ಪುಟ:ಕರ್ನಾಟಕ ಗತವೈಭವ.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೧೧
೧೪ನೆಯ ಪ್ರಕರಣ - ಧಾರ್ಮಿಕ ಉನ್ನತಿ.

ದಲ್ಲೇನೂ ಒಂದೆರಡಿಲ್ಲ. ಪ್ರಸ್ತುತಕ್ಕೆ ನಮಗೆ ಕೇವಲ ಕರ್ನಾಟಕದ ವಿಚಾರವೇ ಕರ್ತವ್ಯವಿರುವುದರಿಂದ, ಆ ದೃಷ್ಟಿಯಿಂದಲೇ ನಾವು ಅದನ್ನು ವಿಮರ್ಶಿಸೋಣ.

ಕರ್ನಾಟಕದೊಳಗೆಲ್ಲಾ ಕದಂಬರು ಬಹಳ ಪ್ರಾಚೀನದ ಅರಸುಮನೆತನದವರು. ಈ ವಂಶದ ಮೂಲಪುರುಷನು ಮಯೂರಶರ್ಮನೆಂಬ ಬ್ರಾಹ್ಮಣನು. ಇವನು ವೇದಾಧ್ಯಯನ ಮಾಡಬೇಕೆಂಬ ಅಪೇಕ್ಷೆಯಿಂದ ಕಂಚಿಗೆ ಹೋಗಿರಲು, ಯಾವ ಕಾರಣದಿಂದಲೋ ಅವಮಾನಿತನಾದನು, ಮತ್ತು "ಕ್ಷತ್ರಿಯ ರಾಜರು ಬ್ರಾಹ್ಮಣರಿಗೆ ಅಪಮಾನ ಮಾಡುವುದಕ್ಕೆ ಅವರೇನು ಹೆಚ್ಚಿನವರು" ಎಂದು ಅವನ ಮನಸ್ಸಿನಲ್ಲಿ ಉದ್ಭವಿಸಿ ಅವನು ಕ್ಷತ್ರಿಯ ವೃತ್ತಿಯನ್ನು ಕೈಕೊಂಡನು. ಸಾರಾಂಶ:- ಆ ಅಪಮಾನವೇ ಅವನ ಕ್ಷತ್ರಿಯ ವೃತ್ತಿಗೆ ಬೀಜವಾಯಿತು. ಇದರಿಂದ, ಮೊದಲು ವೇದ ಪಠಿಸುತ್ತಿರುವವನು ಒಮ್ಮಿಂದೊಮ್ಮೆ ಶಸ್ತ್ರಧಾರಿಯಾಗಿ ಅದೇ ಪಲ್ಲವ ರಾಜರನ್ನು ಸೋಲಿಸಿ “ಕದಂಬ” ವಂಶವನ್ನು ಸ್ಥಾಪಿಸಿದನು. ಕದಂಬರ ಕಾಲೀನರಾದ 'ಗಂಗ' ಅರಸರಿಗೆ ಜೈನರು ಗುರುಗಳಾಗಿದ್ದರು. ಸಿಂಹನಂದಿಯೆಂಬ ಜೈನ ಗುರುವು ದಡ್ಡಿಗನ ಅಥವಾ ೨ನೆಯ ಮಾಧವನ ಗುರುವಾಗಿದ್ದನು. ಇವನೇ ಗಂಗರಾಜವಂಶದ ಅಸ್ತಿವಾರವನ್ನು ಹಾಕಿದನು. ಅದೇ ಮೇರೆಗೆ ಶಬ್ದಾವತಾರವೆಂಬ ವ್ಯಾಕರಣ ಗ್ರಂಥವನ್ನು ರಚಿಸಿದ ಪೂಜ್ಯಪಾದನೆಂಬವನು ದುರ್ವಿನೀತನ ಗುರುವಾಗಿದ್ದನು.

ಚಾಲುಕ್ಯರ ಅರಸನಾದ ರಾಜಸಿಂಹನಿಗೆ ಆಶ್ರಯಕೊಟ್ಟವನೂ ವಿಷ್ಣುಗೋಪನೆಂಬ ಬ್ರಾಹ್ಮಣನೇ. ರಾಜಸಿಂಹನ ತಂದೆಯಾದ ಜಯಸಿಂಹನು ಪಲ್ಲವರೊಡನೆ ಕಾದಿ ಮಡಿದ ಕಾಲಕ್ಕೆ, ಅವನ ಹೆಂಡತಿಯು ಬಸುರಾಗಿದ್ದಳು. ಅವಳಿಗೆ ಈ ವಿಷ್ಣು ಗೋಪನು ಆಶ್ರಯವನ್ನಿತ್ತು ರಾಜಸಿಂಹನನ್ನು ದೊಡ್ಡವನನ್ನಾಗಿ ಮಾಡಿದನು. ಈ ರಾಜಸಿಂಹನೇ ಚಾಲುಕ್ಯ ರಾಜ್ಯವನ್ನು ಮರಳಿ ಸ್ಥಾಪಿಸಿದನು. ಮತ್ತು ತನ್ನನ್ನು ರಕ್ಷಿಸಿದ ವಿಷ್ಣುಗೋಪನ ಸ್ಮರಣಾರ್ಥವಾಗಿ ವಿಷ್ಣುವರ್ಧನನೆಂದು ಹೆಸರಿಟ್ಟು ಕೊಂಡನು.

ರಾಷ್ಟ್ರಕೂಟರ ಪ್ರಖ್ಯಾತ ರಾಜನಾದ ನೃಪತುಂಗನ ಗುರು, ಆದಿಪುರಾಣದ ಕರ್ತನಾದ ಜಿನಸೇನನೆಂಬವನು. ಹೊಯ್ಸಳ ರಾಜ್ಯವು “ಸುದತ್ತ” ನೆಂಬ ಸನ್ಯಾಸಿಯ ಪ್ರೇರಣೆಯಿಂದಲೇ ಸ್ಥಾಪಿತವಾಯಿತು. ಈ ವಂಶಕ್ಕೆ ಸಂಬಂಧಪಟ್ಟ