ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

32

ಸಂಪುಟಕ್ಕೆ ಸೇರಬೇಕಾದ ಕೆಲವು ಹೊಸ ವಿಷಯಗಳನ್ನೂ ಕೆಲವು ತಿದ್ದುಪಾಡುಗಳನ್ನೂ ತಿಳಿಸಿದ್ದೇನೆ. ವೀರಶೈವಕವಿಗಳಲ್ಲಿ ಹಲವರು ಗೂಢವಾದ ವೇದಾಂತ ವಿಷಯಗಳನ್ನು -`ಲ್ಲರಿಗೂ ತಿಳವಂತೆ ಸುಲಭವಾದ ಮಾತುಗಳಲ್ಲಿ ವಚನಗಾರವಾಗಿ ಬರೆದಿದ್ದಾರೆ. ಈ ವಚನಕಾರರ ಹೆಸರು ಅಂಕಿತ ಮುಂತಾದ ವಿಷಯಗಳನ್ನು ಉದಾಹರಣಗಳೊಡನೆ ಬಂದೇ ಕಡೆ (ಪುಟಗಳು 105-124) ಸೇರಿಸಿ ಬರೆದಿದ್ದೇನೆ ಹೀಗೆಯೇ ಕೆಲವು ಪದ್ಯಗಳಲ್ಲಿ ದೊರೆವ ಕವಿಗಳ ಬಿರುದುಗಳ ವಿಷಯವಾಗಿ ಒಂದೇ ಕಡೆ (ಪುಟಗಳು 175-178) ಕೆಲವು ಮಾತುಗಳನ್ನು ಹೇಳಿದ್ದೇನೆ. ಗ್ರಂಥದ ಕೊನೆಯಲ್ಲಿ ಮೂರು ಪರಿಶಿಷ್ಟಗಳಿವೆ. ಒಂದನೆಯದರಲ್ಲಿ ಈ ಸಂಪುಟಕ್ಕೆ ಸೇರಬೇಕಾದ ಕೆಲವರು ಕವಿಗಳ ಚರಿತೆ ಹೇಳಿದೆ. ಎರಡನೆಯದರಲ್ಲಿ ಗ್ರಂಥಶುದ್ದಿಯೂ ಕೆಲವು ವಿಶೇಷವಿಷಯಗಳೂ ಉಕ್ತವಾಗಿವೆ. ಮೂರನೆಯದರಲ್ಲಿ ಈಚೆಗೆ ತಿಳಿದುಬಂದ ಬಬ್ಬ ಪುರಾತನಕವಿಯ ವಿಷಯವು ಹೇಳಿದೆ. ಆದಿಭಾಗದಲ್ಲಿ ವಾಚರ್ಯಕ್ಕಾಗಿ ಈಸಂಪುಟದಲ್ಲಿ ವಿವರಿಸಿರುವ ಕವಿಗಳ ಮತ್ತು ಗ್ರಂಥಗಳ ಹೆಸರುಗಳು ಬೇರೆಬೇರೆ ವರ್ಣಾನುಕ್ರಮವಾಗಿ ಪುಟಸಂಖ್ಯೆಯೊಡನೆ ಕೊಟ್ಟಿವೆ.

        ಈ ಸಂಪುಟದಲ್ಲಿ 15, 16, 17 ಈ ಮೂರು ಶತಮಾನಗಳಲ್ಲಿದ್ದ ಎಲ್ಲಾ ಕವಿಗಳ ವಿಷಯವೂ ಬಂದಿದೆ ಎಂದು ಧೈರ್ಯವಾಗಿ  ಹೇಳಲಾರೆನು. ನನ್ನ ತಿಳಿವಳಿಕೆಗೆ ಬಂದ ಆವ ಕವಿಯ ಹೆಸರನ್ನೂ ಬಿಟ್ಟಿಲ್ಲ ಎಂದು ಮಾತ್ರ ಹೇಳಬಲ್ಲೆನು ಹೆಚ್ಚಾದ ಅಂಶಗಳು ತಿಳಿದು ಬಾರದಿರುವುದರಿಂದ ಕೆಲವರು ಕವಿಗಳ ಚರಿತೆ ಅತಿಸಂಗ್ರಹವಾಗಿ ಬರೆಯಲ್ಪಟ್ಟಿದೆ. ಕವಿಗಳ ಕಾಲವನ್ನು ನಿರ್ಧರಿಸುವುದರಲ್ಲಿ ಬೇರೆ ಆಧಾರವಿಲ್ಲದ ಕಡೆ ಪುಸ್ತಕಗಳ ಸ್ವರೂಪ, ಅಕ್ಷರದ ರೀತಿ, ಪ್ರತಿಮಾಡಿದವರು ಹೇಳುವ ಕಾಲ, ಭಾಷಾಶೈಲಿ ಮುಂತಾದುವುಗಳಿಂದ ಕಾಲವನ್ನು ಊಹಿಸಿದ್ದೇನೆ. ಸಾಧನಸಂಪತ್ತಿಯುಳ್ಳ  ಮಹನೀಯರು ಈ ಕೊರತೆಗಳನ್ನು ಸಾಧ್ಯವಾದ ಮಟ್ಟಿಗೆ ನಿವಾರಣ ಮಾಡಲು ಸಹಾಯಮಾಡಿದರೆ ಬಹಳ ಉಪಕಾರವಾಗುವುದು. ಇಷ್ಟು ಕೊರತೆಗಳುಳ್ಳ ಈ ಗ್ರಂಥವನ್ನು ಏಕೆ ಇಷ್ಟ ಆತುರವಾಗಿ ಪ್ರಕಟಿಸಬೇಕು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಅಂಕುರಿಸಬಹುದು. ಇದಕ್ಕೆ ಉತ್ತರ ವೇನೆಂದರೆ ಮನುಷ್ಯನ ದೇಹವು ಶಾಶ್ವತವಲ್ಲ ; ನಾನು ಸುಮಾರು 30