ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೇಮ ವಿದ್ಯಾಪೀಠ ತುಂಗಭದ್ರಾ, ಪ್ರತಿ ವರ್ಷದಂತೆಯೇ ಬರುವ ಜೂಲ್ಯಾ ತಿಂಗಳ ೧೫ಕ್ಕೆ ವೈದ್ಯ ವಿದ್ಯೆಯನ್ನು ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಪ್ರವೇಶವು ದೊರೆಯುವದು. ಈ ಕಳೆದ ೧೦ ವರ್ಷಗಳಿಂದ ಎಷ್ಟೋ ಯುವಕ ಯುವತಿಯರು ತೇರ್ಗಡೆ ಹೊಂದಿ ಜ್ಞಾನ, ಮಾನ, ಸ್ವತಂತ್ರ ಜೀವ ನೋಪಾಯಗಳಿಂದ ತಾವೂ ಸುಖದಿಂದಿದ್ದು ಇತರರಿಗೂ ಹಿತವ ನೊದಗಿಸಿಕೊಡುತ್ತಿದ್ದಾರೆ. ಬಿರುದು (ಡಿಗ್ರಿ) ಗಳೂ ತೇರ್ಗಡೆ ಹೊಂದಿದವರಿಗೆ ಕೊಡಲ್ಪಡುವವು. • ಮೆಟ್ರಿಕ್ ಪರೀಕ್ಷೆ ವರೆಗೆ ಅಭ್ಯಾಸವನ್ನು ಮಾಡಿದವರಿಗೆ ಎರಡೇ ವರ್ಷಗಳ ಅಭ್ಯಾಸ ಇಲ್ಲಿ ಬೇಕಾದುದು. ಹೆಚ್ಚಿನ ಮಾಹಿತಿ ಗಾಗಿ ಮೇಲಿನ ವಿಳಾಸಕ್ಕೆ ಬರೆಯಿರಿ. (ಒಂದಾಣೆ ಪೋಸ್ಟಲ್ ಟಿಕೀಟು ಕಳಿಸಬೇಕು ಉತ್ತರಕ್ಕಾಗಿ). ಚಿಕ್ಕ ಹುಡುಗ ಹುಡುಗಿಯರ ಶಿಕ್ಷಣಕ್ಕೂ ಸರ್ವೋತ್ಕೃಷ್ಟ ವ್ಯವಸ್ಥೆಯಿದೆ. ಮಕ್ಕಳನ್ನು ಕಳಿಸಲಿಚ್ಛಿಸುವವರು ಬರೆದು ತಿಳಕೊಳ್ಳ ಬಹುದು,