ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಮಲ್ಲರಸ 811 ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ ಕವಿಯ ಕಾಲವು ಸುಮಾರು 1680 ಆಗಬಹುದು

          ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ-

ಕವಿಕುಲಕಾಂ ನಮಸ್ಕರಿಪೆ ಯುಕ್ತಿನಿವಾಸಗೆ ಕಾಳಿದಾಸಗಂ | ನವರಸಭೂಷಹಂಪೆಯಹರೀಶಗೆ ಕೀರ್ತಿಲಸತ್ಪ್ರಕಾಶಗಂ | ಭುವನ............ಭದ್ರಗೆ ಸತ್ಕವಿರಾಯರುದ್ರಗಂ | ತನೆ ಕವಿಸಾರ್ವಭೌಮಶುಕರೂಪೆಗೆ ... .......... || ತನ್ನ ಗುಣಾದಿಗಳನ್ನು ಕವಿ ಈ ಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ- ಹರಿಪದಪದ್ಮಭೃಂಗನವನೀಸುರಸದ್ಗು ರುಸೇವ್ಯನವ್ಯವಿ ! ಸ್ತರಶುಭಚಿತ್ತನುತ್ತಮಚರಿತ್ರಲಸನ್ಮೃ ದುವಾಕ್ಯಭಾವಒಂ || ಧುರರಸರೀತಿಮಾರ್ಗವರಸಜ್ಜನಬಂಧುವಿಲಾಸಮೂರ್ತಿಭಾ | ಸುರತರಕಲ್ಪಭೂರುಹಲಸತ್ಕ ವಿಮಲ್ಲರಸಾಂಕಪಂಡಿತಂ || ಎಸೆವ ಪದಂ ಸುಶಬ್ದಮಣಿನೂಪುರದಿಂ ಮಿಗೆ ತೋರೆ ಭಾವದ ) ಲ್ಲೆಸೆವತಿಜಾತಿವಸ್ತ್ರದೊಳೆ ವೃತ್ತಕುಚಂ ರಸಗಂಧದಿಂ ಸಡಾ || ಪೊಸದೆನಿಪಾಕಚಂ ಸಕಲಕನ್ನಡವೂಗಳಿನೊಪ್ಪೆ ಕಬ್ಬಮೆಂ | ಬಸಿಯಳನಿಂತು ಸಿಂಗರಿಸಿ ರಾಜಿಸುವಂ ಕವಿರಾಜಮಲ್ಲುಗಂ || ಇವನ ಗ್ರಂಥ

                        ದಶಾವತಾರಚರಿತೆ
ಇದು ಚಂಪೂಗ್ರಂಥ; ಆಶ್ವಾಸ 11, ವೃತ್ತವಚನಸಹ 1179. ಇದ ರಲ್ಲಿ ವಿಷ್ಣುವಿನ ಹತ್ತು ಅವತಾರಗಳು ವರ್ಣಿತವಾಗಿವೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ..

ಕವಿಗಳ ಕರ್ಣರಸಾಯನ | ಮವಿರಳವಿದ್ವಾಂಸರಾನನಾಬ್ಜ ದಿನೇಶಂ | ನವರಸಿಕರಜಿಹ್ವಾಮೃತ | ಮವನಿಯೋಳೀಕಾವ್ಯವೆಂದು ನುಡಿವುದು ಲೋಕಂ ||

         ಇದರಲ್ಲಿ ಕಾವ್ಯದ 18 ಅಂಗಗಳನ್ನೂವರ್ಣಿಸಿರುವಂತೆ ಹೇಳುತ್ತಾನೆ ಅಲ್ಲದೆ ಇದು ಹರಿಪದಸಂಕೀರ್ತನೆಯಾದರೂ ಇದರಲ್ಲಿ ಅಳಕುಳಕ್ಷಳದ ನೇಮಗಳನ್ನೂ ಸದಲಂಕಾರರಸಗಳನ್ನೂ ಒದವಿಸಿರುವುದಾಗಿ ಈ ಪದ್ಯದಲ್ಲಿ ಹೇಳುತ್ತಾನೆ:-