ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

648 ಕರ್ಣಾಟಕ ಕವಿಚರಿತ. [17 ನೆಯ ಥವನ್ನು “ವೆಂಕಟಗುರುಕರುಣವಿಡಿದು ರೇಲ್ವೆ” ಎಂದು ಕವಿ ಹೇಳು ತಾನೆ.ಆರಂಭದಲ್ಲಿ ರಂಗನಾಧವೆಂಕಟೇಶವರದರಾಜ ನಾರಾಯಣರ ಸ್ತುತಿ ಇದೆ. ಅನಂತರ ಕವಿ ತನ್ನ ಗುರು ವೆಂಕಟಾರ್, ಯದುಗಿರಿನಾರಾಯಣ, ಯದುಶೈಲನಾಯಕಿ ಯದುಗಿರಿನರಸಿಂಹ, ರಾಮಾನುಜ, ವಕುಳಾಭ ರಣ ಇವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಈ ಗ್ರಂಥದಿಂದ ಒಂ ದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಖಗಳು ಅಸಮಜಡೆಗಳ ಲಂಬಕೂರ್ಚದ | ಕೃಶತರ ರ ತನು ಬೆರಳ ದರ್ಭೆಯ | ಪೊಸಕಮಂಡಲ ಕೈಯೊಳೆರಳೆಯ ಚರ್ಮ ವನು ಧರಿಸಿ | ಪಸರಿಸಿಪ್ಪ ಸಿತೋಪವೀತದ | ಒಸೆದು ಪಿಡಿದ ಚಪಾಕ್ಷ ಮಲೆಗ | ಳೆಸೆವ ಋಷಿಜನ ಭಕ್ತಿಭಾವದಿ ನೋಡಿದರು ಹರಿಯ || ರಾಕ್ಷಸರಿಂದ ನೊಂದ ಭೂದೇವಿ ಸರಿಲಿದಳಕದ ನಿಟ್ಟುಸಿರ ದಡ | ದಡಿಸ ಮೆಲ್ಲೆದೆದಾಣ ದೇಹದೊ | ಇಡಸಿದತಿಕಂಪನದ ಭೀತಿಯು ಮುಚ್ಚಿ ದಕ್ಷಿಗಳ | ನುಡಿಯೊಳೆಲಸಿಕೆವೆತ್ತ ರಕ್ಕಸ | ಗಡಣದಲಿ ಮೈನೂಂದೆ ಭಾಮಿನಿ | ಪೊಡವಿಯನು ಕರುಣಾವಲೋಕನದಿಂದ ನೋಡಿದನು || 2 ಕೃಷ್ಟಗೋಪೀವಿಲಾಸ ಇದು ಸಾಂಗತ್ಯದಲ್ಲಿ ಬರೆದಿದೆ; ಬಾಲವಿಲಾಸಶತಕ, ವೇಣುವಿಲಾಸ ಶತಕ, ಶೃಂಗಾರಸತಿ ಪ್ರಥಮ ದ್ವಿತೀಯ ತೃತೀಯ ಎಂದು 5 ಭಾಗಗ ಳಾಗಿ ವಿಂಗಡಿಸಲ್ಪಟ್ಟಿದೆ; ಒಟ್ಟು 451 ಪದ್ಯಗಳಿವೆ, ಇದರಲ್ಲಿ “ಗೋವಿಂದ ಧರೆಯೊಳವತರಿಸಿ ನಂದಗೋಕುಲದೊಳಗಾಡಿದ ನಾಟಕದಂದವೆಲ್ಲವ ವಿವ ರಿಸುವೆ” ಎಂದು ಕವಿ ಹೇಳುತ್ತಾನೆ, ಗ್ರಂಥಾವತಾರದಲ್ಲಿ ವಿಷ್ಣು ಸ್ತುತಿ ಇದೆ. ಬಳಿಕ ಕವಿ ಸರಸ್ವತಿ, ರಾಮಾನುಜ, ಸ್ವಗುರುವೆಂಕಟಾರ್ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆ ಯುತ್ತೇವೆ. ತಂದ್ರೋದಯ ಮಾರನಲಗ ಸಾಣೆವಿಡಿವ ಚಕ್ರವೂ ಪ್ರಾಚಿ | ನಾರಿಯ ಕರ್ಣಕುಂಡಲವೋ |