ಪುಟ:ಕರ್ನಾಟಕ ಗತವೈಭವ.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೭೧
೧೦ನೆಯ ಪ್ರಕರಣ - ದೇವಗಿರಿ ಯಾದವರು

ದೇವಗಿರಿ ಯಾದವರು
(೧೧೧೩-೧೩೧೮ ).

ಚಾ

ಲುಕ್ಯರ ಅಳಿಗಾಲಕ್ಕೆ ಆರಂಭವಾದಾಗ, ಹೊಯ್ಸಳ ಯಾದವರ ಅರಸನಾದ ವಿಷ್ಣುವರ್ಧನನು, ಕೃಷ್ಣಾನದಿಯ ಹತ್ತಿರವಿರುವ ಚಾಲುಕ್ಯರ ಸೀಮೆಯನ್ನು ಕಿತ್ತುಕೊಳ್ಳಲಿಕ್ಕೆ ಪ್ರಯತ್ನಿಸಿದ್ದನು. ಆದರೆ ಆಗಿನ ಚಾಲುಕ್ಯರ ಅರಸನು ಪ್ರಬಲನಾಗಿದ್ದುದರಿಂದ ವಿಷ್ಣುವರ್ಧನನ ಆಟವು ಸಾಗಲಿಲ್ಲ. ಮುಂದೆ ಚಾಲುಕ್ಯ ವಂಶವು ಅಡಗಿ, ಕಲಚೂರಿವಂಶವು ಕೂಡ ನಷ್ಟವಾಗಿ, ರಾಜ್ಯದಲ್ಲಿ ಗೊಂದಲವೆದ್ದಾಗ, ವಿಷ್ಣುವರ್ಧನನ ಮೊಮ್ಮಗನಾದ ವೀರಬಲ್ಲಾಳನು ಬೊಮ್ಮನೊಡನೆ ಕಾಳಗವಾಡಿ, ಕೆಲವು ಸೀಮೆಯನ್ನು ತೆಗೆದುಕೊಂಡನು. ಇದೇ ಸಂಧಿಯನ್ನು ಸಾಧಿಸಿ, ಉತ್ತರದಲ್ಲಿಯೂ ಯಾದವರು ಸುತ್ತ ಮುತ್ತಲೂ ತಮ್ಮ ಕಾಲು ಚಾಚಿದರು. ಭಿಲ್ಲಮನು ರಾಜ್ಯ ವಿಸ್ತಾರವನ್ನು ಮಾಡಿ ಕಲ್ಯಾಣದ ಅರಸೊತ್ತಿಗೆಯನ್ನು ಎತ್ತಿ ಹಾಕಿದನು. ಅವನು ಕೃಷ್ಣೆಯ ಉತ್ತರಕ್ಕಿರುವ ಸೀಮೆಗೆಲ್ಲಾ ಅರಸನಾಗಿ, ೧೧೮೭ ನೆಯ ಇಸವಿಯಲ್ಲಿ ದೇವಗಿರಿ ಪಟ್ಟಣವನ್ನು ಸ್ಥಾಪಿಸಿ ಅಲ್ಲಿ ಆಳತೊಡಗಿದನು. ಇತ್ತ ಹೊಯ್ಸಳ ಅರಸನಾದ ವೀರಬಲ್ಲಾಳನು ಉತ್ತರಕ್ಕೆ ಕೈಚಾಚುತ್ತಿದ್ದನು. ಈ ಮೇರೆಗೆ ಹೊಯ್ಸಳ ಯಾದವರಿಗೂ ದೇವಗಿರಿ ಯಾದವರಿಗೂ ಕೃಷ್ಣಯ ಹತ್ತಿರವಿರುವ ಸೀಮೆಯ ಒಡೆತನಕ್ಕಾಗಿ ಮೇಲೆ ಮೇಲೆ ಕಾಳಗಗಳೆದ್ದ ವು, ಕೊನೆಗೆ ಲಕ್ಕುಂದಿಯಲ್ಲಾದ ದೊಡ್ಡ ಕಾಳಗದಲ್ಲಿ, ಹೊಯ್ಸಳ ಅರಸನಾದ ವೀರಬಲ್ಲಾಳನು, ಭಿಲ್ಲಮನ ಮಗನಾದ ಜೈತೃ ಸಿಂಹನನ್ನು ಸಂಪೂರ್ಣವಾಗಿ ಸೋಲಿಸಿ, ಕುಂತಳ ದೇಶಕ್ಕೆ ಅಧಿಪತಿಯಾದನು. ಭಿಲ್ಲಮನ ತರುವಾಯ ೧೧೧೩ ನೆಯ ಶಕದಲ್ಲಿ, ಅವನ ಮಗನಾದ ಜೈತೃ ಪಾಲನು ಅಥವಾ ಜೈತುಗಿಯು ಪಟ್ಟವೇರಿದನು. ಪ್ರಸಿದ್ಧ ಜ್ಯೋತಿಷ್ಯನಾದ ಭಾಸ್ಕರಾಚಾರ್ಯರ ಮಗನಾದ ಲಕ್ಷ್ಮೀಧರನು ಈ ಜೈತೃಪಾಲನ ಆಸ್ಥಾನದಲ್ಲಿ ಪಂಡಿತನಾಗಿದ್ದನು.

ನಂತರ ಅವನ ಮಗನಾದ ಸಿಂಘಣನು ಅರಸನಾದನು. ದೇವಗಿರಿ ಯಾದವರೊಳಗೆ ಇವನೇ ಶ್ರೇಷ್ಟನು, ಈತನು ಮಾಳವ ಮುಂತಾದ ಅರಸರನ್ನು ಗೆದ್ದನು, ಮಧುರೆಯ ಮತ್ತು ಕಾಶಿಯ ಅರಸರು ಇವನಿಂದ ಕೊಲ್ಲಲ್ಪಟ್ಟರು. ಈತನು ಹೊಯ್ಸಳರನ್ನು ಗೆದ್ದು ಉತ್ತರಸೀಮೆಯನ್ನು ಸೆಳೆದುಕೊಂಡನು. ಸಿಂಘ