ಈ ಪುಟವನ್ನು ಪರಿಶೀಲಿಸಲಾಗಿದೆ
ಕರ್ಣಾಟಕ ಕವಿಚರಿತೆ. [15 ನೆಯ ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ___
ಜ್ಯೋತಿಷದ ಪ್ರಯೋಜನ ಭವಬದ್ಧ ಶುಭಾಶುಭ ಕ | ರ್ಮವಿಪಾಕದ ಫಲವನಮಲಿಪುಗುಂ ಜ್ಯೋತಿಜ್ಞಾರ ನವದೆಂತೆನೆ ಕತ್ತಲೆವನೆ | ಯ ವಸ್ತುವಂ ತೋರ್ಪ ಸೊಡರ ಬೆಳಗಿನ ತಳದಿಂ||
ಗ್ರಹಬಲ
ಶನಿಯಿಂದಂ ಮಹಿಜಾತನಾ ಮಹಿಜನಿಂದಂ ಸೌಮ್ಯನಾ ಸೋಮನಂ |
ದನನಿಂದಂ ಗುರುವಾ ಸುರೇಂದ್ರಗುರುವಿಂದಂ ಶುಕ್ರನಾ ಶುಕ್ರನಿಂ |
ವನಜಾತಾಹಿತನಾ ವನೇಜರಿಪುವಿಂ ಪಂಕೇಜಮಿತ್ರ ಒಳಾ | ಧ್ವನೆನಿಕ್ಕುಂ ಕ್ರಮದಿಂದಮೀ ಗ್ರಹಬಳಂ ನೈಸರ್ಗಿಕಂ ನಾಮದಿಂ ||
ಸ್ತ್ರೀಪುಂಜನನ ಅಸಮಾಲಯದೊಳ್ ನಿಲೆ ಸೂ | ರ್ಯಸುರೀಜ್ಯರ್ ಒಳಯುತರ್ ನರಂ
ಪುಟ್ಟು ಗುಮಾ | ಅಸಿತೇಂದುಗಳತಿಬಳರಾ |ಗಿ ಸಮದೊಳಿರೆ ರಮಣಿ ಪುಟ್ಟುಗುಂ ಬುಧಮಿತ್ರಾ ||
ಪ್ರಸವದಿನ ವಿದಿತಂ ಕಾಂತೆಗೆ ಪೇಲ್ತುತೀವಿದುದು ಪೇಲುನ್ನಾವುದಕ್ಕುಂ ಪ್ರಸೂ |
ತದಿನಂ ತಾನೆನೆ ಚಂದ್ರನಾವ ಗೃಹದೊಳ್ ತತ್ಕಾಲದೊಳ್ ನಿಂದನಾ || ಸದನದ್ವಾದಶಭಾಗಮಂತೆನಿತು ಸಲ್ಗುಂ ಮುಂತೆ ತತ್ಸಂಖ್ಯೆ ಗೇ | ಹದಿನತ್ತಲ್ ? ನಿಶಚಂದ್ರಮಂ ಪ್ರಸವಕಾಲಂ ಕಾಂತೆಗಂತಾ ದಿನಂ ||
ಆರಿಷ್ಟ ನಾಶ
ಪಿರಿದು ಪಳಾಳದೊಳೇಂ ಸುರ | ಗುರುವೊರ್ವನೆ ವೀರವಂತನುಂ ಕಾಂತನುಮಾ। ಗಿರೆ ಜನ್ಮ ಲಗ್ನದೊಳ್ ಸಂ | ಹರಿಸುಗುಮಘವುಂ ಕರೀಂದ್ರಮಂ
ಸಿಂಹದವೋಲ್ ||
ಶಿಶುಮರಣ ಬರೆ ಕನ್ಯಾ ಲಗ್ನಂ ಭಾ | ಸ್ಕರನಲ್ಲಿರೆ ಮೀನದೊಳ್ ಶನೈಶ್ಚರನಿರೆ ಸುಂ | ದರಿ ಸಾಗುಮುದಯದಯ್ದನೆ | ಯ ರಾಶಿಯೊಳ್ ಭೋಜನಿರೆ ತನೂಜಂ
ಸಾಗುಂ ||