಸುರಮುಕ್ತಾನಿಚಯಂ ಸುಮಾಂಜಲಿ ತದೀಯಧ್ವಾನಮೇ ಮಂಜುವಾ | ದ್ಯರವಂ ವೀಚಿಯ ನೀಳ್ದ ನಲ್ಲೆರ ಮಹೌರ್ವಾಭಂ ಲಸದ್ದೀಪಮಾ | ಗಿರೆ ವಾರಾಶಿ ತರಂಗಿಣೀನಟಿಯ ರಂಗಸ್ಥಾನದಂತೊಪ್ಪುಗುಂ | - ಚಾಮುಂಡಿಯಬೆಟ್ಟ. ಪಿರಿದುಂ ಖಗಸ್ವನ್ಮ ಮೇ 1 ಘರವಂ ನವಧಾತು ಮಿಂಚು ನಿರ್ಝರಜಲಶೀ | ಕರತತಿ ಮಟಯೆನೆ ಕಾರಿಂ ತಿರೆ ಮಿಗೆ ಚಾಮುಂಡಿಯಿರ್ಪ ಗಿರಿ ಕಣ್ಗೊಳಿಕುಂ|| `ರಂಗನಾಥಸ್ತುತಿ ಸುರಮಾನವತಿರಕ್ ಸ್ಥಾ | ವರಾತ್ಮ ಕಮೆನಿಪ್ಪ ವಿಶ್ವ ಮೆಲ್ಲಂ ನಿನಗಿಂ || ವಿರೆಯಾಣ್ಮ ಶರೀರಂ ನೀ೦ | ಶರೀರಿಯೆನಿಸಿರ್ಪೆ ಮತ್ತ ಮದುಕಾರಣದೀ || ಭಾಷ್ಯಕಾರ ಅರಿಷಡ್ವರ್ಗಮನೊತ್ತಿ ನೂಂಕಿ ತಗುಳ್ದಾ ಶಾಬಂಧಮಂ ದುರ್ಗುಣೋ | ತ್ಕರಮಂ ಭಂಗಿಸಿ ಕಿಲ್ಬಿಷಪ್ರತತಿಯು ಮೀಡಾಡಿಯಾತ್ಯಾಂಘ್ರಿಪಂ | ಕರುಹೋಪಾಸನತತ್ಪರರ್ಗ್ಗೆ ನಿಜಭಕ್ತಿ ಜ್ಞಾನವೈರಾಗ್ಯಮಂ | ಸಿರಿದುಂ ಬೋಧಿಪ ಭಾಷ್ಯಕಾರರಡಿಗಾಂ ಸಾಷ್ಟಾಂಗದಿಂ ವಂದಿಪೆಂ || 3 ವೆಂಕಟಗಿರಿ ಮಾಹಾತ್ಮ ಇದೂ ಚಂಪೂರೂಪವಾಗಿದೆ; ಆಶ್ವಾಸ 10 , ಕಂದ 190, ವೃತ 285, ವಚನ 31, ಒಟ್ಟು 502, ಇದರಲ್ಲಿ ಬ್ರಹ್ಮಾಂಡಪುರಾಣದೊಳಗೆ