ಪುಟ:ಕರ್ನಾಟಕ ಗತವೈಭವ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಕರ್ನಾಟಕ ಗತವೈಭವ


ರ್ನಾಟಕದ ಸ್ತ್ರೀಯರೇನು ಕಡಿಮೆ ಪ್ರಸಿದ್ದರೆ? ನಮ್ಮ ಕರ್ನಾಟಕದ ಸ್ತ್ರೀಯರ ಹೆಸರುಗಳೂ ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಷ್ಟು ಉಜ್ವಲವಾಗಿವೆ. ಸುಪ್ರಸಿದ್ಧ ಪುಲಕೇಶಿ ಮಹಾರಾಜನ ಹಿರಿಯ ಸೊಸೆಯಾದ 'ವಿಜಯಮಹಾದೇವಿ'ಯು ಅಬಲೆಯಾದರೂ ರಾಜ್ಯಭಾರವನ್ನು ಬಹು ಚಾತುರ್ಯದಿಂದ ತೂಗಿಸಿಕೊಂಡು ಹೋಗಲಿಲ್ಲವೇ ! ಪಶ್ಚಿಮ ಚಾಲುಕ್ಯರ ೨ನೆಯ ಸೋಮೇಶ್ವರನ 'ಹಿರಿಯರಸಿ'ಯಾದ 'ಮೈರಳಾದೇವಿ'ಯು ಆಗಿನ ಕಾಲಕ್ಕೆ ಮುಂಬಯಿ ಪ್ರಾಂತದಷ್ಟು ದೊಡ್ಡದಾದ ಬನವಾಸಿ ಪ್ರಾಂತವನ್ನಾಳಿರುವುದು ಕರ್ನಾಟಕ ಸ್ತ್ರೀ ಸಮಾಜಕ್ಕೆ ಎಷ್ಟು ಗೌರವಾಸ್ಪದವಾದ ಸಂಗತಿಯು ? ಪಶ್ಚಿಮ ಚಾಲುಕ್ಯರ ೩ನೆಯ ಜಯಸಿಂಹನ ತಂಗಿಯರಾದ 'ಅಕ್ಕಾದೇವಿಯರ್ ಕಿಸುನಾಡ ಪಟ್ಟಂ ಸುಖ ಸಂಕಥಾ ವಿನೋದದಿಂ ಆಳುತ್ತಿರೆ' ಆಗಿನ ಕಾಲಕ್ಕೆ ಗೋಕಾವಿಯಲ್ಲಿದ್ದ ಬಂಡಾಯವನ್ನು ಮುರಿದೊತ್ತಿ, 'ರಣಭೈರವಿ' ಎಂಬ ತಮ್ಮ ಅಭಿದಾನವನ್ನು ಸಾರ್ಥಕಗೊಳಿಸಿದ ಸಂಗತಿಯನ್ನು ಕೇಳಿದೊಡನೆ ಯಾವ ಕನ್ನಡಿಗನ ಮುಂದೆ ಆ ವೀರಾಂಗನೆಯ ಚಿತ್ರವು ಬಂದು ನಿಲ್ಲದೆ ಇದ್ದೀತು ! ಕಂತಿ, ನೀಲಮ್ಮ, ಹೊನ್ನಮ್ಮ, ಗಿರಿಯಮ್ಮ, ಇವರು ರಚಿಸಿದ 'ಪ್ರಸಾದ ಸಂಪಾದನ' 'ಹದಿಬದೆಯ ಧರ್ಮ' 'ಚಂದ್ರಹಾಸಚರಿತ್ರೆ' ಇವೇ ಮೊದಲಾದ ಗ್ರಂಥರತ್ನಗಳು ಕನ್ನಡತಿಯರಿಗೆ ಆವರಣವೂ ಆದರ್ಶವಾಗದೆ ಇರವು ! ಮೊನ್ನೆ ಮೊನ್ನೆ ಕರ್ನಾಟಕದ ಕಣ್ಣಿಗೆ ಬಿದ್ದಿರುವ 'ವೀರಕಂಪಣರಾಯಚರಿತ'ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯದ ಕರ್ತಿಯೂ ಶುದ್ಧ ಕರ್ನಾಟಕ ರಾಜಪುತ್ರಿಯೇ. ಅವಳ ಹೆಸರು 'ಗಂಗಾದೇವಿ'. ಇವಳು ವಿಜಯನಗರದ ಪ್ರಖ್ಯಾತ ಅರಸನಾದ ಬುಕ್ಕರಾಯನ ಸಾಕ್ಷಾತ್‌ ಸೊಸೆ, ಸಾರಾಂಶ:- ಕನ್ನಡಿಗರಾದ ಕರ್ನಾಟಕ ವರಕವಿಗಳನ್ನು ನಿತ್ಯದಲ್ಲಿ ಸ್ಮರಿಸಿ ಅವರ ಅಡಿಯಲ್ಲಿ ಕುಳಿತು, ಈಗಿನ ಕವಿಗಳು ಕವಿತೆಯ ಸ್ಫೂರ್ತಿ ಯನ್ನು ಪಡೆಯಬೇಕು!
ಲುಮಾತಿನಿಂದೇನು ! ಪುಲಿಕೇಶಿ, ಗೋವಿಂದ, ನೃಪತುಂಗ, ತೈಲಪ, ವಿಕ್ರಮ ಇವರೇ ನಮ್ಮ ಶಿವಾಜೀ ಬಾಜೀರಾಯ ಮುಂತಾದವರು ವಿದ್ಯಾರಣ್ಯರೇ ನಮ್ಮ ರಾಮದಾಸರು, ಪುರಂದರದಾಸ ಕನಕದಾಸರೇ ನಮ್ಮ ಜ್ಞಾನೇಶ್ವರ ತುಕಾರಾಮರು, ಪಂಪ, ರನ್ನ, ಲಕ್ಷ್ಮೀಶ ಷಡಕ್ಷರಿಗಳೇ ನಮ್ಮ ಮೋರೋ