ಪುಟ:ಕರ್ನಾಟಕ ಗತವೈಭವ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೯
೪ನೆಯ ಪ್ರಕರಣ – ಕರ್ನಾಟಕದ ವಿಭೂತಿಗಳು

ಪಂತ, ಮುಕೇಶ್ವರರು, ಕೃಷ್ಣದೇವರಾಯನೇ ನಮ್ಮ ಅಕಬರನು, ಹೊನ್ನಮ್ಮ ಗಿರಿಯಮ್ಮ ಇವರೇ ಮುಕ್ತಾಬಾಯಿ ಮಾರಾಬಾಯಿಯವರು, ವಿಜಯಮಹಾ ದೇವಿ, ಮೈರಳದೇವಿಯವರೇ ನಮ್ಮ ತಾರಾಬಾಯಿ ಅಹಲ್ಯಾಬಾಯಿಯವರು, ಅಕ್ಕಾದೇವಿ, ಕಿತ್ತೂರಿನ ಚನ್ನಮ್ಮ ಇವರೇ ನಮ್ಮ ಝಾಂಸಿ ಲಕ್ಷ್ಮಿ ಬಾಯಿಯವರು. ವಾಚಕರೇ, ಈ ವಿಧವಾಗಿ ನಮ್ಮ ಪ್ರಾಚೀನ ಇತಿಹಾಸವು ಮಹಾಪುರುಷರಿಂದಲೂ, ಮಹಾ ಸತಿಯರಿಂದಲೂ ತುಂಬಿಕೊಂಡಿದ್ದು, ಕನ್ನಡಿಗರಾದ ನಮಗೆ ಮಾತ್ರ ಅದು ಕಾದಂಬರಿಯಂತೆ ಕಾಣುತ್ತಿರುವುದು ಎಂಥ ದೈವದುರ್ವಿಲಾಸವು ! ಈ ನಿಮ್ಮ ವಿಭೂತಿಗಳ ನಾಮಾವಳಿಯನ್ನು ಕೇಳಿ ಕನ್ನಡಿಗರೇ ಇನ್ನಾದರೂ ಕಣ್ಣೆರಿಯಿರಿ!
ಮ್ಮ ಕರ್ನಾಟಕದ ಅರಸರು ಈ ದೇಶದಲ್ಲಿ ಮಾತ್ರವೇ ಪ್ರಖ್ಯಾತರೆಂತಲ್ಲ. ಅವರು ಇರಾಣ ಮುಂತಾದ ಪರದೇಶದ ಚಕ್ರವರ್ತಿಗಳ ಕಡೆಗೆ ಕೂಡ ತಮ್ಮ ರಾಯಭಾರಿಗಳನ್ನು ಕಳುಹಿಸುತ್ತಿದ್ದರೆಂದು ಹೇಳಿದರೆ ಕನ್ನಡಿಗರಿಗೆ ಅದು ಕನಸಿನಂತೆ ಭಾಸವಾಗಬಹುದು, ಆದರೆ ಕನ್ನಡಿಗರೇ ! ಅದು ಕನಸಲ್ಲ. ಈ ಪುಲಿಕೇಶಿಯೇ ತನ್ನ ರಾಯಭಾರಿಗಳನ್ನು ಇರಾಣದ ಅರಸರ ಕಡೆಗೆ ಕಳುಹಿಸಿದ್ದನು. ಅಲ್ಲದೆ, ಇರಾಣದ ಅರಸನು ತನ್ನ ರಾಯಭಾರಿಗಳನ್ನು ನಮ್ಮ ಬಾದಾಮಿಯ ಪುಲಿಕೇಶಿಯ ಒಡೋಲಗಕ್ಕೆ ಕಳುಹಿದ್ದನು. ಇದರ ಪ್ರತ್ಯಕ್ಷ ಚಿತ್ರವು ಉತ್ತರದಲ್ಲಿರುವ ಅಜಂತೆಯ ಗವಿಯೊಳಗೆ ಈಗಲೂ ಸ್ಪಷ್ಟವಾಗಿ ಕಂಗೊಳಿಸುತ್ತಿದೆ. ಕನ್ನಡಿಗರು ಆ ತಮ್ಮ ಸಾರ್ವಭೌಮನ ಚಿತ್ರವನ್ನು ಒಮ್ಮೆಯಾದರೂ ಕಣ್ಣಾರೆ ಕಂಡು ಧನ್ಯರಾಗಬಾರದೇ ? (ಆ ಭಾವಚಿತ್ರವನ್ನು ಇಲ್ಲಿ ಕೊಟ್ಟಿರುವೆವು. ಯಾವನೋ ದುಷ್ಟನಿಂದ ಪುಲಿಕೇಶಿಯ ಅಲ್ಲಿಯ ಮುಖವು ವಿಕೃತನಾಡಲ್ಪಟ್ಟಿದೆ!) ಸುಮಾರು ೧೩೦೦ ವರ್ಷಗಳ ಹಿಂದಿನ ಇಂಥ ಹಳೆಯ ಚಿತ್ರವು ಕರ್ನಾಟಕರಿಗೆ ದೊರೆತಿದ್ದು ಅವರ ಮಹತ ಪುಣ್ಯವಲ್ಲವೇ !
ನ್ನಡಿಗರೇ, ನಿಮ್ಮ ಜನರು ಮಾಡಿದ ಅತ್ಯದ್ಭುತ ಕಾರ್ಯಗಳ ಕಡೆಗೆ ಇನ್ನು ನಿಮ್ಮನ್ನು ಒಯ್ಯುತ್ತೇವೆ. ಹಿಂದುಸ್ಥಾನದೊಳಗಿನ- ಅಲ್ಲ-ಜಗತ್ತಿನೊಳಗಿನ ಸೋಜಿಗವಾದ ಮತ್ತು ಅದ್ಭುತವಾದ, ಕಲ್ಲಿನೊಳಗೆ ಕೊರೆದ ಅಖಂಡ ದೇವಾಲಯ ವೆಂದರೆ, ವೇರೂಳದ ಕೈಲಾಸದೇವಾಲಯವು, ಈ ದೇವಾಲಯವನ್ನು ಕನ್ನಡಿಗ