ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬ ದಾದರೆ ಎನನ್ನು ಉಪಯೋಗಿಸಬೇಕು? ಉಪಯೋಗಿಸಬಾರದಾದರೆ ಹೆಚ್ಚು ಹೊತ್ತು ಸಂಭೋಗಸುಖವನ್ನು ಅನುಭವಿಸುವದಕ್ಕೆ ಏನು ಸಾಯ ಮಾಡಬೇಕು ? ಉತ್ತರ:-(೧) ರೋಗವಿಲ್ಲದೆ ಔಷಧಗಳನ್ನು ಉಪಯೋಗಿಸುವದು ಹುಚ್ಚುತನ. ಪ್ರತಿಯೊಂದು ಕಾರ್ಯಕ್ಕೂ ಪ್ರಕೃತಿಯು ಒಂದು ಪರಿಮಿತಿ ಯನ್ನಿಟ್ಟಿದೆ. ಆ ಪರಿಮಿತಿಯನ್ನು ಕೃತ್ರಿಮೋಪಾಯದಿಂದ ಮಾರಲು ಹೋದರೆ ದುಷ್ಪರಿಣಾಮವಾಗದೆ ಇರದು. ಪ್ರಕೃತಿಯ ನಿಯಮಗಳನ್ನು ತಿಳಿದು ವಿವೇಕದಿಂದ ಅವುಗಳನ್ನು ನಮ್ಮ ಆನಂದಕ್ಕೆ ಉಪಯೋಗಿಸ ಬಹುದು. ಆದರೆ ಒಂದು ಕಡೆಗೆ ಆನಂದವಾಗುತ್ತಿರುವಾಗ ಅದರ ಪರಿ ಣಾಮವಾಗಿ ಇನ್ನೊಂದೆಡೆಗೆ ಇಮ್ಮಡಿ ದುಃಖವಾಗುತ್ತಿದ್ದರೆ ನಮ್ಮ ಪ್ರಕೃತಿ ವ್ಯಾಸಂಗವನ್ನು ದುರುಪಯೋಗಪಡಿಸಿದಂತಾಗಿ ಅದರ ಫಲವನ್ನು ನಾವೇ ಉಣ್ಣಬೇಕಾದೀತು. ಆದ್ದರಿಂದ ರೋಗವಿಲ್ಲದೆ ಔಷಧವನ್ನು ಚಿಂತಿಸಲೇ ಕೂಡದು. ನಂತರದ ಪರಿಣಾಮವನ್ನು ಲಕ್ಷಿಸದೆ ಸದ್ಯದ ಸುಖವನ್ನು ಮಾತ್ರ ಇಚ್ಛಿಸುವವರು, ಔಷಧಿಗಳಿ೦ದ ಕಲವು ಮಿನಿಟುಗಳವರೆಗೆ ಸಂ ಭೋಗವನ್ನು ಹೆಚ್ಚಿಸಿದರೂ, ಅಷ್ಟರಿಂದಲೇ ಅವರು ತೃಪ್ತಿ ಪಡುವರೆಂದು ಹೇಳಲಾಗದು. ಅದನ್ನು ಇನ್ನೂ ಹೆಚ್ಚಿಸುವ ಚಿಂತೆಯು ಅವರಿಗೆ ಇದ್ದೇ ಇರುವದು. ಆದ್ದರಿಂದ ಇಲ್ಲದ್ದನ್ನು ಪಡೆಯಲಿಕ್ಕೆ ಹೋಗಿ ಇದ್ದದ್ದನ್ನು ಕಳೆದು ಕೊಳ್ಳುವ ಜಾಣೆಯು ಯಾರಿಗೂ ಬರದಿರಲಿ. ಏಕ೦ದರೆ ಈಗ ಪೇಟೆಯಲ್ಲಿ ಸಿಕ್ಕುವ ವೀರ್ಯಸ್ತಂಭಕ ವಾಜೀಕರಣ ಔಷಧಗಳು ಹೆಚ್ಚಾಗಿ ಅಫೀಮು, ಗಾಂಜಾ ಮೊದಲಾದ ಅಪಾಯಕಾರಕ ವಸ್ತುಗಳನ್ನು ಒಳ ಗೊ೦ಡಿರುವವು. ಅವು ಪ್ರಾರಂಭದಲ್ಲಿ ಸ್ವಲ್ಪ ಗುಣವನ್ನು ಕೊಟ್ಟರೂ ನಂತರ ನರಗಳನ್ನು ಬಹಳ ದುರ್ಬಲಗೊಳಿಸಿ, ಕೆಲವು ಸಲ ನಪುಂಸಕತ ಯನ್ನು ಕೂಡ ತಂದಿಡುವವು. ಆದ್ದರಿಂದ ಎಚ್ಚರ. (೨) ವೀರ್ಯಸ್ತಂಭಕ ಔಷಧಗಳು ಸಾಮಾನ್ಯವಾಗಿ ಸಂವೇದಿನಿ ಗಳನ್ನು (Sensory 11erves) ಮಂಕುಗೊಳಿ ಸುವದರಿಂದ ಸಂಭೋಗದಲ್ಲಿ ಪುರುಷನಿಗೆ ಸಾಕಷ್ಟು ಉದ್ರೇಕವಾಗುವದಿಲ್ಲ. ಉದ್ರೇಕವು ಕಡಿಮೆಯಾಗು