ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನಕ್ಕೆ ಹಿಂದೆ] ವಾದಿ ಕುಮುದಚಂದ್ರ 11
ಭುಕಮೀಲೋಕದೊಳಾರೊಳಂ ಜನಿಯಿಸಿತ್ತಿಲ್ಲೆಂಬಿನಂ ವಿಪ್ರಕ | ನ್ಯಕೆ ವಿದ್ವಜ್ಜನದಿಂದಮಂದು ಪಡೆದಳ್ ಪಾಂಡಿತ್ಯಸೌಂದರ್ಯಮಂ || ------- ವಾದಿ ಕುಮುದಚಂದ್ರ, ಸು. 1100 ಈತನು ಜಿನಸಂಹಿತೆಯೆಂಬ ನಾಮಾಂತರವುಳ್ಳ ಪ್ರತಿಷ್ಠಾಕಲ್ಪಕ್ಕೆ ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ. ಇವನು ಜೈನಕವಿ ; ಮಾಘಣಂದಿ ಸಿದ್ಧಾಂತಚಕ್ರವರ್ತಿಯ ಮಗನು; ಚತುರ್ವಿಧಪಾಂಡಿತ್ಯ ಚಕ್ರವರ್ತಿ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ವ್ಯಾಖ್ಯಾನದ ಆರಂಭದಲ್ಲಿ- ಶ್ರೀಮಾಘನಂದಿಸಿದ್ದಾಂತಿ ಚಕ್ರವರ್ತಿತನೂಭವಃ | ಕುಮುದೇಂದುರಹಂ ವಚ್ಚಿ ಪ್ರತಿಷ್ಠಾಕಲ್ಪಟಿಪ್ಪಣಂ || ಎಂಬ ಶ್ಲೋಕವೂ, ಅಂತ್ಯದಲ್ಲಿ-- ಇತಿ ಶ್ರೀಮಾಘನಂದಿಸಿದ್ದಾಂತಚಕ್ರವರ್ತಿಸುತ ಚತುರ್ವಿಧಪಾಂಡಿತ್ಯಚಕ್ರ ವರ್ತಿ ಶ್ರೀವಾದಿಕುಮುದಚಂದ್ರಪಂಡಿತದೇವವಿರಚಿತೇ ಪ್ರತಿಷ್ಠಾಕಲ್ಪಟಿಪ್ಪಣೀ ಎಂಬ ಗದ್ಯವೂ ಇವೆ. ದೇವಚಂದ್ರನು ತನ್ನ ರಾಮಕಥಾವತಾರದಲ್ಲಿ (1797) ಪಂಪರಾ ಮಾಯಣದ ವಿಷಯವಾಗಿ ಹೀಗೆ ಬರೆದಿದ್ದಾನೆ--- ಶ್ರೀಮೂಲಸಂಘ ಬಲೋತ್ಕಾರಗಣ ಶ್ರೀಮಾಘಣಂದಿಸಿದ್ದಾಂತಚಕ್ರವರ್ತಿ ಸುತ ಚತುರ್ವಿಧಪಾಂಡಿತ್ಯ ಶ್ರೀವಾದಿಕುಮುದಚಂದ್ರಪಂಡಿತದೇವರಚಿತರಾಮಾಯಣಸ ಮಾನವಾದ ಶ್ರೀಮದಭಿನವಪಂಪರಚಿತರಾಮಾಯಣ೦. ಇದರಿಂದ ಈ ಕವಿ ಒಂದು ರಾಮಾಯಣವನ್ನೂ ಬರೆದಿರುವಂತೆ ತಿಳಿಯುತ್ತದೆ. ಅಲ್ಲದೆ ನಾಗಚಂದ್ರನ (ಸು. 1105) ಕಾಲಕ್ಕೆ ಹಿಂದೆ ಇ ದ್ದಂತೆ ತೋರುತ್ತದೆ, ಇವನ ಕಾಲವು ಸುಮಾರು 1100 ಆಗಿರಬಹು ದೆಂದು ಊಹಿಸುತ್ತೇವೆ. ಬಾಲಚಂದ್ರನು (ಸು. 1170) ! ತನ್ನ ತತ್ವಾರ್ಥತಾತ್ಪರ್ಯವ್ರುತ್ತಿಯನ್ನು ಒಬ್ಬ ಕುಮುದಚಂದ್ರ ಭಟ್ಟಾರಕನ ಪ್ರತಿಬೋಧನಾರ್ಥವಾಗಿ ರಚಿಸಿದಂತೆ ಹೇಳುತ್ತಾನೆ. ಈ ಕುಮುದಚಂದ್ರನು ಬೇರೆ ---------------------------------------------------- 1, Vol.I, I97.