ಪುಟ:ಕಾಮದ ಗುಟ್ಟು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿ ೪, ಸ್ಥಾಯಾಗ್ರಾಹಕರು ಸದಸ್ಯರಾದನಂತರ ಅವರು ಅಂದಿನಿಂದ ಮುಂದೆ ಪ್ರಕಟವಾಗುವ ಎಲ್ಲ ಪುಸ್ತಕಗಳನ್ನೂ ತೆಗೆದುಕೊಳ್ಳಬೇಕಾಗು ವದು, ಹೊಸಪುಸ್ತಕಗಳು ಪ್ರಕಾಶಿತವಾದಬಳಿಕ ಸದಸ್ಯರಿಗೆ ಮೊದಲು ಸೂಚನೆಯನ್ನು ಕೊಟ್ಟು, ಬಳಿಕ ಎರಡುವಾರಗಳೊಳಗಾಗಿ ಅವರಿಗೆ ವಿ. ಪಿ. ಯನ್ನು ಕಳುಹಿಸಲಾಗುವುದು. ಯಾರಾದರೂ ಸದಸ್ಯರು ಏ.ಪಿ ಯನ್ನು ವಾಪಸು ಮಾಡಿದರೆ, ಅದರ ಖರ್ಚನ್ನು ಅವರವರ ಪ್ರವೇಶಧನದಿಂದ ಕಳೆಯಲಾಗುವುದು, ಮತ್ತು ಅವರ ಹೆಸರನ್ನು ಸದಸ್ಯರ ಪಟ್ಟಿಯಿಂದ ತೆಗೆದುಹಾಕಲಾಗುವುದು, ೭, ಆನಂತರ ಪುನಃ ಪುಸ್ತಕಗಳನ್ನು ಸದಸ್ಯರು ರಿಯಾಯಿತಿ ಬೆಲೆಗೆ ಪಡೆಯಬೇಕಾದರೆ ಎ. ಪಿ, ಹಿಂತಿರುಗಿಬಂದುದರಿಂದ ನಮಗೆ ಆಗುವ ನಷ್ಟವನ್ನು ಕಳುಹಿಸಿಕೊಟ್ಟು, ಸದಸ್ಯರಪಟ್ಟಿ ಯಲ್ಲಿ ಮತ್ತೆ ಹೆಸರು ಬರೆಯಿಸಿ ಪಡೆಯಬಹುದು. ೮, ಒಂದು ವರುಷದಲ್ಲಿ ಒಬ್ಬ ಸದಸ್ಯರು ಒಂದೇ ಬಗೆಯ ಪುಸ್ತಕವನ್ನು ನಾಲ್ಕಕ್ಕಿಂತ ಹೆಚ್ಚಾಗಿ ತರಿಸಲವಕಾಶವಿಲ್ಲ. ಈ ನಿಯಮಗಳಿಗೆ ಅನುಸಾರವಾಗಿ ನಮಗೆ ೧೦೦೦ ಜನ ಚಂದಾ ದಾರರು ದೊರೆತರೆ ವರ್ಷಕ್ಕೆ ಉತ್ತಮವಾದ ೪ ಪುಸ್ತಕಗಳಿಗೆ ಕಡಿಮೆಯಾಗ ದಂತ ಹೊರಡಿಸಬೇಕೆಂಬ ಬಲವಾದ ಕುತೂಹಲವು ನಮಗಿದೆ. ಕರ್ನಾಟಕ ದಲ್ಲಿ ಅಪೂರ್ವಗ್ರಂಥಗಳ ಕೊರತೆಯಿದೆ, ಈ ಕೊರತೆಯನ್ನು ಹೊಗ ಲಾಡಿಸುವ ಆಕಾಂಕ್ಷೆಯೂ ಬಲವಾಗಿದೆ. ಈ ಇಚ್ಛೆಗಳು ಪೂರೈಸುತ್ತ ಬಂದರೆ ಕನ್ನಡಿಗರ ಶಿಕ್ಷಣವು ಹೆಚ್ಚುವದು, ಮಾತ್ರವೇ ಅಲ್ಲದೆ ಉತ್ತಮ ಬರೆಹಗಾರರಿಗೂ ಲಾಭವಾಗಿ ಪ್ರೋತ್ಸಾಹವು ದೊರೆಯುವದು, ಹಾಗೇ ಯೋಗ್ಯ ಸಾಹಿತ್ಯವೂ ಹೆಚ್ಚು ವದು, ಪ್ರೇಮ ಸಾಹಿತ್ಯ ಸಂಘ, ಪ್ರೇಮಾಯತನ, ತುಂಗಭದ್ರಾ (ಬಳ್ಳಾರಿ ಜಿಲ್ಲಾ).