ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧ನೆಯ ಪೂರಕ ಪ್ರಕರಣ -ಕರ್ನಾಟಕ-ಇತಿಹಾಸ-ಸಂಶೋಧನ
೧೩೯

ದೃಷ್ಟಿಯಿಂದ ಇವರು ಇವುಗಳನ್ನು ಅವಲೋಕಿಸಿ, ಪುಸ್ತಕವನ್ನು ಬರೆದರು. ಇವರು ನೋಡದೆ ಇದ್ದ ಕಟ್ಟಡಗಳೇ ಇಲ್ಲ, ರೇಲ್ವೆ ಸ್ಟೇಶನದಿಂದ ಬಹು ದೂರದಲ್ಲಿರುವ ಹಳ್ಳಿ ಹಳ್ಳಿಗಳಲ್ಲಿ ಸಹ ಹೋಗಿ ಇವರು ಕಟ್ಟಡಗಳ ಚಿತ್ರವನ್ನು ತೆಗೆದುಕೊಂಡು, ಅದರಿಂದ ಇತಿಹಾಸಕ್ಕೆ ಹೇಗೆ ಸಹಾಯವಾಗುತ್ತದೆಂಬುದನ್ನು ಸಪ್ರಮಾಣವಾಗಿ ತೋರಿಸಿಕೊಟ್ಟಿರುವರು. ಇವರು ಕರ್ನಾಟಕದಲ್ಲಿ, ಬಾದಾಮಿ, ಐಹೊಳೆ, ಪಟ್ಟದಕಲ್ಲ, ಲಕ್ಕುಂಡಿ, ಇಟಗಿ ಮುಂತಾದ ಅನೇಕ ಸ್ಥಳಗಳನ್ನು ನೋಡಿ ಅಲ್ಲಿಯ ಕಟ್ಟಡಗಳನ್ನು ವರ್ಗೀಕರಿಸಿದ್ದಾರೆ. ಇವರ ಶೋಧದಿಂದಲೇ ಹುರುಪುಗೊಂಡು ರಾಯಲ್ ಏಶಿಯಾಟಿಕ್ ಸೊಸಾಯಿಟಿಯವರು, ಇಂಗ್ಲೆಂಡಿನಲ್ಲಿಯ ಕೋರ್ಟ ಆಫ ಡಾಯರೇಕ್ಟರರಿಗೆ ಬರೆದು ಅಜಂತಾಗವಿಯೊಳಗಿನ ಚಿತ್ರಗಳನ್ನು ತೆಗೆಯಲಿಕ್ಕೆ ಹಚ್ಚಿದರು. ಆಮೇರೆಗೆ ರಾಬರ್ಟಗಿಲ್ ಎಂಬವರು ೧೨ ವರ್ಷ ಶ್ರಮಪಟ್ಟು ಅಜಂತೆಯೊಳಗಿನ ಚಿತ್ರಗಳನ್ನು ನಕ್ಷೆ ತೆಗೆದುಕೊಂಡರು. ಆದರೆ ಕನ್ನಡಿಗರ ದುರ್ದೈವದಿಂದ ಅವೆಲ್ಲವೂ ೧೮೫೬ ನೆಯ ದಿಶೆಂಬರ ತಿಂಗಳಲ್ಲಿ ಕ್ರಿಸ್ಟಲ ಪ್ಯಾಲೇಸಿಗೆ ಬೆಂಕಿ ಹತ್ತಿ ಸುಟ್ಟು ಹೋದುವು. ೧೮೪೮ ನೆಯ ಇಸವಿಯಲ್ಲಿ ಡಾ. ವುಯಿಲಸನ ಎಂಬವರ ಅಧ್ಯಕ್ಷತೆಯಲ್ಲಿ ಕೇವ್ಹ ಟೆಂಪಲ್ ಕಮಿಶನ್ (Cave temple Commission) ನೇಮಿಸಲ್ಪಟ್ಟಿತು. ಈ ಕಮಿಶನದವರು, ೧೮೫೦-೫೨ ಇಸವಿಗಳಲ್ಲಿ ಪಶ್ಚಿಮ ಹಿಂದುಸ್ಥಾನದಲ್ಲಿರುವ ಬೌದ್ಧರ ಬ್ರಾಹ್ಮಣರ ಮತ್ತು ಜೈನರ ಗವಿಗುಡಿಗಳ ಮತ್ತು ಮಠಗಳ ಅವಶೇಷಗಳ ವಿಷಯಕ್ಕೆ (Two memoirs of the cave temples and monastries and other ancient Buddhest Brahmanical and Jain Remains of Western India) ಎಂಬೆರಡು ಪುಸ್ತಕಗಳನ್ನು ಪ್ರಸಿದ್ಧ ಪಡಿಸಿದರು. ಮುಂದೆ ಸರ್ ಬಾರ್ಟಲ್ ಫ್ರೀರ್‌ (Sir Bartle Frere) ಇವರು ಮುಂಬಯಿ ಗವರ್ನರರಿದ್ದಾಗ ಇತ್ತ ಕಡೆಯ ಚಿತ್ರಗಳ ತಸವೀರು ತೆಗೆಯುವುದಕ್ಕಾಗಿ ಒಂದು ಕಮಿಟಿಯು ನೇಮಿಸಲ್ಪಟ್ಟಿತು. ಈ ಕಮಿಟಿಯವರು ಡಾ. ಫರ್ಗ್ಯುಸನ ಇವರ ಸಹಾಯದಿಂದ ಮೂರು ಪುಸ್ತಕಗಳನ್ನು ತೆಗೆದರು. ಅವು ಯಾವುವೆಂದರೆ (೧) ಅಹಮ್ಮದಾಬಾದ, (೨) ಬಿಜಾಪುರ (4) ಮೈಸೂರ ಮತ್ತು ಧಾರವಾಡ. ಡಾ. ಫರ್ಗ್ಯುಸನ ಇವರಿಗೆ ಸರಕಾರದವರ ಸಹಾಯವು