ಪುಟ:ಕರ್ನಾಟಕ ಗತವೈಭವ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೧೦

ಕರ್ನಾಟಕ-ಗತವೈಭವ


೧೪ನೆಯ ಪ್ರಕರಣ


ಧಾರ್ಮಿಕ ಉನ್ನತಿ

ನ್ನಡಿಗರೇ, ಕರ್ನಾಟಕ ಅರಸರ ಕಾಲದಲ್ಲಿ ಧರ್ಮಜಾಗ್ರತಿಯು ಎಷ್ಟರ ಮಟ್ಟಿಗೆ ಆಗಿತ್ತೆಂಬುದನ್ನು ನಾವು ಸ್ವಲ್ಪದರಲ್ಲಿಯೇ ಹೇಳುವೆವು. ಈ ಪ್ರಕರಣದಲ್ಲಿ ಮೂರೇ ವಿಷಯಗಳನ್ನು ಕುರಿತು ಹೇಳತಕ್ಕವರಿದ್ದೇವೆ. ಅವು ಯಾವುವೆಂದರೆ(೧) ನಮ್ಮಲ್ಲಿಯ ಧಾರ್ಮಿಕ ಗುರುಗಳು ರಾಜಕಾರಣವನ್ನು ಧಿಕ್ಕರಿಸಲಿಲ್ಲವೆಂಬುದು, (೨) ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮುಂತಾದ ಪ್ರಬಲಮತಗಳ ಉತ್ಪತ್ತಿಗೂ ಹೆಚ್ಚಳಕ್ಕೂ ಕರ್ನಾಟಕವೇ ಹುಟ್ಟು ಭೂಮಿಯೆಂಬುದು, (೩)ನಮ್ಮ ಅರಸರು ಪರಧರ್ಮ ಸಹಿಷ್ಣುತೆಯುಳ್ಳವರಾಗಿದ್ದರೆಂಬುದು.

ಸಾಮಾನ್ಯವಾಗಿ ಸಮಾಲೋಚಿಸಿದರೆ, ಹಿಂದುಸ್ಥಾನದೊಳಗಣ ರಾಜ್ಯಗಳೆಲ್ಲವೂ ಮೊದಲು ಧಾರ್ಮಿಕ ಪರುಷರಿಂದಲೇ ಉಗಮ ಹೊಂದಿರುವುವು, ಅಥವಾ ಪೋಷಿಸಲ್ಪಟ್ಟಿರುವುವು ಎಂದು ಕಂಡುಬರುವುದು. ಶ್ರೀರಾಮಚಂದ್ರನಿಗೆ ವಸಿಷ್ಠ - ವಿಶ್ವಾಮಿತ್ರರೇ ರಾಜಕೀಯ ಗುರುಗಳು; ಅರ್ಜುನನಿಗೆ ಶ್ರೀಕೃಷ್ಣನೂ ಯುಧಿಷ್ಠಿರನಿಗೆ ಭೀಷ್ಮಾಚಾರ್ಯರೂ ರಾಜ ನೀತಿಯ ಉದ್ಭೋಧಕರಾಗಿದ್ದರು. ಇಹಲೋಕದ ಸುಖಕ್ಕೆ ಮೆಚ್ಚಿ ಮರುಳಾಗದ ಪಂಡಿತರೇ ರಾಜವೈಭವವನ್ನು ಬೆಳೆಸಲಿಕ್ಕೆ ರಾಜರಿಗೆ ಸಹಾಯಕರ್ತರೂ ಉಪದೇಶಕರೂ ಆದರು. ಇವರು ತಮ್ಮ ಸುತ್ತಲೂ ಸಂಪತ್ತಿಯ ರಾಶಿಯು ಒಟ್ಟಿದ್ದರೂ, ಮತ್ತು ಆ ರಾಶಿಯನ್ನು ಹುಟ್ಟಿಸುವುದಕ್ಕೆ ತಾವೇ ಕಾರಣರಾಗಿದ್ದರೂ, ಅದರೊಳಗೆ ತಮ್ಮ ಮನಸ್ಸನ್ನು ತೊಡಕಿಸಿ ಅಂಧರಾಗಲಿಲ್ಲ. ಆದುದರಿಂದ, ಅವರು ಮಾಡಿದ ಉಪದೇಶವು ಸ್ವಾರ್ಥ ಬುದ್ಧಿಯಿಂದ ಆಲಿಪ್ತವಾಗಿ ಉಳಿಯುತ್ತಿತ್ತು. ಇದೊಂದು ಹಿಂದೂ ದೇಶದ ವೈಲಕ್ಷಣ್ಯವೆಂದೇ ಹೇಳಬೇಕು. ಬ್ರಾಹ್ಮಣರಾಗಲಿ ಬೇರೆ ಧಾರ್ಮಿಕ ಗುರುಗಳಾಗಲಿ ರಾಜಕೀಯ ಅವನತಿಯ ಕಾಲಕ್ಕೆ ಅದಕ್ಕೆ ಸಹಾಯವನ್ನೀಯಲಿಕ್ಕೂ “ಶಾಪಾದಪಿ ಶರಾದಪಿ” ಎಂಬಂತೆ, ಸಮಯ ಬಂದರೆ ತಾವೇ ಕೈಯಲ್ಲಿ ಖಡ್ಗ ಧರಿಸಲಿಕ್ಕೂ ಮುಂದಾಗಿರುವಂಥ ಸಂಗತಿಗಳು ನಮ್ಮ ಭಾರತೀಯ ಇತಿಹಾಸ