ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶೋಧಿಸಿ ಕುಡಿಯಬೇಕು. (ಈ) ಬೀಜದ್ರಾಕ್ಷಿ ೩-೫ ತೋಲಾ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿದು ಮಲಗಬೇಕು. ಮಲಮೂತ್ರ ವಿಸ ರ್ಜನ ಕಾಲದಲ್ಲಿ ಅಥವಾ ಸ್ವಪ್ನದಲ್ಲಿ ವೀರ್ಯಸ್ಕಲನವಾಗುವದಕ್ಕೆ ಮಲ ಬದ್ಧತೆಯೇ ಕಾರಣವಾಗಿದ್ದರೆ ಈ ಮೇಲಿನ ಔಷಧಗಳಿಂದ ಮಲವು ಸ್ವಚ್ಛ ವಾಗಿ ಹೊರಟುಹೋಗಿ ರೋಗವೂ ಗುಣವಾಗುವದು. (೩) ಮೂಲವ್ಯಾಧಿ (ಗುದದಲ್ಲಿ ಮೊಳಕೆಗಳಾಗುವದು) ಕಾರಣವಾಗಿ ದ್ದರೆ:-( ಅ) ದಿನಾಲು ಊಟವಾದ ಕೂಡಲೆ ಒಂದು ನಿಂಬೆಹಣ್ಣನ್ನು ಬಾ ಯಿಂದ ಕಚ್ಚಿ ರಸವನ್ನು ಹೀರಬೇಕು. ಇದರಿಂದ, ಮೊಳಕಗಳಿಂದ ಬರುವ ರಕ್ತವು ಬಹುಬೇಗ ನಿಲ್ಲುವದು. (ಆ) ಜಾಲಿಯ ಮುಗಳು-ಅಶ್ವತ್ಥದ ಮುಗು ಳುಗಳನ್ನು ಅರೆದು ಬಿಲ್ಲೆಮಾಡಿ, ಮೊಳಕೆಗಳ ಮೇಲಿಟ್ಟು ಕಟ್ಟಿಕೊಳ್ಳಬೇಕು. () ಕಣಗಿಲ* ಬೇರಿನ ಗಂಧವನ್ನು ನೀರಲ್ಲಿ ತೆಗೆದು ಹಚ್ಚಬೇಕು. (೪) ವೀರ್ಯವು ನೀರಾಗಿದ್ದರೆ ದುರಭ್ಯಾಸಗಳಿಂದ ಅಶಕ್ತಿಯು ಬಂದಿ ದ್ದರೆ, ನಪುಂಸಕತ (ಲಿಂಗವು ಉದ್ರೇಕವಾಗದಿರುವದು) ಇದ್ದರೆ, ಸ್ತ್ರೀಸಂಪರ್ಕ ಮಾತ್ರದಲ್ಲೇ ವೀರ್ಯವು ಸೃಲಿಸಿದರೆ ಮತ್ತು ಮುಷ್ಟಿ ಮೈಥುನಾದಿ ಕೃತ್ರಿ ಮಾಭ್ಯಾಸಗಳಿಂದಲೂ, ಅತಿಸಂಭೋಗದಿಂದಲೂ ಉಂಟಾದ ಸರ್ವ ವಿಕಾರ ಗಳಿಗೂ ಕೆಳಗೆ ಬರೆದ ಔಷಧಗಳು ಅತ್ಯುತ್ತಮ ಗುಣವನ್ನು ಕೊಡುವವು. (ಅ) ಆಲದ ಹಾಲು ೨ ಹನಿಗಳನ್ನು ಉಷಃಕಾಲದಲ್ಲಿ ಒಂದು ತೊಲೆ ಕಲ್ಲುಸಕ್ಕರೆಯ ಪುಡಿಯಲ್ಲಿ ಹಾಕಿ ತಿನ್ನಬೇಕು, ಹಾಲು, ತುಪ್ಪ, ಅಮ್ಮ ಪಥವಿರಬೇಕು. (ಆ) ಒ೦ದು ತೋಲಾ ಯಾಲಕ್ಕಿ (ಸಿಪ್ಪೆ ತೆಗೆದದ್ದು) ಯನ್ನು ಜಜ್ಜಿ ನೀರು ಹಾಕಿ ಸಪ್ತಮಾಂಶ ಕಷಾಯವಿಳಿಸಿ ರಾತ್ರಿ ಮಲಗುವಾಗ ತೆಗೆದು ಕೊಳ್ಳಬೇಕು. ಹೀಗೆ ೩ ದಿನ ಮಾಡಿ ೭ ದಿನ ಹಾಲು ಅನ್ನ ಪಥದಲ್ಲಿರ ಬೇಕು ಅಷ್ಟರಿಂದ ಗುಣವಾಗದಿದ್ದರೆ ಮತ್ತೆ ಮರುದಿನ ಮಾಡಬೇಕು. ಈ ಯೋಗದಿಂದ ವರ್ಷಗಟ್ಟಿಯಿಂದ ಇದ್ದ ವೀರ್ಯದೋಷಗಳು ಗುಣವಾಗಿವೆ. (ಇ) ಒಣನೆಲ್ಲಿಕಾಯಿ ಪುಡಿ ೧/೪ ತೋಲಾ-ಆನೆ ನೆಗಿಲ ಪುಡಿ ೧/೪

  • ಕಣಗಿಲ ಬೇರು ವಿಷವಾದ್ದರಿಂದ ಮಕ್ಕಳ ಕೈಗೆ ಸಿಕ್ಕದಂತೆ ನೋಡಿಕೊಳ್ಳಬೇಕು.