ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

637 ಶತಮಾನ) ನಾಗವ ಮಾಣಿಕಸ್ವಾಮಿ೦ಚರಿತೆ - ಇದು ಭಾಮಿನೀಸಟ್ಟದಿಯಲ್ಲಿ ಬರೆದಿದೆ; ಸಂಧಿ 3, ಪದ್ಯ 298. ಇದ ರಲ್ಲಿ ವಾಣಿ ಕಜಿನೇಶನ ಚರಿತೆ ಹೇಳಿದೆ. ಕಧಾಸಾರ-ದೇವೇಂದ್ರನು ತಾನು ಪೂಜಿಸುತ್ತಿದ್ದ ಮಾಣಿಕಜಿನಬಿಂಬವನ್ನು ರಾವಣನ ಹೆಂಡತಿ ಯಾದ ಮಂಡೋದರಿಯ ಪ್ರಾರ್ಧ ನಾನುಸಾರವಾಗಿ ಅವಳಿಗೆ ಕೊ ಟೈನು, ಅವಳು ಅದನ್ನು ಪೂಜಿಸುತ್ತಿದ್ದು ರಾವಣವಧಾನಂತರ ಶತ್ರುಗಳ ಭಯ ದಿಂದ ಸಮುದ್ರದಲ್ಲಿ ಇರಿಸಿದ್ದಳು ಬಹುಕಾಲದಮೇಲೆ ಶಂಕರಗಂಡನೆಂಬ ಮಹಾ ರಾಜರೆ, ಈ ಸಂಗತಿಯನ್ನು ಒಬ್ಬ ಬೇಡನಿಂದ ತಿಳಿದು ಆ ಬಿಂಬವ 1ು ಒಬ್ಬ ಪತಿವ್ರ ತಾಷ್ಟ್ರೀಯ ಸಹಾಯದಿಂದ ತರಿಸಿಕೊಂಡು ಕೊಲ್ಲಿ ಸಾಕ್ಷ ಎಂಬ ಪಟ್ಟಣದಲ್ಲಿ ದೇವಸ್ಥಾ ನವನ್ನು ಕಟ್ಟಿಸಿ ಅದರಲ್ಲಿ ಪ್ರತಿಷ್ಠೆ ಮಾಡಿದನು ಗ್ರಂಥಾವತಾರದಲ್ಲಿ ಮಾಣಿಕಜಿನಸ್ತುತಿ ಇದೆ, ಬಳಿಕ ಕವಿ ನಿದ್ಧಾ ದಿಗಳು, ಸರಸ್ವತಿ, ಗಣಧರರು, ಯಕ್ಷಯಕ್ಷಿಯರು ಇವರುಗಳನ್ನು ಹೂ ಗಳಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆ ಯುತ್ತೇನೆ ಚಂದ್ರಲೇಖೆಯನ್ನು ಕುರಿತು ಲಕ್ಷ್ಮಣನ ಉಕ್ತಿ. ನರಸತಿಗೆಯಳುಪಿದಡೆ ಪಾತಕ | ದೊರೆಕೊಳುಗು ಭವಭವದಿ ಬಿಡದೆಯು | ಧರೆಯೊಳಗೆ ಸಕ್ಕೀರ್ತಿಯ ದಪಕೀರ್ತಿ ಪಸರಿಪುದು || ನಿರುತದಿಂ ಕುಲಹಾನಿ ಬಲಸು | ತೊಲಗುವುದು ತತ್ ಕ್ಷಣದೊಳಿತಗಳ | ಕುರುಳುಗೆಡಬೇಡೆನುತ ಸೌಮಿತ್ರೆಯರ ಸುತ ಜಜದ || ಹನುಮಂತನ ಯುದ್ಧ ಕೆಲರ ಸೆರಳಿಂದೆಚ್ಚು ತಿರುಗಿಸಿ | ಕರ ಧನುವಿಂದೊಗೆದು ಕೊಲುತತೆ | ಕೆಲರ ಕಾಲಲಿ ಮೊಟ್ಟೆ ಸೀಳುತ ಕರನೊದೆದುಟಿದು | ಕೆಲರ ಶಿರಗಳ ಕಿತ್ತು ಹನುಮನು | ಕೆಲರ ಗಗನಕ್ಕಿಡುತಮಗಳು | ಕೊಳಗುಳದೊಳೊಪ್ಪಿದನು ಮಾರಿಯ ಮೋರೆಯಂದದಲಿ ! ಅನಂತ್ ೧೦:೦೨, ೧೨ ಫೆಬ್ರುವರಿ ೨೦೧೮ (UTC) 1. ಜೈನರ ರಾಮಾಯಣದಲ್ಲಿ ಶೂರ್ಪನಖೆಗೆ ಇಷಸರ ಕೊಟ್ಟಿದೆ.