ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಲಾರರು. (೩) ಪುರುಷನು ಜನನೇಂದ್ರಿಯ ಸಂಬಂಧದ ರೋಗವುಳ್ಳವನಾ ಗಿರುವಾಗ, ಆದರೂ ಅವನು ಸಂಭೋಗವನ್ನು ಅಪೇಕ್ಷಿಸಿದರೆ ಹಿಂದೂ ಕಾಯದೆಯು ಒತ್ತಾಯದಿಂದ ಹೆಂಡತಿಯನ್ನು ಮಲಗುವ ಮನೆಗೆ ಕಳಿಸು ವದು, ಅ೦ಥ ಸಂಭೋಗದಿಂದ ಹುಟ್ಟಿದ ಮಕ್ಕಳೂ ರೋಗಿಗಳಾಗಿಯೇ ಇಬವವು. ಸಮಾಜ ಸುಧಾರಕರು ಅಂಥ ಸಂಭೋಗವನ್ನು ನಿಂದಿಸಿದರೂ ಅದನ್ನು ನಿಲ್ಲಿಸುವ ಅಧಿಕಾರವು ಅವರ ಕೈಯಲ್ಲಿಲ್ಲ. ಆದ್ದರಿಂದ ಅದರ ದುಷ್ಪರಿಣಾಮವನ್ನಾದರೂ ತಡೆಯಲು ಸಂತಾನನಿರೋಧವನ್ನು ಅನುಸರಿಸ ಬೇಕು. (೪) ಹುಟ್ಟಿದ ಮಕ್ಕಳನ್ನೆಲ್ಲ ಚೆನ್ನಾಗಿ ಪೋಷಿಸಿ, ವಿದ್ಯೆ ಕೊಟ್ಟು ಬೆಳಿಸುವಷ್ಟು ಧನಶಕ್ತಿಯು ತಂದೆತಾಯಿಗಳಲ್ಲಿ ಇಲ್ಲದಿರುವಾಗ, ಒಂದು ಮಗುವನ್ನು ಹೆತ್ತು ೨-೩ ವರ್ಷಗಳವರೆಗೆ ಬ್ರಹ್ಮಚರ್ಯದಿಂದ ಇರಲಾರ ದವರು, ಇನ್ನು ಮಕ್ಕಳು ಹೆಚ್ಚಾಗಿರುವವೆಂದು ಸಾಯುವವರೆಗೆ ಬ್ರಹ್ಮಚಕ್ಕೆ ಯಿಂದ ಇರಬಲ್ಲರೋ ? (೫) ಬಾಲವಿವಾಹದ ರೂಢಿಯು ನಮ್ಮ ಅಂಧ ಸಮಾಜದಲ್ಲಿರುವದರಿಂದಲೂ, ಹೆಂಗಸು ಮೈನೆರೆದ ಕೂಡಲೆ ಗಂಡನೊಡನೆ ಒಂದೇ ಹಾಸಿಗೆಯಲ್ಲಿ, ಒಂದೇ ಕೋಣೆಯಲ್ಲಿ ಮಲಗುವದರಿಂದಲೂ ಹಂಗ ಸಿಗೆ ವಯಸ್ಸು ಸಾಕಷ್ಟು ಆಗುವ ಪೂರ್ವದಲ್ಲಿಯೇ ಗರ್ಭ ನಿಂತು ಒಂದು ಮಗುವನ್ನು ಹೆರುವದರಲ್ಲಿಯೇ ಅವರು ಮುದುಕಿಯರಂತಾಗುವರು. (೬) ಕಾಮವೇ ಹುಟ್ಟದಂತೆ ಅಥವಾ ಮಿತವಾಗಿ ಹುಟ್ಟುವಂತೆ ಮನಸ್ಸಿಗೆ ಯೋಗ್ಯ ವಾದ ಶಿಕ್ಷಣವು ಸಿಕ್ಕರೆ ಅಡ್ಡಿ ಇಲ್ಲ. ಅದಿಲ್ಲದೆ ಕಲುಷಿತ ವಾತಾವರಣದಲ್ಲಿ ಯೇ ತಿರುಗುವದರಿಂದ ಹುಟ್ಟಿದ ಕಾಮವನ್ನು ಹೆಚ್ಚು ದಿನ ತಡೆದಿಡಲಾಗದು. ಅದರಿಂದ ಗಂಡಸರಲ್ಲಿ ಶುಕ್ರಮೇಹ (Spermatorrhoea), ಸ್ವಪ್ನ ಸ್ವಲನ ಮೊದಲಾದ ರೋಗಗಳೂ ಹೆಂಗಸರಲ್ಲಿ ಮೂರ್ಚ್ಯಾ , ಭೂತೋ ನಾದ (Hysteria) ಮೊದಲಾದ ರೋಗಗಳೂ ಪ್ರಾರಂಭವಾಗುವವು.*

  • ಇನ್ನೂ ವಿಧವೆಯರ ವ್ಯಭಿಚಾರದಲ್ಲಿ ಯು ಸ೦ತಾನನಿರೋಧ, ತ೦ದೆ ತಾಯಿ ಗಳು ದುರ್ಬಲ ಮನಸ್ಕರಿದ್ದರೆ, ದುರ್ಬಲ ಮನಸ್ಸಿನ ಮಕ್ಕಳೇ ಹುಟ್ಟಬಹುದಾದ ರಿಂದ ಸಂತಾನ ನಿರೋಧ- ಹೀಗೆ ಎಷ್ಟೋ ವಿಷಯಗಳು “ಸಂತಾನ ನಿರೋಧ ಶಾಸ್ತ್ರ” ದಲ್ಲಿ ಬರುತ್ತವೆ. ಅವನ್ನು ಸಾಂಗವಾಗಿ ತಿಳಿಯಲು ಶ್ರೀ! ತಾರಾನಾಥ ರವರ “ ಸ೦ತಾನಸ೦ಯಮ ವನ್ನು ಓದಿರಿ.