ಈ ಪುಟವನ್ನು ಪರಿಶೀಲಿಸಲಾಗಿಲ್ಲ.
14 ಕರ್ಣಾಟಕ ಕವಿಚರಿತೆ. [15 ನೆಯ
ಎಡೆಯಾಡುತ್ತು ಮನೂನಜೈನಭವನಕ್ಕಾನಂದದಿಂದಂ ತಳ |
ರ್ನಡೆಗಲ್ತೆಂ ಪರಮಾಗಮಾಭ್ಯಸನದಿಂದಾವೊಲ್ತುಮಾಗಳ ತೊದ |
ಲ್ನುಡಿಗಲ್ತೆಂ ಕಿರಿಯಂದು ಪುಣ್ಯವಶದಿಂದಾರಾಜ್ಯಪೂಜ್ಯಾಸ್ಪದಂ |
ಬಡೆದಾಗಳ್ ಕವಿಚಕ್ರವರ್ತಿವೆಸರಂ ತ್ರೈಲೋಕ್ಯಚೂಡಾಮಣೀ ||
ಎಂಬ ಪದ್ಯದಿಂದ ಈತನು ರಾಜಮರ್ಯಾದೆಯನ್ನೂ ಕವಿಚಕ್ರವರ್ತಿ
ಯೆಂಬ ಬಿರುದನ್ನೂ ಪಡೆದಂತೆ ತಿಳಿಯುತ್ತದೆ. ಈ ಗ್ರಂಥದಲ್ಲಿ 36
ವೃತ್ತಗಳಿವೆ; ಇದಕ್ಕೆ ಛತ್ತೀಸರತ್ನಮಾಲೆ ಎಂಬ ಹೆಸರೂ ಉಂಟು. ಪ್ರತಿ
ಪದ್ಯವೂ ತ್ರೈಲೋಕ್ಯಚೂಡಾಮಣಿ ಎಂದು ಮುಗಿಯುತ್ತದೆ. ಇದರಿಂದ
ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:--
ಅಹವಿಲ್ಲೆಂಬುದನಕ್ಷಸೂತ್ರಮಣಿಯಿಂ ಕಾರುಣ್ಯಮಿಲ್ಲೆಂಬುದಂ |
ಮಿಳುಗುತ್ತಿರ್ಪ ತಿಸೂಳದಿಂ ತನಗಣಂ ನಾಣ್ ಮುನ್ನಮಿಲ್ಲೆಂಬುದಂ ||
ಮೊಳೆಗೆಟ್ಟರ್ಚಿಪ ಲಿಂಗದಿಂ ತಪದ ಮಾತಿಲ್ಲೆಂಬುದಂ ಗೌರಿಯಿಂ |
ದಳಿದೇನೆಂದು ಜಡರ್ ಮೃಡಂಗೆಳಗುವರ್ ತ್ರೈಲೋಕ್ಯಚೂಡಾಮಣೀ ||
ಪಡೆಮಾತೇಂ ಗಡ ಮತ್ಸ್ಯಕಚ್ಛಪವರಾಹಾಕಾರಮಂ ತಾಳ್ದಿದಂ |
ಗಡ ಕುಬ್ಬದ್ವಿಜನಾಗಿ ದೈತ್ಯನಿದಿರೊಳ್ ದಾನಕ್ಕೆ ಕೆಯ್ಯಾಂತವಂ |
ಗಡ ಸಂಗ್ರಾಮದೊಳಾಂತು ಕಾದಿಯೆ ಜರಾಸಂಧಂಗೆ ಬೆನ್ನಿತ್ತವಂ |
ಗಡ ದೇವಂ ಗಡ ಪೇಳ್ವೋಡಿನ್ನವಣಕಂ ತ್ರೈಲೋಕ್ಯಚೂಡಾಮಣೀ ||
ಕೆಳೆಯಂ ಸಂಜೆಯನಿಂದ್ರನಂ ಗಣಪನಂ ಗೌರೀಶನಂ ಭಾನುವಂ |
ಪೆಳೆಯಂ ಗೋಕುಳಮಂ ಗಿರಿಪ್ರಕರಮಂ ಬಾದುಂಬೆಯಂ ಕಾಂತಿಯಂ |
ತೊಳೆಯಂ ವಾರ್ಧಿಯನಯ್ದು ಪಾಲುಮರನಂ ದೈವಂಗಳೆಂದಿಂತು ಕೂ |
ರ್ತೆ ಳಗುತ್ತಿರ್ಪವರೆಂತು ಮುಕ್ತಿವಡೆವರ್' ತ್ರೈಲೋಕ್ಯಚೂಡಾಮಣೀ ||
ಜಿನಮಾರ್ಗಂಬಿಡದನ್ಯಮಾರ್ಗಮನದೇಂ ಪೇಳ್ ದೂಷಣಂಗೆಯ್ದು ದು |
ರ್ಜನನಾದಂ ಕರಮೆನ್ಗೆ ಮೆಚ್ಚದವರ್ಗಳ ಮಧ್ಯಸ್ಥರಾರಯ್ಯೆ ಪಾ ||
ವಿನ ಪಲ್ಗೊಳ ವಿಷಮುಂಟು ಕಿಚ್ಚು ಸುಡುಗುಂನಂಜಳ್ಕದೆಂಬಂತೆ ಪೇ |
ಳ್ದೆನಿದಂ ವಸ್ತು ವಿಚಾರಮಿಾತೆಳನಿದಂ ತ್ರೈಲೋಕ್ಯ ಚೂಡಾಮಣೀ ||