ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಲ್ಲಿ ವೆಚ್ಚವಾಗುವ ಶಕ್ತಿಯು, ಕೃತ್ರಿಮಾಭ್ಯಾಸಗಳಿಂದ ಅಥವಾ ಮಿತಿ ಮಾರಿದ ಸಂಭೋಗದಿಂದ, ದುರ್ಬಲವಾಗದಿದ್ದರೆ ಆ ಶಕ್ತಿಯು ದೇಹಾ ದ್ಯಂತವೂ ಸೂಕ್ಷ್ಮವಾಗಿ ಪಸರಿಸಿ, ದೇಹನಿರ್ಮಾಣಸಾಮಗ್ರಿಗಳಿಗೆ ಬಲ ವನ್ನು ಕೊಟ್ಟು ಅವುಗಳಲ್ಲಿ ರೋಗನಿರೋಧ ಶಕ್ತಿಯನ್ನು ಬೆಳೆಸುವದು. ಅದರಿಂದ ಓಜಸ್ಸೆಂಬ ಬಹುಸುಂದರವೂ ಆಕರ್ಷಕವೂ ಆದ ಕಾಂತಿಯುತ ನವಾಗುವದು. ಆ ಶಕ್ತಿ ಸಂಗ್ರಹದಿಂದಲೇ (Conservation) ಮೇಧಾ ಶಕ್ತಿಯ, ನೇತ್ರ ಪಾಟವವೂ ಹೆಚ್ಚುವವು. 'ಯನ್ನಾಶೇ ನಿಯತಂ ನಾಶಃ ಯಸ್ಮಿನ್ತಿಷ್ಠತಿ ತಿಷ್ಠತಿ' ಎಂದು ಆಯುರ್ವೇದದಲ್ಲಿ, ನಮ್ಮ ಜೀವರಕ ಣಕ್ಕೂ, ನಾಶಕ್ಕೂ ಆ ವೀರ್ಯಶಕ್ತಿಯ ಸಂಗ್ರಹ ಅಥವಾ ನಾಶವೇ ಮೂಲ ಕಾರಣವೆಂದು ಹೇಳಿದೆ. ಬ್ರಹ್ಮಚರ್ಯದ ಮಹತ್ವವು ಇದರಿಂದ ತಿಳಿಯು ಇದೆ. ವೀರ್ಯ ಕ್ಕಿರುವ ಈ ಮಹತ್ವವನ್ನು ತಿಳಿಯದೆ ಸಂಸಾರಿಕರು ಸಂಭೋ ಗದಿಂದಲೂ ಮಿಥ್ಯಾ ಬ್ರಹ್ಮಚಾರಿಗಳು (ಅಗ್ನವಾಗದಿದ್ದವರು) ಬಹುವಿಧದ ಕೃತ್ರಿಮ ಮೈಥುನಗಳಿಂದಲೂ, ಅವಮೌಲ್ಯ ವೀರ್ಯವನ್ನು ಸೂರೆಗೈದು ಜೀವಂತ ಹೆಣಗಳಾಗಿ ತಿರುಗುತ್ತಿದ್ದಾರೆ. ಯೋಗ್ಯ ಕಾಮಶಾಸ್ತ್ರದ ಅಜ್ಞಾ ನದಿಂದಲೂ, ಕಾಮೋತ್ತೇಜಕ, ಅನೀತಿಕರ ಸಿನಿಮಾ, ನಾಟಕ, ಕಾದಂ ಬರಿಗಳ ವಾತಾವರಣದಲ್ಲಿ ಬೆಳೆದಂಥ ತರುಣರಲ್ಲಿ ಕೃತ್ರಿಮ ಮೈಥುನಕ್ಕೆ ಬಲಿ ಬೀಳದಿದ್ದವರು ಸಿಕ್ಕುವದು ಅಪರೂಪ. ಈ ಭಯಂಕರ ಅಭ್ಯಾಸವು ಎಲ್ಲ ರೋಗಗಳಿಗೂ ಅವರ ದೇಹದ ಬಾಗಿಲನ್ನು ತೆರೆದಿಡುವದು, ಅಜೀರ್ಣ, ಅನಿದ್ರೆ, ಮಲಬದ್ಧತೆ, ಚರ್ಮರೋಗ, ದೃಷ್ಟಿ ಮಾಂದ್ಯ, ವಿಚಾರಶಕ್ತಿಹೀನ ತೆಗಳು ಅವರಿಗೆ ಬಿಡಲಾರದ ಮಿತ್ರರಾಗುವರು. ಸಾಲದ್ದಕ್ಕೆ ಬಹು ಸೂಕ್ಷ್ಮ ರೀತಿಯಿಂದ ಕಾಪಾಡಿಕೊಳ್ಳಬೇಕಾದ ಅವರ ಕೋಮಲವಾದ ಜನನೇಂದ್ರಿ ಯಗಳು, ಈ ಅಸಭ್ಯಾಚರಣೆಯಿಂದ ಶಕ್ತಿಗುಂದಿ ವಂಕುಡೊಂಕಾಗಿ, ರೋಗ ಗ್ರಸ್ತವಾಗಿ ಕೊನೆಗೆ ನಪುಂಸಕತೆಯನ್ನು ತಂದೊಡ್ಡುವದು, ಮುಂದೆ ತಮ್ಮ ಪತ್ನಿಯರನ್ನು ಕಾಮಜೀವನದಲ್ಲಿ ತೃಪ್ತಿ ಪಡಿಸಲಾಗದೆ ಅವರು ಎಲ್ಲಿ ವ್ಯಭಿ ಚಾರಿಗಳಾಗುವರೋ ಎಂಬ ಭಯದಿಂದ, ಜೀವನವನ್ನೇ ತುಚ್ಛವಾಗಿ ಎಣಿ ಸುವ ಹೀನಸ್ಥಿತಿಗೆ ಅವರು ಬಂದುಬಿಡುವರು. ಸ್ತ್ರೀಯರು ಕೂಡ, ಸಮಾಜದ