ಈ ಪುಟವನ್ನು ಪರಿಶೀಲಿಸಲಾಗಿಲ್ಲ.
--- ೪ ---
ದಿಂದಲೇಯೆ, ಈ ದ್ವಂದ್ವಾರ್ಥಬೋಧಕನಿಬಂಧದ್ವಾರಾ
ಅರ್ಪಿಸಿ, ಮುಂದೆ, ಆ ಮಾಲಾಬಂಧನಕಾರನನ್ನೆ, ಹಿಂಬಾ
ಲಿಸುವ.
೩.ಇದು- ಆರನೇ ಪುಪ್ಪವು ಅನೇಕ ವಿಷ್ಣು ರಹಸ್ಯ
ಗಳೆಂಬ ಮಕರಂದದಿಂದ ಪೂರಿತವಾದ "ಕಾಳೀಸ್ವಯಂ
ವರ ಕಥೆಯು" ಶ್ರೀಮನ್ಮಹಾಭಾರತ ಆದಿಪರ್ವ ಕಥಾನು
ಕ್ರಮವಾಗಿ, ಶ್ರೀಮದಾಚಾರ್ಯರಿಂದ ವಿರಚಿತವಾದ ಮಹಾ
ಭಾರತ ತಾತ್ಪರ್ಯನಿರ್ಣಯ ೨೦ನೇ ಅಧ್ಯಾಯ, ೧೨ನೇ
ಶ್ಲೋಕ ಆರಂಭಿಸಿ ೨೮ನೇ ಶೌಕ ಪರಿಯಂತ (೧೬) ಶ್ಲೋ
ಕಾಭಿಪ್ರಾಯದ ನಿರ್ಣಿತ ಕಥೆಯು; ಬಹು ಸರಸವಾಗಿಯೂ
ಭಕ್ತ್ಯಾತಿಶಯಗಳನ್ನುಂಟುಮಾಡುವದಾಗಿಯೂ, ರಚಿಸಿರುವ
ರೆಂಬುದು ದಾಸಾರ್ಯರು ರಚಿಸಿದ ಪದ್ಯಗಳ ಮೇಲಿಂದ
ಲೇ ಅಭಿವ್ಯಕ್ತವಾಗುತ್ತಲಿದೆ. ಮುಖ್ಯವಾಗಿ, ವಿಷ್ಣು ಧರ್ಮ
ಳೆಂಥವೆಂಬುವದು; ತಿಳಿಸುವದೇ ಈ ಕಥೆಯ ಮಥಿ
ತಾರ್ಥವು.
೪. ಬಹುಜನರು, ಈ ವರಿಗೆ ಆಕ್ಷೇಪಿಸಿರುವದೇನಂದರೆ
(I)ಈ ಕಾಳಿದೇವಿಯು ಯಾರು, ಯಾವ ದೇವ
ತೆಯು?
(II)ಭೀಮಸೇನ ದೇವರ ಕೊರಳಲ್ಲಿ ಮಾಲಾ
ಹಾಕಲಿಕ್ಕೆ ಕಾರಣವೇನು? ಮತ್ತು
(III)ಶ್ರೀಮದಾಚಾರ್ಯರು ರಚಿಸಿದ ಮೂಲ
ನಿರ್ಣಯ, ಶ್ಲೋಕದಲ್ಲಿ ಇಲ್ಲದೇ ಇದ್ದ ಅಛಿ