ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಗಳನ್ನು ರಚಿಸಿರುವುದಲ್ಲದೆ ಕವಿಗಳಿಗೆಉದಾರಾಶ್ರಯವನ್ನು ಕೊಟ್ಟು ಗ್ರಂ ಥಗಳನ್ನು ಬರೆಯಿಸಿ ಕನ್ನಡ ಸಾಹಿತ್ಯವನ್ನು ವೃದ್ಧಗೊಳಿಸಿದನು. ಈತನ ಪ್ರೋತ್ಸಾಹದಿಂದ ಅಳಿಯ ಲಿಂಗರಾಜ, ದೇವಲಾಪುರದನಂಜುಂಡ, ಶ್ರೀನಿ ವಾಸಕವಿ, ಶಾಂತರಾಜಪಂಡಿತ, ವೆಂಕಟರಾಮಶಾಸ್ತ್ರಿ, ಸುಬ್ರಹ್ಮಣ್ಯ, ಮದ್ದಗಿರಿ ನಂಜಪ್ಪ, ಸೀತಾರಾರ ,ಸೂರಿ, ಕೆಂಪುನಾರಾಯಣ, ರಾಮಕೃಷ್ಣ ಶಾಸ್ತ್ರಿ, ಕಮಲ ಪಂಡಿತ ಮೊದಲಾದವರು ಹಲವುಗ್ರಂಥಗಳನ್ನು ರಚಿಸಿ ದ್ದಾರೆ. ಈತನ ಮಹಿಷಿಯರಾದ ರಮಾವಿಲಾಸದ ಚೆಲುವಾಜಮ್ಮಣ್ಣಿ, ಸೀತಾವಿಲಾಸದ ದೇವಾಜಮ್ಮಣ್ಣಿ ಇವರುಗಳ ಆಜ್ಞಾನುಸಾರವಾಗಿ ಭಾಗವತ ಕೃಷ್ಣಸ್ವಾಮಿ 1869ರಲ್ಲಿ ವಾಸಿಷ್ಠರಾಮಾಯಣಟೀಕೆಯನ್ನು ಬರೆದನು.

      ಪಾಳೆಯಗಾರರ - ಉಮ್ಮತ್ತೂರು ವೀರನಂಚೇಂದ್ರನ (1482-1494)  ಪ್ರೋತ್ಸಾಹದಿಂದ   ನೀಲಕಂಠಾಚಾರನು   ಆರಾಧ್ಯಚಾರಿತ್ರವನ್ನೂ, ಅಚ್ಯುತರಾಯನ ಸಮಂತನಾದ ನುಗ್ಗೆ ಹಳ್ಳಿಯ ರಾಯಭೂ

ಪಾಲನ ಪ್ರೇರಣೆಯಿಂದ ಲಿಂಗಮಂತ್ರಿ ಕಬ್ಬಿಗರಕ್ಕೆ ಪಿಡಿಯನ್ನೂ, ಸುಗಟೂರ ಪ್ರಭುವಾದ ಮುಮ್ಮಡಿ ತಮ್ಮನು ಶಂಕರಸಂಹಿತೆಯನ್ನೂ, ಪಿರಿಯಪಟ್ಟಣದ ವಿರುಪರಾಜೇಂದ್ರನ ಆಶ್ರಿತನಾದ ದೊಡ್ಡಯ್ಯನು ಚಂದ್ರಪ್ರಭಚರಿತೆಯನ್ನೂ, ಹದಿನಾಡು ಚೆನ್ನರಾಜನ ಆಜ್ಞಾನುಸಾರವಾಗಿ ಎಳಂದೂರು ನರಸಿಂಹಭಟ್ಟನು. ವೈದ್ಯಸಾರಸಂಗ್ರಹವನ್ನೂ, ಬೇಲೂರು ವೆಂಕಟರಾಯನ (1626-1613) ಪ್ರೋತ್ಸಹದಿಂದ ಸೂರ್ಯ ಕವಿ ಕವಿಕಂಹಾರವನ್ನು ಬರೆದರು. ಸೋಸಲೆ ರೇವಣಾಚಾರ್ಯನು ಚಿಕ್ಕನಾಯಕನಹಳ್ಳಿ ಮುದಿಯಪ್ಪನಾಯಕನ (೧೬೨೩) ಇಷ್ಟಾನುಸಾರ ವಾಗಿ ಮಹಿಮ್ನಸ್ತವಟೀಕೆಯನ್ನೂ ಮುದಿಗೆರೆ ರಘುವಪ್ಪನಾಯಕನ ಪ್ರೇರಣೆಯಿಂದ ಶಿವಾಧಿಕ್ಯಶಿಖಾಮಣಿಟೀಕೆಯನ್ನೂ ರಚಿಸಿದನು. ಬಿಜ್ಜವರದ ತೋಂಟದ ಸಿದ್ದಲಿಂಗ ಭೂಪನ ಆಶ್ರಿತನಾದ ವಿರಕ್ತತೋಂಟದಾ ರ್ಯನು ಸಿದ್ದೇಶ್ವರ ಪುರಾಣ ಮೊದಲಾದ ಗ್ರಂಧಗಳನ್ನೂ ಅದೆ ಬಿಜ್ಜ ವರದ ಇಮ್ಮಡಿ ಚಕ್ಕಭೂಪನ (159) ಪ್ರೋತ್ಸಾಹದಿಂದ ಮಲ್ಲಿಕಾ ರ್ಜುನಕವಿ ಶಂಕರಕವಿಕೃತ ಸಂಸ್ಕೃತಬಸನ ಪುರನಕ್ಕೆ ಟೀಕೆ +