ಪುಟ:ಕರ್ನಾಟಕ ಗತವೈಭವ.djvu/೧೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೩೮
ಕರ್ನಾಟಕ-ಗತವೈಭವ

deration for the productions, of our own time-if indeed any are worthy of such-unless we have ourselves shown a like respect to the hand-work of our predecessors. ಸಾರಾಂಶ: – ನಮ್ಮ ಪೂರ್ವಜರ, ಸರೀಕದವರ ಮತ್ತು ವಂಶಜರ ಸಂಬಂಧದಿಂದ ನಾವು ಮಾಡತಕ್ಕದ್ದೊಂದು ಕರ್ತವ್ಯವಿದೆ - ಅಲ್ಲ, ಕೊನೆಯ ಕೊನೆಯ ಇಬ್ಬರ ವಿಷಯವಾಗಿ ನಾವು ಮಾಡಬೇಕಾಗಿರುವ ಕರ್ತವ್ಯವೇ ನಾವು ನಮ್ಮ ಪೂರ್ವಜರ ವಿಷಯವಾಗಿ ಮಾಡತಕ್ಕ ಕರ್ತವ್ಯವಾವುದೆಂಬುದನ್ನು ತೋರಿಸಿಕೊಡುತ್ತದೆ. ಯಾಕಂದರೆ, ನಮ್ಮ ಹಿಂದಿನವರು ಮಾಡಿದ ಕೆಲಸಗಳ ಇಡಿಗಂಟು ನಮ್ಮ ಕಡೆಗೆ ಬಂದಿರುತ್ತದೆ. ಅದನ್ನು ನಾವು ಯೋಗ್ಯ ರೀತಿಯಿಂದ ನಮ್ಮ ವಂಶಜರಿಗೆ ಒಪ್ಪಿಸದಿದ್ದ ಮೂಲಕ ನಾವು ಅನುಭೋಗಿಸುವ ಅದರ ಲಾಭಗಳಿಗೆ ಅವರು ಎರವಾದರೆ ಆ ದೋಷಕ್ಕೆ ನಾವು ಪಾತ್ರರಲ್ಲವೆ? ಇದೂ ಅಲ್ಲದೆ, ನಾವೇ ನಮ್ಮ ಪೂರ್ವಜರ ಕೃತಿಗಳ ಬಗ್ಗೆ ಯೋಗ್ಯವಾದ ಅಭಿಮಾನವನ್ನು ತಾಳದಿದ್ದರೆ ನಮ್ಮ ಕೃತಿಗಳ ಬಗ್ಗೆ (ಅಂಥ ಅಭಿಮಾನ ತಾಳಲಿಕ್ಕೆ ಯೋಗ್ಯವಾದವುಗಳು ಇದ್ದರೆ) ನಮ್ಮ ವಂಶಜರು ಅಭಿಮಾನ ತಾಳಿಯಾರೆಂದು ಆಶಿಸುವುದು ಹೇಗೆ?
ಈ ಪ್ರಕಾರವಾಗಿ, ಇತಿಹಾಸದ ಬಗ್ಗೆ ಯಾವ ಸಂಸ್ಥೆಗಳು ಹಿಂದಕ್ಕೆ ಪ್ರಯತ್ನ ಪಟ್ಟವೆಂಬುದನ್ನೂ ಈಗ ಯಾವುವು ಪ್ರಯತ್ನ ಪಡುತ್ತಿರುವುವೆಂಬುದನ್ನೂ ಹೇಳಿದೆವು.
ಇನ್ನು ಇವರ ಪ್ರಯತ್ನಗಳ ಪರಿಣಾಮವು ಏನಾಗಿರುವದೆಂಬದರ ವಿಷಯಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದ ಸಂಗತಿಗಳನ್ನಷ್ಟೇ ವಿಶೇಷವಾಗಿ ಹೇಳುವೆವು.
ಈ ವಿಷಯವಾಗಿ ಎಲ್ಲಕ್ಕೂ ಮೊದಲು ವಿಶೇಷವಾಗಿ ಪ್ರಯತ್ನ ಮಾಡಿದವರೆಂದರೆ ಸರ್ ಜೇಮ್ಸ್ ಫರ್ಗ್ಯೂಸನ್ (೧೮೦೮-೧೮೮೬) ಎಂಬವರು. ಇವರು ೧೮೩೪ ನೆಯ ಇಸವಿಯಿಂದ ೧೮೪೫ರವರೆಗೆ ಹಿಂದುಸ್ಥಾನದಲ್ಲೆಲ್ಲ ತಿರುಗಾಡಿ, ಗುಡ್ಡದಲ್ಲಿ ಕೊರೆದ ಗುಡಿಗಳನ್ನೂ, ಮಿಕ್ಕ ಕಟ್ಟಡಗಳನ್ನೂ ಶಾಸ್ತ್ರೀಯ ರೀತಿಯಿಂದ ಶೋಧನ ಮಾಡಿದರು. ಕೇವಲ ಇತಿಹಾಸ ದೃಷ್ಟಿಯಿಂದಲ್ಲದಿದ್ದರೂ ಶಿಲ್ಪಶಾಸ್ತ್ರ