ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೩ ತಲಾ-ಅಮೃತಬಳ್ಳಿಯ ಸತ್ವ ೩/೪ ತೊಲಾ (ಇದು ವೈದ್ಯರಲ್ಲಿ ಸಿಕ್ಕುವದು); ಇವಿಷ್ಟನ್ನು ಸೇರಿಸಿ ೪ ರಿಂದ ೮ ಆಣೆಯ ತೂಕದ ವರೆಗೆ ಹಾಲಿನಲ್ಲಿ ತೆಗೆದು ಕೊಳ್ಳಬೇಕು. ಅಥವಾ ಹಸುವಿನ ತುಪ್ಪ ಸಕ್ಕರೆಯಲ್ಲಿ. (ಈ) ಯಾಲಕ್ಕಿ ೧/೪ ತೊಲಾ-ಕೇಸರಿ--ಹಿಪ್ಪಲಿ--ಜಾಪತ್ರಿ-- ಜಾಜಿ ಕಾಯಿ ಇವು ಒ೦ದೊ೦ದು ೧/೮ ತೋಲಾ-ಸಾಲಾಶ್ರಿ ೧/೪ ಇವುಗಳನ್ನೆಲ್ಲ ಪುಡಿ ಮಾಡಬೇಕು. ಆ ಪುಡಿಯಕ್ಕೆ ಸಕ್ಕರೆಯನ್ನು ಸೇರಿಸಿ ತುಪ್ಪದಲ್ಲಿ ಅಥವಾ ಸಾಲಿನಲ್ಲಿ ೨ ರಿಂದ ೪ ಆಣೆ ತೂಕದ ವರೆಗೆ ತೆಗೆದುಕೊಳ್ಳಬೇಕು. (ಉ) ಲೋಳೆಸರದ ತಿರುಳು ೧೨ ತೊಲ ೧೦ ಸಲ ನೀರಿನಲ್ಲಿ ತೊಳೆದು, ಅದರಲ್ಲಿ ೧/೮ ತೋಲ ಜೀರಿಗೆ ೧ ತೋಲ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. (ಊ) ಸಾಲಾಮಿ--ಸು ಫೇದ ಮುಸಲಿ--ಕರೆಮುಸಲಿ--ಕೊಳವಳಿಕೆ ಬೀಜ (ತಾಲಮಕಾನಾ)-ಯಾಲಕ್ಕಿ-ಆನೆನೆಗಿಲು-ಶುಂಠಿ ಇವುಗಳನ್ನು ಸಮ ಭಾಗ ಸೇರಿಸಿ ಪುಡಿಮಾಡಿ ಪುಡಿಯಷ್ಟೆ ಸಕ್ಕರೆ ಕೂಡಿಸಿ ೧/೪ ರಿಂದ ೧/೨ ತೊಲೆಯವರೆಗೆ ತುಪ್ಪದಲ್ಲಿ ಅಥವಾ ಹಾಲಿನಲ್ಲಿ ತೆಗೆದುಕೊಳ್ಳಬೇಕು. (೩) ಇಸಫಗೋಲ್ ೧/೨ ತೊಲೆ-ಬೆಣ್ಣೆ ೧ ತೊಲೆ-- ಕಲ್ಲುಸಕ್ಕರೆ ೧ ತೊಲೆ-ಯಾಲಕ್ಕಿ ೧/೪ ತೊಲೆ ಸೇರಿಸಿ ಹಾಲಿನಲ್ಲಿ ತೆಗೆದುಕೊಳ್ಳಬೇಕು. - (ಇವುಗಳಲ್ಲದೆ ಅಮೃತ, ನವಜೀವನ' ಮೊದಲಾದ ಸಿದೌಷಧ ಗಳು ನಮ್ಮಲ್ಲಿ ಸಿಕ್ಕುತ್ತವೆ. ಬೇಕಾದವರು ಬರೆದು ತರಿಸಿಕೊಳ್ಳಬಹುದು). ಲಿಂಗವಿಕಾರಕ್ಕೆ :-ಮುಷ್ಟಿಮೈಥುನಾದಿಗಳಿಂದ, ಮಿತಿಮೀರಿದ ಸಂಭೋಗದಿಂದ, ಬಹುದಿನದ ವೀರ್ಯದೋಷಗಳಿ೦ದ ಲಿಂಗವು ವಕ್ರವಾಗಿ ರುವದು, ನಿಃಸತ್ವವಾಗಿರುವದು, ಚಿಕ್ಕದಾಗಿರುವದು ಇಂಥ ರೋಗಗಳಿಗೆ ಮೇಲೆ ಹಚ್ಚಲಿಕ್ಕೆ ಈ ಔಷಧವನ್ನು ತಯಾರಿಸಿಕೊಳ್ಳಬೇಕು:-ಮಾಚಿ ಕಾಯಿ-ಜಲಚಕ್ಕೆ-ಅಳಲೆಸಿಪ್ಪೆ ಒ೦ದೊ೦ದು ೧|| ತೊಲೆ ತೆಗೆದುಕೊಂಡು ಪುಡಿಮಾಡಬೇಕು. ಅದರಲ್ಲಿ ೬೪ ತೊಲಾ ನೀರು ಹಾಕಿ ಕುದಿಸಿ ೧೨ ತೊಲೆಗೆ ಇಳಿಸಬೇಕು. ಅದರಲ್ಲಿ ೧೨ ತೊಲಾ ಕೊಬ್ಬರಿ ಎಣ್ಣೆ ಹಾಕಿ, ಎಣ್ಣೆ ಮಾತ್ರ ಉಳಿಯುವವರೆಗೆ ಕುದಿಸಿ ಬಾಟ್ಟಿಯಲ್ಲಿ ಹಾಕಿ ಇಟ್ಟಿರಬೇಕು. ಈ ಎಣ್ಣೆ ಯನ್ನು ಸ್ವಲ್ಪ ತೆಗೆದುಕೊಂಡು ಲಿಂಗದ ಮೇಲೆ ಮೆಲ್ಲಗೆ ೧೦-೧೫ ಮಿನಿಟು