ಪುಟ:ಕಾಮದ ಗುಟ್ಟು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೆಳೆಯಲೆತ್ನಿಸುವ ಕಾಲವದು. ಅವು ಚನ್ನಾಗಿ ಬೆಳೆದು ಬಲಿತು ಬಲ ಗೊಳ್ಳುವವರೆಗೆ ಅವುಗಳಮೇಲೆ ಯಾವ ಒತ್ತಾಯವೂ ಆಗಬಾರದು. ಆಗಲೇ ಅವುಗಳನ್ನು ಸಂಭೋಗಕ್ಕೆ ಉಪಯೋಗಿಸಿದರೆ ಅವುಗಳ ಬೆಳೆವಣಿಗೆ ಕುಗಿ ನಾನಾ ವಿಧದ ರೋಗಗಳಿಗೆ ನಾವೇ ಆಮಂತ್ರಣ ಕೊಟ್ಟಂತಾಗುವದು. ಬುದ್ಧಿಯು ಅದೇ ಕೊನರುತ್ತಿರುವ ಕಾಲ. ಆ ಸಮಯದಲ್ಲಿ ವೀರ್ಯ ವಾಗಲು ಯೋಗ್ಯವಾದ ದ್ರವ್ಯಗಳನ್ನೆಲ್ಲ ಹಾಳುಗೊಳಿಸದೆ ದೇಹಪೋಷಣೆ ಗಾಗಿ ಬಿಟ್ಟು ಬಿಟ್ಟರೆ ಅದರಿಂದ ದೇಹವೂ ಪುಷ್ಟವಾಗಿ ಬುದ್ದಿಯೂ ಚನ್ನಾಗಿ ಬೆಳೆಯುವದು, ಇತ್ತ ಪೌರುಷದ ಬೆಳಿಗೆಗೂ ತಡೆಯಾಗುವದಿಲ್ಲ. ಆದ್ದ ರಿ೦ದ ಗಂಡಸು ಕಾಮಜೀವನಕ್ಕೆ ಬೇಕಾದ ಆ೦ಗಗಳೆಲ್ಲ ಚನ್ನಾಗಿ ಬಲಿತು ಕೊಳ್ಳುವವರೆಗೆ ಅಂದರೆ ಕನಿಷ್ಠ ೨೫ ವರ್ಷಗಳವರೆಗಾದರೂ ಕಾಮವಿಲಾಸ ದಿಂದ ದೂರ ಇರುವದು ಒಳ್ಳೇದು. ಹೆಂಗಸರಲ್ಲಿ ಸಹ ಊಷ್ಮ ಪ್ರದೇಶಗಳಲ್ಲಿ ಸುಮಾರು ೧೨-೧೩ನೇ ವಯ ಸ್ಸಿಗೇ ಮೈನೆರೆಯುವವರೂ ಇದ್ದಾರೆ. ಆದರೆ ಅಷ್ಟ್ರಕ್ಕೆ ಅವರನ್ನು ರತಿ ವಿಲಾಸಕ್ಕೆ ಯೋಗ್ಯರೆಂದು ಭಾವಿಸಬಾರದು. ಆ ವಯಸ್ಸಿನಲ್ಲಿ ಅವರಲ್ಲಿ ಕಾಮವಿಚಾರಗಳು ಕೂಡ ಹುಟ್ಟುವದಿಲ್ಲ. ಮತ್ತು ಸಂಯೋಗಕ್ಕೆ ಯೋಗ್ಯ ವಾಗುವಂತೆ ಅವರ ಯೋನಿಗರ್ಭಾಶಯಗಳೂ, ಅವುಗಳನ್ನು ಧರಿಸಿರುವ ಸ್ನಾಯುಗಳೂ ಸಾಕಷ್ಟು ಬಲವನ್ನೂ ವಿಕಾಸವನ್ನೂ ಹೊಂದಿರುವದಿಲ್ಲ. ಮತ ಸಂಭೋಗದಿಂದ ಗರ್ಭಧಾರಣವಾದರೆ ಅದನ್ನು ಪೋಷಿಸುವಷ್ಟು ಚೈತನ್ಯವೂ ಅವಳಿಗಿರುವದಿಲ್ಲ ; ಮತ್ತು ಆ ಗರ್ಭದ ಭಾರವನ್ನು ತಡೆಯು ವಷ್ಟು ಶಕ್ತಿಯೂ ಅವಳ ಶ್ರೇಣಿಯ ಅಸ್ಮಿ (Pelvic bone) ಗಳಲ್ಲಿರುವ ದಿಲ್ಲ, ಆದ್ದರಿಂದ ಆಗಲೇ ಅವಳನ್ನು ಸಂಭೋಗಕ್ಕೆ ಜಗ್ಗಿ ದರೆ ಗರ್ಭಾಶಯದ ಮತ್ತು ಮುಟ್ಟಿನ ಸಂಬಂಧದ ಎಷ್ಟೋ ರೋಗಗಳಿಗೆ ಅವಳನ್ನು ಬಲಿಗೊ ಟ್ಟಂತಾಗುವದು. ಆದ್ದರಿಂದ ಅವಳು ತನ್ನ ಅಂಗಾಂಗಗಳಿ೦ದ ಬಲಗೊಂಡು, ನೈಜವಾದ ಕಾಮವು ಅವಳಲ್ಲಿ ಹುಟ್ಟುವವರೆಗೆ ಅಂದರೆ ಸುಮಾರು ೧೮-೨೧ ವರ್ಷಗಳವರೆಗಾದರೂ ಕಾಮವಿಲಾಸಕ್ಕೆ ಅವಳು ಮನಸ್ಸು ಕೊಡಬಾರದು. “ ಪಂಚವಿಶೇ ತತೋ ವರ್ಷೇ ಪೂಮಾನ್ ನಾರೀತು ಷೋಡಶೇ ?? ಎಂದು ಸುಶ್ರುತವೆಂಬ ಆಯುರ್ವೇದ ಗ್ರಂಥದಲ್ಲಿ ವರ್ಣಿಸಿದೆ. ಅಂದರೆ