ಪುಟ:ಕಾಮದ ಗುಟ್ಟು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂದರೆ ಪ್ರಿಯವ್ಯಕ್ತಿಯ ಸಮಾಗಮದಲ್ಲಿ ನಿರಾಶೆಯಾದರೆ ಉತ್ಕಟ ವಾದ ಮನೋವಿಕಾರಗಳಾಗುವವೆಂದು ಉನ್ಮಾದರೋಗದ ಕಾರಣವನ್ನು ಆಯುರ್ವೇದದಲ್ಲಿ ಹೇಳಿದೆ. ೫ನೇ ಪ್ರಶ್ನೆ :-ವೀರ್ಯವೆಂದರೇನು ? ಅದರಿಂದ ದೇಹ ಹೈನುಲಾಭ ? ಉತ್ತರ:-ಅಂಡಗಳು, ವೀರ್ಯಾಶಯ, ಬೀಜಕೋಶ, ಕೌಪರ ಗ್ರಂಥಿ, ಪ್ರೊಸ್ಟೇಟ್ ಗ್ರಂಥಿ ಇವಿಷ್ಟ ವೀರ್ಯಾ೦ಗಗಳು, ಅವುಗಳಲ್ಲಿ ವೀರ್ಯದ ಮುಖ್ಯ ಭಾಗವಾದ ಜೀವಾಣುವು ಬೀಜಕೋಶದಲ್ಲಿ ಹುಟ್ಟುತ್ತದೆ. ಸಂತತಿಗೆ ಇದೇ ಅನಿವಾರ್ಯವಾದ ಮುಖ್ಯ ಕಾರಣ. ಮನುಷ್ಯನಿಗೆ ಕಾಮವು ಹುಟ್ಟಿದಾಗ ವೀರ್ಯಾಂಗಗಳಲ್ಲಿ ಒಂದು ವಿಧದ ಉತ್ತೇಜನ ಉಂಟಾಗು ವದು. ಮುಂದ ಅವನ ಸಂಭೋಗದ ಮೂಲಕವಾಗಿಯಾಗಲಿ, ಜನನೇಂ ದ್ರಿಯದ ಕೃತ್ರಿಮ ಚಲನೆಯಿಂದಾಗಲಿ, ಅ೦ಡ ಮತ್ತು ಬೀಜಕೋಶಗಳಲ್ಲಿ ಇನ್ನೂ ಹೆಚ್ಚು ಉತ್ತೇಜನವಾಗಿ, ಬೀಜಕೋಶದಿಂದ ಬೀಜವು ಹೊರಟು, ಅಂಡದಲ್ಲಿ ಸ್ರವಿಸಿದ ದ್ರವದೊಡನೆ ಸೇರಿ ವೀರ್ಯ ನಾಳಗಳ ಮೂಲಕ ಮೇಲೆ ಬರುತ್ತಿರುವಾಗ ಕೌಪರ ಮತ್ತು ಪ್ರೊಸ್ಟೇಟ್ ಗ್ರಂಥಿಗಳ ಸ್ರಾವಗಳನ್ನೂ ಸೇರಿಕೊಂಡು ವೀರ್ಯಾಶಯದಲ್ಲಿ ತುಂಬಿ ಕೊಳ್ಳುತ್ತದೆ. ಆಗ ಅದಕ್ಕೆ ವೀರ್ಯವೆಂದೆನ್ನುವರು. ಅಲ್ಲಿಂದ ಹಿಂದೆ ಹೇಳಿದಂತೆ, ಸಂಭೋಗದಿಂದ ಅಥವಾ ಮುಷ್ಟಿಮೈಥುನಾದಿ ಕೃತ್ರಿಮಾಭ್ಯಾಸದಿಂದ ವೀರ್ಯಾಶಯದಲ್ಲಿ ರುವ ವೀರ್ಯವು ಲಿಂಗದ ಬುಡದಲ್ಲಿ ನೂಕಲ್ಪಟ್ಟು ಹೊರಗೆ ಬರುತ್ತದೆ. ವಸ್ತುತಃ ವೀರ್ಯವು ಸಂತಾನೋತ್ಪತ್ತಿಗೆ ಮಾತ್ರ ಉಪಯೋಗ ಬೀಳುವದು. ವೀರ್ಯಜನಕಾಂಗಗಳಿಂದ ವೀರ್ಯವು ನಿರ್ಮಿತವಾದಮೇಲೆ, ಅದು ಸಂಭೋಗದಲ್ಲಾದರೂ ಸ್ರವಿಸುವದು ಇಲ್ಲವೇ ವೀರ್ಯಾಶವು ತುಂಬಿ ದಮೇಲೆ ಸ್ವಪ್ನದಲ್ಲಾದರೂ ಸೃಲಿಸುವದು. ಹುಟ್ಟಿದ ವೀರ್ಯವು ಬೇರೆ ಯಾವರೀತಿಯಿಂದಲೂ ದೇಹಕ್ಕೆ ಪ್ರಯೋಜನಕಾರಿಯಲ್ಲ. ಕೆಲವರು ಅದು ಪುನಃ ರಕ್ತದಿಂದ ಹೀರಲ್ಪಡುವದೆಂದು ಹೇಳುತ್ತಾರೆ. ಆ ಅಭಿಪ್ರಾ ಯವನ್ನು ವೈಜ್ಞಾನಿಕರು ಒಪ್ಪುವದಿಲ್ಲ. ಆದರೆ ಆ ವೀರ್ಯನಿರ್ಮಾಣ