ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮ ರಿಂದಲಾದರೂ ತೃಪ್ತಿಯಾದರೆ ವಿಷಯದ ನಿಜತ್ವದಲ್ಲಿ ನಂಬಿಗೆಯನ್ನಿಡ ಬಹುದು. ಬೇರೆ ಬೇರೆ ತಿಥಿಗಳಲ್ಲಿ ಕಾಣುವು ಬೇರೆ ಬೇರೆ ಅಂಗಗಳಲ್ಲಿ ವಾಸಿ ಸುವದೆಂದು ಕೆಲವು ಹಳೆಯ ಗ್ರಂಥಗಳು ಹೇಳುವವು. ಅಮಾವಾಸ್ಯೆ, ಏಕಾದಶಿ ಮೊದಲಾದ ಕೆಲವು ತಿಥಿಗಳಲ್ಲಿ ಸಂಭೋಗಿಸಿದರೆ ಕುಸಂತತಿಯು ಹುಟ್ಟುವದೆಂದು ಕೆಲವು ಗ್ರಂಥಗಳು ಹೇಳುವವು. ಆದರೆ ಈ ಯಾವ ವಿಷ ಯಗಳೂ ನಮ್ಮ ಅನುಭವಕ್ಕೆ ಈವರೆಗೆ ಬಂದಿಲ್ಲ. ನಮ್ಮ ಮಿತ್ರರನ್ನಾಗಲಿ, ನಮ್ಮೆಡೆಗೆ ಬಂದ ರೋಗಿಗಳನ್ನಾಗಲಿ ಕೇಳಿದ್ದರಲ್ಲಿ ಯಾರೂ ತೃಪ್ತಿಕರವಾದ ಉತ್ತರವನ್ನು ಕೊಟ್ಟಿಲ್ಲ. ವಿಜ್ಞಾನವೂ ಇದರ ವಿಷಯವಾಗಿ ವಿಶೇಷ ಮಾತಾಡಿಲ್ಲ. ಆದರೆ ಈ ತಿಥಿವಾರಗಳ ನಿರ್ಬಂಧವನ್ನು ಇಟ್ಟು ಕೊಳ್ಳದ ಯಾವ ಜನಾಂಗವೂ ಕೀಳುಸ್ಥಿತಿಗೆ ಹೋಗಿರುವದನ್ನು ನಾವು ನೋಡಿಲ್ಲ; ಇತಿಹಾಸ ವೂ ಹೇಳುವದಿಲ್ಲ. ಮುಸಲ್ಮಾನರು ಮದುವೆಯನ್ನೂ, ನಿಷೇಕವನ್ನೂ ಹೆಚ್ಚಾಗಿ ಅಮಾವಾಸ್ಯೆಯ ದಿನವೇ ಮಾಡುವರು, ಅವರು ಯಾವರೀತಿ ಯಿಂದಲೂ ಬಲ, ಧೈರ್ಯ, ಬುದ್ದಿ ಗಳಲ್ಲಿ ಹಿಂದುಗಳಿಗಿ೦ತ ಕೀಳಾಗಿಲ್ಲ. ಅವರ ಆರ್ಥಿಕಸ್ಥಿತಿಯು ಚನ್ನಾಗಿಲ್ಲದಿರುವದೂ, ಶಿಕ್ಷಣವು ಇಲ್ಲದಿರುವದೂ ಸಮಾಜದ ದೋಷಗಳು, ತುರ್ಕಿಸ್ಥಾನ, ಅಫಗಾಣಿ ಸ್ಥಾನಗಳಲ್ಲಿ ಈಗ ತೀವ್ರವಾಗಿ ನಡೆದಿರುವ ಪ್ರಗತಿಗೆ ಅಮಾವಾಸ್ಯೆಯ ಸಂಭೋಗವೇನೂ ಅಡ್ಡಿಯನ್ನು ಮಾಡುತ್ತಿಲ್ಲ. ಅದೇಕೆ ಬಹುತರವಾಗಿ ಪಾಶ್ಚಾತರೆಲ್ಲ ಈ ತಿಥಿವಾರಗಳ ನಿರ್ಬಂಧವನ್ನು ಮಾರಿದವರೇ. ಅವರೇ ಹಿಂದೂಸ್ಥಾನದವರಿ ಗಿಂತ, ಬುದ್ಧಿ, ಬಲ, ಧೈರ್ಯ, ಸಂಪತ್ತಿಗಳಿ೦ದ ತಲೆಮೆಟ್ಟಿ ಹಾರುತ್ತಿರು ವರು. ಆದ್ದರಿಂದ ತಿಥಿ ವಾರ ನಕ್ಷತ್ರಗಳಿಂದ ತಲೆಕೆಡಿಸಿಕೊಳ್ಳುವದಕ್ಕಿಂತ, ೩ ನೇ ಪ್ರಶ್ನೆ ಯಲ್ಲಿ ಹೇಳಿದ ವಿವೇಕದ ನಿಯಮಗಳನ್ನು ಅನುಸರಿಸಿ, ಮಿತಿ ಯಿಂದ ಸಂಭೋಗಿಸುತ್ತಿದ್ದರೆ ದಂಪತಿಗಳ ಕಲ್ಯಾಣವಾದೀತು. ವಾಚಕರು ದಯಮಾಡಿ ತಮ್ಮ ಅಭಿಪ್ರಾಯ, ವಿಮರ್ಶೆ, ಸಂದೇಹ, ಪ್ರಶ್ನೆಗಳನ್ನು ನಮಗೆ ತಿಳಿಸಿದರೆ ಮುಂದಿನ ಸಾರಿ ಮಾಡಬೇಕಾದ ಸುಧಾರಕ ಗಳಿಗೆ ಅನುಕೂಲವಾಗುವದು.