ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94 ಮಹಾಭಾರತ [ಸಭಾಪರ್ವ ಭೀಮಸೇನನ ದಿಗ್ವಿಜಯ ಕೇಳು ಜನಮೇಜಯ ಧರಿತ್ರೀ ಪಾಲ ಯಮನಂದನನ ಭಾಗದ ಹೋಲಿಕೆಗೆ ಬಹರುಂಟೆ ನಳನಹುಷಾದಿರಾಯರಲಿ | ಆಳು ನಡೆದುದು ಭೀಮಸೇನನ ಧಾಟೆ ಯಿದೆಯೆನೆ ತೆತ್ತುದವನೀ ಪಾಲಕರು ತಂತಮ್ಮ ನಿಜಪಿತ್ತಾನುರೂಪದಲಿ || ನಡೆದು ಸಾಧಿಸಿ ರೋಚಮಾನನ ಹಿಡಿದು ಬಿಟ್ಟನು ಸರ್ವವಿತ್ತವ ನಡಕಿತನಿಲಜನಾಳ) ಮುಂದಣಚೇದಿದೇಶದಲಿ | ಘುಡುಘಡಿಸಿ ನಿಸ್ತಾಳವೀಗಡ ಬಡೆ ಯಿದೇನೆನೆ ಭೀಮಸೇನನ ಪಡೆ ಯೆನಲು ಶಿಶುಪಾಲ ಬಂದನು ಕಂಡನುಚಿತದಲಿ || ಏನು ಬಂದೆಯಪೂರ್ವ-ವೆನೆ ಯಾ ಗಾನುರಾಗವನಟಪತಿ ಸು ಮಾನದಲ್ಲಿ ಶಿಶುಪಾಲ ಹೇಯಿಸಿದನು ಮಹಾಧನವ | ಮಾನಿಸರ ಕಳುಹಿದೊಡೆ ಸಾಲದೆ ನೀನದೇಕೆಂದುಚಿತದಲಿ ಸ ನ್ಯಾನಿಸುತ ನಿಲಿಸಿದನು ತಿಂಗಳು ಪವನನಂದನನ || ನಡೆದು ಮುಂದೆ ಕಳಿಂಗದೇಶದ ಅಡಸಿ ಬಿಟ್ಟನು ಶ್ರೇಣಿವಂತನ ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ | ಅಡಕಿತಲ್ಲಿಯ ಧನವಯೋಧ್ಯೆಯ ಕಡೆಯ ಕೋಟೆಯ ಮುಲವನೆದೆ ಯೊಡೆದು ದೀರ್ಘಪ್ರವರನಿತ್ತನು ಬೇಹವಸ್ತುಗಳ || ೦