ಪುಟ:ಕಾಮದ ಗುಟ್ಟು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಹುಮೂತ್ರ (ಮೂತ್ರದಲ್ಲಿ ಸಕ್ಕರೆ ಹೋಗುವದು) ನಾವೇ ಬರೆದರೆ ಆತ್ಮಸ್ತುತಿಯನ್ನು ಮಾಡಿಕೊ೦ಡ೦ತಾದೀತು, ಆದ ಕಾಗಿ ಇತರರು ಕೊಟ್ಟ • ಸರ್ಟಿಫಿಕೇಟ್ ಗಳನ್ನು ಓದಿ ಮನವರಿಕೆ ಮಾಡಿ Iಳ್ಳುವದುತ್ತಮವಲ್ಲವೆ ? ೧. ನಾನು ತುಂಗಭದ್ರಯ ಪ್ರೇಮಾಯತನದಲ್ಲಿ ಚಿಕಿತ್ಸೆಯನ್ನು, ಹೊಂದುತ್ತಿದ್ದೆನು. ನನಗೆ ಬಹುಮೂತ್ರದ ಬಾಧೆ, ಚರ್ಮರೋಗದ ಹಿಂಸೆ. ನಾನಿಲ್ಲಿ ಚಿಕಿತ್ಸೆಯಿಂದ ಎರಡು ರೋಗಗಳಿಂದಲೂ ಮುಕ್ತನಾ ದೆನು. ದೊಡ್ಡ ದೊಡ್ಡ ವೈದ್ಯ ಡಾಕ್ಟರ್ ಹಕೀಮರು ಕೈಬಿಟ್ಟ ಕಠಿಣರೋಗ ಗಳು ಸಹ ಇಲ್ಲಿ ವಾಸಿಯಾದದ್ದನ್ನು ನಾನಿಲ್ಲಿರುವಾಗ ಕಣ್ಣಾರೆ ಕಂಡಿದ್ದೇನೆ. ಬಳ್ಳಾರಿ, ) ವೆಂಕಟಸುಬ್ಬರಾವ್, ಬಿ.ಎ., 23-4-28 ||

  • ಸಬ್‌ರಿಜಿಸ್ಟ್ರಾರ್ ೨. ನನಗೆ ಬಹು ಕೆಟ್ಟ ಬಹುಮತ್ರ. ಅದರಿಂದ ಬಲಗೈ ಬೆರಳಿನಿ೦ರ ಕಂಕುಳದವರೆಗೆ ಕೊಳತು ಹುಣ್ಣುಗಳಾಗಿದ್ದವು. ಹೈದರಾಬಾದಿನ ಅನೇಕ ಪ್ರಸಿದ್ದ ಡಾಕ್ಟರ್, ವೈದ್ಯ, ಹಕೀಮ ಇತ್ಯಾದಿಗಳ ಚಿಕಿತ್ಸೆಯಾಯಿತು ಏನೂ ಕಡಿಮೆಯಾಗಲಿಲ್ಲ. ಪ್ರಮುಖ ಸರ್ಜನ್‌ಗಳವರು ಕೈಯನ್ನ. ಕೊಯಿಸಬೇಕೆಂದರು. ಈ ವೃದ್ಧಾಪ್ಯದಲ್ಲಿ ಮನಸ್ಸು ಒಪ್ಪಲಿಲ್ಲ. ಸ್ನೇಹಿತ ರೊಬ್ಬರು ತುಂಗಭದ್ರೆಯ ಆಶ್ರಮಕ್ಕೆ ಕರಕೊಂಡು ಬಂದರು. ಚಿಕಿತ್ಸೆಯು ಮೊದಲಾಯಿತು. ಮೂತ್ರದ ಸಕ್ಕರೆಯು ವಾರದೊಳಗೇ ಕಡಿಮೆ ಯಾಯಿತು, ಪಂಡಿತ ತಾರಾನಾಥರು ಎಂದಂತೆ ಈಗ ೪ ತಿಂಗಳೊಳಗೆ ಕೈ ಸಹ ವಾಸಿಯಾಯಿತು, ಸರ್ಜನರು ಕತ್ತರಿಸಿ ಬಿಸುಟಬೇಕೆಂದಿದ್ದ ಕೈಯಿಂದಲೇ ನಾನೀಗ ನನ್ನ ಕೆಲಸವನ್ನು ಮಾಡುತ್ತಿದ್ದೇನೆ.

ಈ ನಾಲ್ಕು ತಿಂಗಳಲ್ಲಿ ನಾನೀ ಆಶ್ರಮಕ್ಕೆ ಹಲವು ಹಳೆರೋಗಿಗಳನ್ನು ಕಳಿಸಿದ್ದೇನೆ. ತಪ್ಪದೆ ಎಲ್ಲರೂ ವಾಸಿಮಾಡಿಕೊಂಡು ಹೋಗಿದ್ದಾರೆ. ನಾ ನರಿಯುವ ರೋಗಿಗಳನ್ನು ಈ ಆಶ್ರಮಕ್ಕೆ ಕಳಿಸಿಕೊಡುವದು ನನ್ನ ದೊಂದು ಧರ್ಮವೇ ಎಂದು ನಾನಿತ್ತೀಚೆಗೆ ಇಟ್ಟು ಕೊಂಡಿದ್ದೇನೆ. ಜಿಯಾಉಲ್ ಹಕ್, 10-1-32 ಸ. ಇಂಜಿನಿಯರ್-ಭೌನಗೀರ್, ಹೈದರಾಬಾದ್ (ದ)