ಶಿಶd ಕರ್ಣಾಟಕ ಕವಿಚರಿತೆ. [37 ನೆಯ ಸಂಪಾದನೆಯ ಪರ್ವತೇಶ್ವರ, 1698 ಈತನು ಚತುರಾಚಾಪುರಾಣವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ, ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ ತೋಂಟದ ಸಿದ್ಧಲಿಂಗ; ಶಿಷ್ಯ ಗುರುವಿನನುಪಮವೀಟಿಕಾಪ್ರಸಾದದ ಮಹಿಮ ಸರಸಾನುಭವ' ನಾದ ಬೋಳಬಸವ; ಶಿಷ್ಯ ಚೆನ್ನಾಚಾರ; ಶಿಷ್ಯ ಮಲಯಗುರು ಶಾಂತ ಶಿಷ್ಯ ವೀರಶೈವಾಚಾರಸಂಗ್ರಹಕರ್ತೃವಾದ “ಜಳೆದುಶೈವವ ವೀರಶೈವಮಂ ಸ್ಥಾಪಿಸಿದ” ಸಂಪಾದನಾಸಿದ್ದ ವೀರೇಶ, ಶಿಷ್ಯ ಚೆನ್ನಮಲ್ಲಿಕಾರ್ಜುನದೇವ, ಶಿಷ್ಯ ಕವಿ ಸಂಪಾದನೆಯ ಪರ್ವತೇಶ್ವರ, ಈ ಗ್ರಂಥವನ್ನು ಶಕ 1619 ನೆಯ ಈಶ್ವರವರ್ಷದಲ್ಲಿ ಎಂದರೆ 1698 ರಲ್ಲಿ-ಬರೆದಂತೆ ಹೇಳುತ್ತಾನೆ. - ಪೂರ್ವ ಕವಿಗಳಲ್ಲಿ ಬಾಣ, ಕಾಳಿದಾಸ, ಮಯೂರ, ಹರೀಶ್ವರ, ಪದ್ಮರಾಜ, ಪಾಲ್ಕುರಿಕೆ ಸೋಮು, ಮಲುಹಣ, ಕೇಶಿರಾಜ ರಾಘವ, ಮ' ಯರಾಜ, ಗರ್ಜರ, ಹಲಾಯುಧ, ಮಾಯಿದೇವಾಚಾರ, ಚಾಮರಸ, ಜಕ್ಕಣ್ಣ, ನಿಜಗುಣ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಗ್ರಂಥ ಚತುರಾಚಾರ್ ಪುರಾಣ ಅದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಕಾಂಡ 6, ಸಂಧಿ 54, ಪದ 3187. ಇದರಲ್ಲಿ ರೇಣುಕ, ಮರುಳುಸಿದ್ದ, ಏಕೋರಾಮ, ಪಂಡಿತಾರಾಧ್ಯ ಈ 4 ಆಚಾರ್ರುಗಳ ಚರಿತವು ಹೇಳಿದೆ. ವಿಶ್ವೇಶ್ವರಾಚಾರನನ್ನೂ ಸೇರಿ ಸಿಕೊಂಡು ಪಂಚಕಲಶದಾಚಾರರ ಚರಿತ ಎಂದೂ ಹೇಳುವಂತಿದೆ. ತನ್ನ ಗುರು ಸಂಪಾದನೆಯ ಚೆನ್ನಮಲ್ಲಿಕಾರ್ಜುನನು ತನಗೆ ಬೋಧಿಸಿದ ಈ ಚtತವನ್ನು ಕವಿ ಪದ್ಯರೂಪವಾಗಿ ರಚಿಸಿದಂತೆಯೂ ಪೌರಾಣಿಕ ಬಸವ ಯ್ಯನಿಗೆ ಹೇಳಿದಂತೆಯೂ ತಿಳಿಯುತ್ತದೆ. ಈ ಗ್ರಂಥದ ಉತ್ಕೃಷ್ಟತೆ ಯನ್ನು ಕವಿ ಹೀಗೆ ಹೇಳಿದ್ದಾನೆ ಇದು ಕಣಾ ಪರಶಿವನ ಬೀಡು ಮುಕ್ಕಿಯ ನಾಡು | ಇದು ಕಣಾ ಅಂಗಾಂಗಸದನ ಭಕ್ತಿಯ ವದಸ | Yol, I, 162-163
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೫
ಗೋಚರ