ಪುಟ:ಕಾಳೀಸ್ವಯಂವರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

--- ೩ ---

ಲೋಸುಗ, ಅತ್ಯಾತುರದಿಂದ ಮುಕರಿಕೊಳ್ಳುವದನ್ನು ನೋಡಿ
ಬಹು ಆನಂದವಾಗುವದು.
೨.ಈ ಕೀರ್ತನ, ಮಾಲಾಕಾರನಾದ ಜೀಯನು
ಪ್ರೇರಿಸಿದಂತೆ ಎಷ್ಟು ತೊಂದರೆಗಳು ಬಂದಾಗ್ಗ್ಯೂ, ಆ ಜೀಯನ
ಸಹಾಯದಿಂದಲೇಯೆ ಕ್ರಮೇಣವಾಗಿ ಈ ವರಿಗೆ ಎರಡು
ಮೂರಾಂಶ ಮಾಲೆಯು ಸಿದ್ಧವಾಗಿರುವದು. ಇನ್ನು ಮುಂದೆ
ಒಂದು ಮೂರಾಂಶ ಭಾಗದಲ್ಲಿ, ಪ್ರಫುಲ್ಲಿತವಾದ ಸಪ್ತಸುಮ
ನಸಗಳ ಜೋಡಣೆ ಇರುವದು, ಮುಂದೆ ಪ್ರತಿಯೊಂದು ಪುಷ್ಪ
ವನ್ನು ಬೇರೆ ಬೇರೆಯಾಗಿ ಮಾಲೆಗೆ ಕಟ್ಟಲು ಅವಕಾಶವಾಗು
ವದು. ಆದರೆ ಈ ಅವಕಾಶದಲ್ಲಿ ಅರಳಿದ ಮನೋಹರ ಪುಷ್ಪ
ಗಳು ಬಾಡಿಹೋಗುವ ಸಂಭವವೂ ಒದಗುವದೆಂಬ ಭಾವನೆ
ಉಂಟಾದರೂ ಆಗಬಹುದು, ಆದರೂ, ಶ್ರೀಮತ್ಪೂಜ್ಯ ಶ್ರೀ
ಪ್ರಾಣೇಶ ದಾಸಾರ್ಯರು, ಈ ಸುಮನಸಗಳಲ್ಲಿದ್ದ ಅಮೃತ
ವನ್ನು ಶ್ರೀ ಮಧ್ವೇಶನಿಗೆ ಅರ್ಪಿಸಿದ ಕಾರಣ ಅಮೃತವು
ಮತ್ತೂ ಹೆಚ್ಚು ಸುಸ್ವಾದೋಪೇತವಾಗಿ, ಪುಷ್ಪಗಳ ಕಳೆಯು
ಹೆಚ್ಚುವದಲ್ಲದೆ, ಎಂದೆಂದಿಗೂ ಬಾಡುವ ಸಂಭವವೇ ಇಲ್ಲ.
ಹಾಗೂ ದಾಸಾರ್ಯರು, ತನ್ನಗೆ ಅರ್ಪಿಸಿದ ಪುಷ್ಪಗಳನ್ನು,
ಬಾಡದಂತೆ, ತನ್ನವೆಂದು ಭಾವಿಸಿ, ಕಾದುಕೊಂಡಿರುವಲ್ಲಿ
ಮಾಲಾಕಾರನಾದ ಜೀಯನಾದರೂ ಅನಾದಿಕಾಲದಿಂದ ಬಹು
ನಿಪುಣನಾಗಿರುವನೆಂಬುವದಕ್ಕೆ ಸಂದೇಹವಿಲ್ಲಾ. ಇಂತು
ದ್ವಂದ್ವಹೀಯಾತ್ಮಕನಾದ ಇಂದಿರೇಶನ ಚರಣಗಳಿಗೆ ಈ
ಕೀರ್ತನಮಾಲಾಗತ, ದ್ರವ್ಯತ್ರಯಗಳನ್ನು ಅವನ ಶಕ್ತಿತ್ರಯ