ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು
೧೦೩

"ಆ ಕೊರೆದ ಗವಿಗಳಲ್ಲಿಯ ಶಿಲ್ಪದಲ್ಲಿ, ಐದನೆಯ ಶತಮಾನದಿಂದ ಎಂಟನೆಯ ಶತಮಾನದವರೆಗೆ ಶಿಲ್ಪ ಕಲೆಯು ಹೇಗೆ ಅಭಿವೃದ್ದಿಯನ್ನು ಹೊಂದಿ ತಂಬುದು ಚೆನ್ನಾಗಿ ಗೊತ್ತಾಗುತ್ತದೆ."
ನೆಯ ಪುಲಿಕೇಶಿಯ ಚಿತ್ರವು ದೊರೆತುದು ಇದೇ ಗುಡಿಗಳಲ್ಲಿಯೇ.
ನ್ನು, ಪಶ್ಚಿಮ ಚಾಲುಕ್ಯರ ಕಾಲಕ್ಕೆ ಕಟ್ಟಲ್ಪಟ್ಟ ಒಂದು ಗುಡಿಯನ್ನು ವರ್ಣಿಸುವೆವು. ಚಾಲುಕ್ಯ ವಿಕ್ರಮನ ಕಾಲಕ್ಕೆ ಇಟಗಿಯಲ್ಲಿ, ಅವನ ಮಹಾ ಪ್ರಧಾನ ದಂಡನಾಯಕನೂ "ಕನ್ನಡ ಸಂಧಿವಿಗ್ರಹಿ”ಯೂ ಆದ ಮಹಾದೇವನೆಂಬವನು ಸುಂದರವಾದ ಮಹಾದೇವರ ಗುಡಿಯೊಂದನ್ನು ಕಟ್ಟಿಸಿ, ಇಟಗಿಯೊಳಗಿನ ನಾನೂರು ಮಹಾಜನರಿಗೆ ಭೂಮಿಗಳನ್ನು ದಾನವಾಗಿ ಕೊಟ್ಟನು. ಈ ಗುಡಿಯಲ್ಲಿಯ ಶಿಲಾಲೇಖದಲ್ಲಿ ಈ ಗುಡಿಗೆ - 'ದೇವಾಲಯ ಚಕ್ರವರ್ತಿ' ಎಂದು ಹೆಸರಿದ, ಈ ಗುಡಿಯ ವಿಷಯದಲ್ಲಿ ಫರ್ಗ್ಯುಸನ್ನನು ಹೇಳಿರುವುದೇನೆಂದರೆ-
"must be regarded as one of the most highly finished and architecturally perfect of the Chalukyan shrines, that have come down to us. In the opinion of the late Meadow's Taylor the carving of the some of the pillars and of the lintels and architraves of the doors is quite beyond description. No chased work in silver and gold could possibly be finer.”

ಸಾರಾಂಶ:- ಸಂಪೂರ್ಣವಾಗಿಯೂ ಶಿಲ್ಪಶಾಸ್ತ್ರದೃಷ್ಟಿಯಿಂದ ಅತ್ಯಂತ ಸುಂದರವಾಗಿಯ ಕಟ್ಟಲ್ಪಟ್ಟ ಚಾಲುಕ್ಯ ಪದ್ದತಿಯ ಗುಡಿಗಳಲ್ಲಿ ಇದನ್ನು ಗಣನೆ ಮಾಡಬೇಕು. ಕೆಲವು ಕಂಬಗಳ ಛಾವಣಿಗಳ ಮತ್ತು ಬೋದುಗೆಗಳ ಕೆತ್ತಿಗೆಯಂತೂ ಮಿ| ಮಿಡೋ ಟೇಲರ್ ಇವರು ಹೇಳುವಂತೆ ವರ್ಣಿಸಲಳವಲ್ಲದಷ್ಟು ಅಪ್ರತಿಮವಾಗಿದೆ. ಬೆಳ್ಳಿಬಂಗಾರಗಳಲ್ಲಿ ಕೂಡ ಅಷ್ಟು ಸುಂದರವಾದ ಕೆತ್ತಿಗೆಯನ್ನು ಮಾಡುವುದು ಅಸಾಧ್ಯವು.

ಡಾ| ಫರ್ಗ್ಯುಸನ್ನನಂಥ ಶಿಲ್ಪಶಾಸ್ತ್ರಜ್ಞರು ಈ ಗುಡಿಯ ಶಿಲ್ಪಕಲೆಯು ಪೂರ್ಣತ್ವವನ್ನು ಹೊಂದಿರುತ್ತದೆಂದೂ ಮಿ. ಮಡೋ ಟೇಲರನಂಥವರು ಬೆಳ್ಳಿ