ದೇವ ಬಿನ್ನಹ ನಿಮ್ಮ ಕಾರು| ಣ್ಯವ ಲೋಕನದಿಂದಲೆನ್ನ ಗು| ಣಾವಲಂ ಬನದಟ್ಟತನ ನೆರೆ ಕೆಟ್ಟಿದದರಿಂದ || ಜೀವಭಾವವನುಳಿದು ನಿಜ ಸಂ|ಭಾವಿಸಿತು ಸಂದೇಹ ಬೀತುದು| ದೇವನೀ ಹೇಳಿದುದ ಮಾಡುವೆನೆಂದನಾ ಪಾರ್ಥ ||
ಶ್ರೀಕೃಷ್ಣಾರ್ಪಣಮಸ್ತು.
ಪೂರಕ ಪ್ರಕರಣ ೧.
ಕರ್ನಾಟಕ-ಇತಿಹಾಸ-ಸಂಶೋಧನ
ಚಕರೇ ! ಕರ್ನಾಟಕ ಇತಿಹಾಸದ ವಿಷಯವಾಗಿ ಸಾಮಾನ್ಯವಾಗಿ ಹೇಳಬೇಕಾದುದೆಲ್ಲವನ್ನು ಹೇಳಿದವು. ಇನ್ನು, ಈ ಮುಂದಿನ ಪ್ರಕರಣಗಳಲ್ಲಿ, ಕರ್ನಾಟಕ ಇತಿಹಾಸ ಸಂಶೋಧನದ ಕಾರ್ಯಕ್ಕೆ ಅವಶ್ಯವಾಗಿ ಗೊತ್ತಿರಬೇಕಾಗಿರುವ ಕೆಲವು ಸಂಗತಿಗಳನ್ನು ಇಲ್ಲಿ ನಿವೇದಿಸಿ, ಸಂಶೋಧಕರು ಯಾವ ಮಾರ್ಗದಿಂದ ಸಾಗಬೇಕೆಂಬ ಬಗ್ಗೆ ನಮಗೆ ಗೊತ್ತಿದ್ದ ಮಟ್ಟಿಗೆ ಕೆಲವು ಸೂಚನೆಗಳನ್ನು ಮಾಡಿರುವೆವು. ಏಕೆಂದರೆ ಹಾಗೆ ಮಾಡದಿದ್ದರೆ, ಸಂಶೋಧಕರು ದಾರಿ ತಪ್ಪಿ ಅಡವಿಗೆ ಬೀಳುವ ಸಂಭವವುಂಟು.
ಹಿಂದೆ ೫ನೆಯ ಪ್ರಕರಣದಲ್ಲಿ ಇತಿಹಾಸಕ್ಕೆ ಉಪಲಬ್ದವಾಗಬಹುದಾದ ಸಾಧನ ಸಂಪತ್ತಿಯನ್ನು ಹೇಳಿರುವೆವಷ್ಟೆ. ಆ ಸಾಧನ ಸಾಮಗ್ರಿಯಲ್ಲಿ ಸ್ಥೂಲವಾಗಿ ಎರಡು ವರ್ಗಗಳನ್ನು ಮಾಡಬಹುದು, (೧) ಪ್ರಾಚೀನ ವಸ್ತು ಸಂಶೋಧನ, (೨) ಹಿಂದಿನ ವಾಙ್ಮಯ ಸಂಶೋಧನ. ಇವುಗಳಲ್ಲಿ ಎರಡನೆಯದರ ಬಗ್ಗೆ ಹೆಚ್ಚಿಗೆ ಹೇಳುವ ಕಾರಣವಿಲ್ಲ. ಚನ್ನಬಸವಪುರಾಣ, ಕನಕದಾಸ, ಪುರಂದರದಾಸರ ಪದಗಳು ಮುಂತಾದುವುಗಳನ್ನು ಇತಿಹಾಸ ದೃಷ್ಟಿಯಿಂದ ಓದಿ, ಅವುಗಳಲ್ಲಿ ದೊರೆಯುವ ಇತಿಹಾಸದ ಅಂಶವನ್ನು ಒಂದೆ ಕಡೆಗೆ ಕೂಡಿಸಿಟ್ಟರೆ, ಕರ್ನಾಟಕದ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಉಪಯೋಗವಾಗಬಹುದು. ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಕನ್ನಡ ಮತ್ತು ಸಂಸ್ಕೃತ ಪುಸ್ತಕಗಳನ್ನು