ಪುಟ:ಕಾಳೀಸ್ವಯಂವರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧೦ - ಕಣ್ಣು ಕಟ್ಟಿಕೊಂಡು ಮಾಲೆಯು ಹಾಕಿದಳೆಂದು, ಇಲ್ಲ, ಇದಕ್ಕಾದರೂ ಕಾರಣ ಉಂಟು. ಸಾಕ್ಷಾತ ಭಾರತಿದೇವಿ ಯವರಿಗೆ ಯಾವ ಕಾಲದಲ್ಲಿಯೂ ಜಗತ್ತಿನ ವಿಷಯ ಅಜ್ಞಾ ನವು, ಮತ್ತು ನೈಜವಾಗಿದ್ದ ಜ್ಞಾನತಿರೊಹಿತವು ಎಂದಿಗೂ ಇಲ್ಲ. ಇದೇ ಕಾರಣದಿಂದಲೇಯೇ ನಿರ್ಣಯಾಚಾರ್ಯರು, ಸಾತ್ವಿಕರು ಸಂದೇಹಕ್ಕೊಳಗಾಗದಂತೆಯೂ, ಮತ್ತು ಶ್ರೀ ಹರಿ ಸರ್ವೋತ್ತು ಮತ್ತ್ವ ವಾಯುಜೀವೋತ್ತು ಮತ್ತೆ ಸಮರ್ಥನ ಮಾಡತಕ್ಕ ಅನೇಕ ಉಪ ಪುರಾಣಕಥೆಗಳಿಗನುಸರಿಸಿ, ನಿರ್ಣಿತ ವಾದ ಮಥಿತಾರ್ಥವನ್ನು ತೆಗದಿರುವರು. ಕಾರಣ ಕಾಳಿ ಸ್ವಯಂವರ ಕಾಲದಲ್ಲಿ, ಮಿಳಿತರಾದ ಅಜ್ಜ ರಾಜರುಗಳಲ್ಲಿ ಕಲಹ ಉಂಟಾಗಬಾರದೆಂತಲೂ, ಮತ್ತು ಈ ಕಾಳಿದೇವಿಯು ಭಾರತಿದೇವಿಯಂದು ಈ ಗುಹ್ಯತರವಾದ ರಹಸ್ಯವನ್ನು ಆ ಅಜ್ಞ ರಾಜರುಗಳಿಗೆ ತಿಳಿಯಗೊಡಬಾರದೆಂತಲೂ, ಕಾಶಿರಾಜನು ಈ ಆಲೋಚನೆಯನ್ನು ಮಾಡಿದನೆಂದು ಸ್ವಾದೀ ಗುರುರಾಜ ರಾದ, ಶ್ರೀ ಮದ್ವಾದಿರಾಜಸ್ವಾಮಿಗಳವರು, ರಚಿಸಿದ ಕನ್ನಡ ಶ್ರೀಮನ್ಮಹಾಭಾರತ ತಾತ್ಪರ್ಯ ೨೦ನೇ ಅಧ್ಯಾಯದಲ್ಲಿ, ವಿವರಿಸಿರುವದೇನಂದರೆ: “ ಆದಿಪರ್ವ ಭಾರತ ಕಥೆಯು, ತರುವಾಯ ಕಾಶೀರಾಯನ ಮಗಳು, ಅಚ್ಚ ಭಾರತಿಯ ಅವತಾರ, ಅಕಿಯ ಹೆಸರು ಕಾಳಿದೇ ವಿಯು, ಕಾಶೀರಾಯನು ಆ ಕಾಳಿದೇವಿಯ ಸಮಾರಂಭವನ್ನು ಆರಂಭಿಸಿ ಜರಾಸಂಧಾದಿ ಸಮಸ್ತ ರಾಯರನ್ನೆಲ್ಲಾ ಕರಿಸಿ, ಸಭಾ ಮಾಡಿ ಕಣ್ಣು ಮುಚ್ಚಿಕೊಂಡು ಯಾರಿಗೆ ಮಾರಿ ಹಾಕಾಳೊ