ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನಾನೊಂದು ಕನಸ ಕಂಡೆ
ಮುಂಜಾನೆಯ ಮಬ್ಬಿನಲಿ ನನೊಂದು
ಕನಸ ಕಂಡೆ.
ಅಂದು ಅಡವಿಯಲಿ
ಮರಗಳೆಲ್ಲ ಮೈತುಂಬಿ
ಮುಗಿಲತ್ತ ನೋಡುವುದ ಕಂಡೆ.
ಪ್ರಾಣಿ ಪಕ್ಷಿಗಳೆಲ್ಲ
ವಿರೋಧವ ಮರೆತು
ವಿನೋದದಿ ಆಡುವುದ ಕಂಡೆ.
ಅಲ್ಲೊಂದು ಕಾಡುಬಳ್ಳಿಯು
ತುಂಬ ಹೂ ತುಂಬಿ
ವನಸಿರಿಗೆಲ್ಲಾ ಗ೦ಧಗಾಳಿಯ ಲೇಪಿಸುವುದ ಕಂಡೆ.
ಆ ಹೊನ್ನಿರಿನ ಕೊಳದಲ್ಲಿ
ನಸುನಗುತ ನಿಂತಿರುವ
ಹೊನ್ನ ಕೆಂದಾವರೆಯ ಕಂಡೆ
ವನ ದೇವತೆಯು
ಸಂತೋಷದಿಂದ ತನ್ನ ಮಕ್ಕಳ
ಅಪ್ಪಿ ಮುದ್ದಿಸುವ ರಮ್ಯ ನೋಟವ ಕಂಡೆ !
- ಲಕ್ಷ್ಮೀಕಾಂತ್.ಎಸ್.ಬಿ