ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

612 ಕರ್ಣಾಟಕ ಕವಿಚರಿತೆ, [17 ನೆಯ

ಇದು ಹರಿಪದಸಂಕೀರ್ತನೆ | ಯದರುಂದಂ ಅಳಕುಳಕ್ಷಳದ ನೇಮಗಳಂ | ಸದಲಂಕಾರರಸಂಗಳ | ನೊದವಿಸಿತಿಲ್ಲೆನ್ನಬೇಡ ಸುಪ್ರೌಢಜನಂ ||

ಗ್ರಂಥಾವತಾರದಲ್ಲಿ ವಿಷ್ಣು ಸ್ತುತಿ ಇದೆ. ಬಳಕ ಕವಿ ಲಕ್ಷ್ಮಿ , ಈಶ್ವರ, ಪಾರ್ವತಿ, ಗಣೇಶ, ಪರಾಶರಭೀಷ್ಮವಿಭೀಷಣನಾರದರುಕ್ಮಾಂಗದ ಸನಕಾದಿಗಳು ಇವರುಗಳನ್ನು ಸ್ತುತಿಸಿದ್ದಾನೆ. ಆಶ್ವಾಸಾಂತ್ಯದಲ್ಲಿ ಈ ಗದ್ಯವಿದೆ- ಇದುವೃಂದಾರಕವೃಂದಮಣಿಖಚಿತಮಕುಟರಂಜಿತಶ್ರೀಮದಾದಿನಾರಾಯಣ ಶ್ರೀಚರಣಸರಸಿರುಹಮಕರಂದಷಟ್ಚರಣ ಸಲ್ಲಲಿತಮಲ್ಲರ ನಾಂಕವಿರಚಿತಮಪ್ಪ ದಶಾವ ತಾರಚರಿತ್ರಮಹಾಪ್ರಬಂಧದೊಳ್

        ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                          ಕಾಳಕೂಟ
ಎರಗಿತ್ತೊತ್ತಿತ್ತು ಪೊಯ್ದತ್ತಡಸಿತುಳುಬಿತುರ್ಬಿತ್ತು ಮೆಟ್ಟಿತ್ತು ಸುಟ್ಟಿ | ತ್ತರೆಯಟ್ಟಿ ತ್ತೆತ್ತಿ ಮುತ್ತಿತ್ತ ಹಿಸಿತೊರಿಲಿಸಿತ್ತಾಲಿಸಿತ್ತಂಬಿಸಿತ್ತಾ | ಮರೆಹಂ ಸೂಸಿತ್ತು ದೇವಾಸುರಮನುಮುನಿಲೋಕೇಶರಂ ಸುತ್ತಿ ಕಿಚ್ಚಂ | ಕರೆಯಿತ್ತೆನೆಂಬೆ ಭೋರ್ಭೋರ್ಭುಗಿಲುಸಿಮಿಸಿಮಿಧ್ವಾನದಿಂ ಕಾಲಕೂಟಂ |
                           ಊಟ
ಉಪ್ಪಿನಕಾಯಂ ನಾನಾ|  ಹಪ್ಪಳಸಂಡಗೆಯ ಬಾಳುಕಂಗಳ ನಲವಿಂ | ದೊಪ್ಪುವ ರಸಾಯನಂಗಳ |ತಪ್ಪದೆಬಡಿಸಿದರು ಚಂದ್ರಮುಖಿಯರ್ ಸಖಿಯರ್‌ ||

ಅನ್ನಂ ರಾಜಾನ್ನಂ ಪರ | ಮಾನ್ನಂ ಪರಿಪರಿಯ ಕಲಸಿದನ್ನಂಗಳುಮಂ | ಬಿನ್ನಾಣದಿಂದೆ ಸಖಿಯರ್ | ಸನ್ನು ತರಾಜರ್ಗೆ ಬಡಿಸಿದರ್' ಸಂತಸದಿಂ ||

                            ಮುಡಿವಾಳ
ಬೇರಂ ಬಲ್ಲಗ್ಗೆ೯ಲೆಯಂ | ತೋರುವೆ ನೀನೆನುತೆ ಬಂದು ಮುಡಿಯಾಳದ ಬ |  ಲ್ಬೀರಂ ಪರಿಮಳಗಳ ನಿಡು | ಬೇರಂ ತೆಗೆವಂತೆ ತೆಗೆದರಾ ಕೋಮಲೆಯರ್ |
                         ಚಂದ್ರೋದಯ
ಅರಳುತಿರೆ ಕುಮುದನಿಚಯಂ | ಕರಗುತ್ತಿರೆ ಚಂದ್ರಕಾಂತಮಂಬುಧಿ ಪೆರ್ಡು | ತ್ತಿರಲು ಚಕೋರೌಘಕ್ಕಂ | ಹರುಷಂ ಮಿಗಿಲಾಗಲಿಂದ:ವುದಯೆಂಗೆಯ್ದಂ|| ಅಗಲುವ ಪೊಣರ್ವಕ್ಕಿಯುಮಂ | ಮುಗಿವಬ್ಚವ ವಿರಹದಿಂದೆ ವಿಕಳತೆಗೊಳ್ವಾ | ಮುಗುಧೆಯರ ತಂಡಮಂ ಮಿಗೆ | ನಗುವಂತಿರೆ ನೈದಿಲೈದಿದುವು ವಿಕಸನಹುಂ ||