ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ದಕ್ಷಿಣೋತ್ತರ ಮಾರ್ಗಗಳು. ಕನ್ನಡದಲ್ಲಿ ದಕ್ಷಿಣಮಾರ್ಗ, ಉತ್ತರಮಾರ್ಗ ಎಂಬ ಭೇದಗಳು ಕ್ರಮವಾಗಿ ತಮಿಳಿನ ಮತ್ತು ತೆಲುಗಿನ ಸಂಪರ್ಕದಿಂದ ಉಂಟಾಗಿವೆ ಎಂದೂ ಇವುಗಳಿಗೆ ಅಸಾಧಾರಣವಾದ ಗುರುತುಗಳು ಇಂಥವು ಎಂದೂ ಕೆಲವರು ನಿರ್ಧರಿಸಿ ಬರೆದಿದ್ದಾರೆ, ಈಬರೆವಣಿಗೆಗೆ ಸರಿಯಾದ ಆಧಾರವಿರುವಂತೆ ತೋರುವುದಿಲ್ಲ ದಕ್ಷಿಣಮಾರ್ಗ, ಉತ್ತರಮಾರ್ಗ ಎಂಬ ಮಾತುಗಳೇನೋ ಕವಿರಾಜಮಾರ್ಗ, ಕಾವ್ಯಾವಲೋಕನ, ಶಬ್ದಾನುಶಾಸನ ಈ ಗ್ರಂಥಗಳಲ್ಲಿ ಹೇಳಿವೆ.ಕವಿರಾಜಮಾರ್ಗದ 2ನೆಯಪರಿಚ್ಛೇದದಲ್ಲಿ ಕಾವ್ಯಗುಣಗಳನ್ನು ವಿವರಿಸುವಾಗ ಈಮಾತುಗಳು ಬಂದಿವೆ. ಆದರೆ ಈ ಭಾಗದಲ್ಲಿ ನೃಪತುಂ ಗನು ಬರೆದಿರುವ ಅಂಶವೆಲ್ಲಾ ಪ್ರಾಯಿಕವಾಗಿ ದಂಡಿಯ ಕಾವ್ಯಾದರ್ಶದ ಮಾರ್ಗವಿಭಾಗವೆಂಬ ಪ್ರಥಮಪರಿಚ್ಛೇದದಲ್ಲಿ ಉಕ್ತವಾದ ವಿಷಯದ ಪರಿ ವರ್ತನವಾಗಿದೆ, ದಂಡಿ ದಕ್ಷಿಣ ಮಾರ್ಗ, ಉತ್ತರಮಾರ್ಗ ಎಂಬ ಮಾತುಗಳನ್ನು ಕ್ಯಾಚಿತ್ಕವಾಗಿಯೂ ಅದೇ ಅರ್ಥದಲ್ಲಿ ವೈದಭ- ಮಾರ್ಗ, ಗೌಡಮಾರ್ಗ' ಎಂಬ ಮಾತುಗಳನ್ನು ವಿಶೇಷವಾಗಿಯೂ ಉಪಯೋಗಿಸಿದ್ದಾ ನೆ; ನೃಪತುಂಗನು ಈ ಅರ್ಥವನ್ನು ಹೇಳದೆ ದಕ್ಷಿಣೋತ್ತರ ಶಬ್ದಗಳನ್ನು ಮಾತ್ರ ಉಪಯೋಗಿಸಿದ್ದಾನೆ.ಇಷ್ಟೇ ವ್ಯತ್ಯಾಸವೇ ಹೊರತು ಮತ್ತೇನೂ ಇಲ್ಲಆದುದರಿಂದ ಕಾವ್ಯಗುಣಗಳವಿಷಯವಾಗಿ ನೃಪತುಂಗನು ಹೇಳಿರುವದೆಲ್ಲಾ ಮಾತೃಕೆಯಲ್ಲಿರುವಂತೆ ವೈದರ್ಭಗೌಡಮಾರ್ಗಗಳಿಗೆ ಅನ್ವಯಿ ಸುತ್ತದೆಯೇಹೊರತು ಕನ್ನಡದ ಭೇದಗಳಿಗಲ್ಲ. ನೃಪತುಂಗನು ಈ ಭಾಗದಲ್ಲಿ ಕಾವ್ಯಾದರ್ಶವನ್ನು ಪರಿವರ್ತಿಸಿರುವ ವಿಷಯವು ಕೆಳಗಣ ಉದಾಹ ರಣೆಗಳಿಂದ ಸ್ಪಷ್ಟವಾಗದೆ ಇರಲಾರದು. 1 ಕವಿಗಳುಮನಾದಿಲೋಕೊ | ದ್ಬರಪ್ಪುಯಿಂದನಂತಗಣನಾನುಗತಂ | ಸವಿಶೇಷೋಕ್ತಿಗಳುಮನಂ | ತವಿಧಂಗಳನಂತಭೇದಮದಃ ಮಾರ್ಗo || ಜನಿತವಿಭಾಗೆಂಗಳಿ' ವಾ | ಬ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ | ನೆನೆದಳ'ಪಲಾರ್ಪ ರಾರದ | ನನಿಶ್ಚಿತಕ್ರಮವಿಶೇಷಗುಣಯುಕ್ತಕ್ರಮಂ || 1. ಕಾವ್ಯಾದರ್ಶ, I, 60, 80,