ನಾದ ಕೃಷ್ಣನೆಂಬೊಬ್ಬ ರಾಷ್ಟ್ರಕೂಟದ ಅರಸನು ಕಟ್ಟಿಸಿದನೆಂದರೆ, ಅಹುದೋ, ಅಲ್ಲವೋ, ಎಂದು ನಿಮ್ಮ ಮನಸ್ಸು ಸಂಶಯಗ್ರಸ್ತವಾಗಬಹುದಲ್ಲವೇ! ಬಾದಾಮಿಯ ಮೇಣಬಸ್ತಿಗಳೂ, ಕಾರ್ಲೆಯ ಅತ್ಯಂತ ಮನೋಹರವಾದ ಚೈತ್ಯಾಲಯವೂ, ಅಜಂತೆಯೊಳಗಿನ ನಿತಾಂತ ಸುಂದರವಾದ ಚಿತ್ರಗಳೂ, ಇವೆಲ್ಲವೂ ನಿಮ್ಮ ಕನ್ನಡನಾಡಿನ ಕಲ್ಲುಕುಟಿಗರ ಕೈಗಾರಿಕೆಗಳೇ ! ಕರ್ನಾಟಕದೊಳಗಿನ ಶ್ರವಣಬೆಳಗುಳದ ಗೋಮಠೇಶ್ವರನ ಭವ್ಯವೂ ರಮಣೀಯವೂ ಆದ ಮೂರ್ತಿಯು ಸಾವಿರಾರು ಮೈಲುಗಳ ಮೇಲಿರುವ ಜಪಾನ ಮತ್ತು ಚೀನ ದೇಶಗಳ ಜನರನ್ನು ಸಹ ಸೂಜಿಗಲ್ಲಿನಂತೆ ಎಳೆಯ ಹತ್ತಿರುವುದಿಲ್ಲವೇ! ಲಂಡನ್ನಿನಷ್ಟು ವಿಸ್ತೀರ್ಣವಾದ ಪಟ್ಟಣವು ಲೋಕದಲ್ಲಿ ಇದ್ದಿಲ್ಲವಂತಲೇ ನಿಮ್ಮ ತಿಳಿವಳಿಕೆಯಲ್ಲವೇ! ಆದರೆ ಈಗ ಹಾಳಾಗಿರುವ ವಿಜಯನಗರದೊಳಗೆ ಹಿಂದಕ್ಕೆ ೫೦-೬೦ ಲಕ್ಷ ಜನರು ವಾಸಿಸುತಿದ್ದರೆಂದು ವಿದ್ವಾಂಸರು ತರ್ಕಕಟ್ಟುತ್ತಾರೆ. ನೋಡಿದ ಕಡೆಯಲ್ಲೆಲ್ಲ ವಿಶಾಲವಾದ ರಾಜಬೀದಿಗಳಿಂದಲೂ, ಉನ್ನತವಾದ ಗೋಪುರಗಳಿಂದಲೂ, ಸುಂದರವಾದ ಗುಡಿಗಳಿಂದಲೂ, ಭವ್ಯವಾದ ಕೋಟೆ ಕೊತ್ತಳಗಳಿಂದಲೂ, ಜೀರ್ಣವಾದ ರಮ್ಯೋದ್ಯಾನಗಳಿಂದಲೂ ತುಂಬಿಕೊಂಡಿದ್ದು, ಈಗ ಕುರುಹಿಗೆ ಮಾತ್ರ ಉಳಿದಿರುವ ಆ ಕರ್ನಾಟಕ ರಾಜಧಾನಿಯನ್ನು ನೋಡಿ, ಕಣ್ಣೀರು ಸುರಿಸದ ಪಾಪಿ ಯಾರು!
ಕನ್ನಡಿಗರೇ, ನಿಮ್ಮ ಭಾಗ್ಯವನ್ನು ಎಷ್ಟೆಂದು ವರ್ಣಿಸಬೇಕು! ಜಗದೊಳಗೆಲ್ಲ ಸೌಂದರ್ಯಾತಿಶಯದಿಂದ ಮೆರೆಯುತ್ತಿರುವ ಬೇಲೂರಿನ ಚನ್ನಕೇಶವನ ದೇವಾಲಯವನ್ನೂ, ಒಂದೇ ಸಮವಾಗಿ ೮೬ ವರ್ಷಗಳವರೆಗೆ ಕಟ್ಟಿದರೂ ಪೂರ್ಣವಾಗದೆ ಇರುವ ಅತ್ಯಂತ ಸುಂದರವಾದ ಹೊಯ್ಸಳೇಶ್ವರನ ಗುಡಿಯನ್ನೂ, ನಿಮ್ಮ ಕನ್ನಡಿಗರ ಅಲ್ಲಿಯ ಅತಿ ಕುಶಲವಾದ ಕುಸುರು ಕೆಲಸವನ್ನೂ ಕಂಡು, ಆ ಕಾಲದ ವೈಭವವನ್ನೂ, ಬುದ್ದಿವಂತಿಕೆಯನ್ನೂ ನೆನಿಸಿ ಉಸುರ್ಗರೆಯದ ಮನುಷ್ಯನಾವನು! ಈ ಗುಡಿಗಳು ಸೌಂದರ್ಯದ ಕಳಸಗಳೆಂದರೂ ಸಲ್ಲುವುದು.
ಕನ್ನಡಿಗರೇ, ನಮ್ಮ ಇತಿಹಾಸದಲ್ಲಿ ಮತ್ತೊಂದು ವಿಶೇಷವುಂಟು. ಯಾವುದೆಂದರೆ, ಮಿಕ್ಕ ಭಾಷಾ ಪ್ರಾಂತಗಳಲ್ಲಾಗಿರುವಂತೆ ನಮ್ಮ ಭಾಷೆಯಲ್ಲಿ ಅದಲು ಬದಲುಗಳಾಗಿಲ್ಲ, ಹಿಂದಕ್ಕೆ ನಮ್ಮ ಅರಸರೂ ವಿದ್ವಾಂಸರೂ ಆಡುತ್ತಿದ್ದ ಭಾಷೆ ಯನ್ನೇ ನಾವೀಗ ಆಡುತ್ತೇವೆ, ಕನ್ನಡ ತಮಿಳುಗಳ ಹೊರ್ತು ಇತರ ಜನಾಂಗ
ಪುಟ:ಕರ್ನಾಟಕ ಗತವೈಭವ.djvu/೫೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಕರ್ನಾಟಕ ಗತವೈಭವ